Advertisement
ಸರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶತಮಾನ ಕಂಡ ರಾಜ್ಯದ 143 ಸರಕಾರಿ ಶಾಲೆಗಳಿಗೆ 20 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಬೆಳಗಾವಿ ಜಿಲ್ಲೆಯ 5 ಶಾಲೆಗಳನ್ನು ಅನುದಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಆದರೆ ಚಿಕ್ಕೋಡಿ ಶೆ„ಕ್ಷಣಿಕ ಜಿಲ್ಲೆಯಲ್ಲಿನ ತೆಲಸಂಗದಲ್ಲಿನ 151 ವರ್ಷದ ಹಳೆಯ ಶಾಲೆ ಅಭಿವೃದ್ಧಿಗಾಗಿ ಬಾಯೆ¤ರೆದು ನಿಂತಿದ್ದರೂ ಪಟ್ಟಿಯಿಂದ ಹೆಸರು ಕೈ ಬಿಟ್ಟಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.1871ರಲ್ಲಿ ಪ್ರಾರಂಭವಾದ ಜಿಲ್ಲೆಯಲ್ಲಿಯೇಅತ್ಯಂತ ಹಿರಿಯದಾದ ಸರಕಾರಿ ಶಾಲೆ ಇದು. ಇಂದು ದಯನೀಯ ಸ್ಥಿತಿ ತಲುಪಿದ್ದು, ಇಲ್ಲಗಳ ಸರಮಾಲೆಗೆ ಈ ಕನ್ನಡ ಶಾಲೆ ನಲುಗಿ ಹೋಗಿದೆ. ಹೆಸರಿಗೆ ಮಾತ್ರ ಶಾಸಕರ ಮಾದರಿ ಶಾಲೆ ಇದಾಗಿದೆ ಎಂದು ಜನ ದೂರುತ್ತಿದ್ದಾರೆ.
Related Articles
Advertisement
ಎಂ.ಎಲ್.ಎ.,ಎಂಪಿ, ಎಂಎಲ್‌ಸಿ ಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡುತ್ತಾರೆ. ಬಡ ಮಕ್ಕಳು ಓದುವ ಸರಕಾರಿ ಶಾಲೆಗೇಕೆ ನೀಡುತ್ತಿಲ್ಲ?ಗ್ರಾಮ 20 ಸಾವಿರ ಜನಸಂಖ್ಯೆ ಹೊಂದಿದರೂ ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿಲ್ಲ. ಅಧಿ ಕಾರಿ ಹಾಗೂ ಜನಪ್ರತಿನಿ ಧಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲಿನ ಪ್ರೀತಿಗೆ ಶತಮಾನ ಕಂಡ ಶಾಲೆ ಬಡವಾಗಿದೆ. ಬಡ ಮಕ್ಕಳು ಪರದೇಶಿಗಳಂತಾಗಿದ್ದಾರೆ. ಬಡವರ ಮನವಿಗೆ ಯಾರೊಬ್ಬರೂ ಕಿವಿಗೊಡುತ್ತಿಲ್ಲ.ಅಪ್ಪು ಜಮಾದರ, ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಇಲ್ಲಿಯ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಶತಮಾನೋತ್ಸವ ಆಚರಿಸಲು ಸಭೆ ಸೇರಿ ಸಿದ್ದತೆಯನ್ನೂ ನಡೆಸಿದ್ದರು. ಆದರೆ ಅಭಿವೃದ್ಧಿ ಹೊಂದಿರದ ಶಾಲೆಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡರೆ ಅಪಮಾನವಾಗುತ್ತದೆ. ಹೀಗಾಗಿ ಮೊದಲು ಅಭಿವೃದ್ಧಿ ಪಡಿಸೋಣ. ನಂತರ ಶತಮಾನೋತ್ಸವ ಆಚರಿಸೋಣ ಎಂದು ತೀರ್ಮಾನಿಸಲಾಯಿತು. ಈಗ 151 ವರ್ಷ ಕಳೆದರೂ ಮತ್ತೆ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಬಿ.ಎಚ್.ಶೆಲ್ಲೆಪ್ಪಗೋಳ, ಮುಖ್ಯಶಿಕ್ಷಕ ತೆಲಸಂಗ. *ಜೆ.ಎಮ್.ಖೊಬ್ರಿ