Advertisement

ಜಪಾನ್‌ನಲ್ಲೊಂದು ಮಾದರಿ ಹೊಟೇಲ್‌

12:29 AM Feb 09, 2020 | Sriram |

ದೇಶದ ನಗರಗಳ ಅಭಿವೃದ್ಧಿಗಾಗಿ ಆಡಳಿತ ವ್ಯವಸ್ಥೆ ಜಾರಿಗೊಳಿಸಿದ ಹಲವಾರು ಯೋಜನೆಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಕೂಡ ಪ್ರಮುಖವಾದುದು. ದೇಶದ ಹಲವು ನಗರಗಳು ಈ ಯೋಜನೆಗೆ ಆಯ್ಕೆಯಾಗಿದ್ದು ಅವುಗಳ ಅಭಿವೃದ್ಧಿ ಪಣತೊಡಲಾಗುತ್ತಿದೆ. ಸಂಚಾರ ವ್ಯವಸ್ಥೆ, ಮೂಲಸೌಲಭ್ಯ, ಆರೋಗ್ಯ ಸಹಿತ ಪ್ರವಾಸೋದ್ಯಮದ ಅಭಿವೃದ್ಧಿಯ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ.

Advertisement

ಪ್ರವಾಸೋದ್ಯಮವು ನಗರದ ಅಭಿವೃದ್ಧಿಯಲ್ಲಿ ಪ್ರಮುಖ ಆದ್ಯತೆಯಾಗಿದೆ. ಈ ಕ್ಷೇತ್ರವೂ ಉತ್ತಮ ಆದಾಯ ತರಬಲ್ಲ ಹಾಗೂ ನಗರವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ನಮ್ಮ ನಗರಗಳನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಾದರೆ ಮೊದಲು ಪ್ರಾಥಮಿಕವಾಗಿ ನಗರದಲ್ಲಿ ಮೂಲಸೌಲಭ್ಯ, ಸಂಚಾರ, ರಸ್ತೆಗಳು ಮತ್ತು ವಸತಿ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬೇಕು. ಏಕೆಂದರೆ ಪ್ರವಾಸಿಗರು ನಮ್ಮ ನಗರಕ್ಕ ಭೇಟಿ ನೀಡಿದಾಗ ರಸ್ತೆಗಳು ಚೆನ್ನಾಗಿರಬೇಕು, ಕುಡಿಯುವ ನೀರು, ಆಹಾರ ಎಲ್ಲ ಚೆನ್ನಾಗಿದ್ದರೆ ಆರೋಗ್ಯದ ನಿಟ್ಟಿನಲ್ಲಿ ಪ್ರವಾಸಿಗರಿಗೆ ಗಮನಸೆಳೆಯುತ್ತದೆ. ಅಂತೆಯೇ ಮೂಲವಾಗಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡಿದಾಗ ಅವರು ವಾಸವಾಗುವುದು ಹೊಟೇಲ್‌ಗ‌ಳಲ್ಲಿ. ಈ ಹೊಟೇಲ್‌ಗ‌ಳು ಕೂಡ ವಾಸಯೋಗ್ಯವಾಗಿ ಇರಬೇಕು. ನಗರದಲ್ಲಿ ಈಗ ಇರುವ ಹೊಟೇಲ್‌ಗ‌ಳು ವಾಸಯೋಗ್ಯವಾಗಿಲ್ಲ ಅಂತೇನಿಲ್ಲ, ಆದರೆ ಮಾದರಿಯಾಗಿ ಹೊಟೇಲ್‌ಗ‌ಳನ್ನು ನಿರ್ಮಿಸಬಹುದು ಎಂಬುವುದು ನಾವು ಜಪಾನ್‌ನಲ್ಲಿ ನಿರ್ಮಿಸಲಾದ ಹೊಟೇಲ್‌ನೊಂದನ್ನು ನೋಡಿ ಕಲಿಯಬಹುದಾಗಿದೆ.

ಈ ಹೊಟೇಲ್‌ನ ವಿಶೇಷತೆ ಏನು?
ನಾಗಸಾಕಿಯ ಈ ಖಾಸಗಿ ಹೊಟೇಲ್‌ ಮಾದರಿಯಾಗಿದ್ದು ಈ ಬಹುತೇಕವಾಗಿ ತಾಂತ್ರಿಕವಾಗಿ ಕಾರ್ಯ ನಿರ್ವಹಣೆ ಮಾಡುತ್ತದೆ. ಇಲ್ಲಿ ಬಹುತೇಕ ರೊಬೋಟ್‌ಗಳು ಪ್ರವಾಸಿಗರನ್ನು ಉಪಚರಿಸುತ್ತವೆ. ಅಲ್ಲದೇ ಈ ಹೊಟೇಲ್‌ನಲ್ಲಿ ಉಪಯುಕ್ತವಾದ ಮಾದರಿ ಗ್ರಂಥಾಲಯವಿದ್ದು, ಜಪಾನ್‌ ದೇಶಕ್ಕೆ ಸಂಬಂಧಿಸಿದ ಹಲವಾರು ಮಹತ್ವದ ಪುಸ್ತಕಗಳನ್ನು ಇಲ್ಲಿ ನೋಡಬಹುದಾಗಿದೆ. ಸ್ವತ್ಛಂದ‌ವಾದ ಶುದ್ಧಗಾಳಿ ಸಹಿತ ಪರಿಸರ ಪೂರಕವಾಗಿ ಈ ಹೊಟೇಲ್‌ನ್ನು ನಿರ್ಮಿಸಲಾಗಿದೆ.

ಈ ಹೊಟೇಲ್‌ನ ಗೋಡೆ ಮತ್ತು ಮಂಚಗಳನ್ನು ಕೂಡ ಮರದಿಂದ ನಿರ್ಮಿಸಲಾಗಿದೆ. ಇದು ಪರಿಸರಕ್ಕೆ ಪೂರಕವಾಗಿದೆ. ಇದೊಂದು ಮಾದರಿ ಯೋಜನೆಯಾಗಿದೆ. ಹೊಟೇಲ್‌ನಲ್ಲಿ ನೀರನ್ನು ಕೂಡ ಸುವ್ಯಸವಸ್ಥಿತವಾಗಿ ಬಳಕೆ ಮಾಡಬೇಕಾಗುತ್ತದೆ. ಇಲ್ಲಿ ಬಳಕೆಯಾದ ನೀರನ್ನು ಕೂಡ ಮರುಬಳಕೆ ಮಾಡಲಾಗುತ್ತದೆ. ಹೀಗಾಗಿ ಈ ಹೊಟೇಲ್‌ ಕೇವಲ ಪ್ರವಾಸಗರಿಗೆ ಉತ್ತಮ ವಸತಿ ನೀಡುವುದು ಅಷ್ಟೇ ಅಲ್ಲದೇ ಗ್ರಂಥಾಲಯದಿಂದ ಜ್ಞಾನ, ಪರಿಸರ ಮತ್ತು ಸುಸ್ಥಿರ ಜೀವನದ ಪಾಠವನ್ನು ಹೇಳಿಕೊಡುತ್ತದೆ.

ಈ ವಿಚಾರವೂ ಕೂಡ ನಾವು ನಮ್ಮ ನಗರಗಳು ಕೂಡ ಅಳವಡಿಸಿಕೊಳ್ಳಬೇಕಿದೆ. ದೇಶದಲ್ಲಿ ಹಲವಾರು ಮಾದರಿಯಾದ ಹೊಟೇಲ್‌ಗ‌ಳನ್ನು ಕೂಡ ನಿರ್ಮಿಸಲಾಗಿದೆ. ಈ ಜಪಾನ್‌ನ ನಾಗಸಾಕಿಯಲ್ಲಿ ನಿರ್ಮಾಣವಾದ ಹೊಟೇಲ್‌ ಕೂಡ ಕೆಲವೊಂದು ವಿಚಾರದಲ್ಲಿ ಮಾದರಿಯಾಗಲಿ.

Advertisement

ಕರಾವಳಿ ನಗರ ಮಂಗಳೂರು ಸ್ಮಾರ್ಟ್‌ ಸಿಟಿ ನಗರವಾಗಿದ್ದು ಪ್ರವಾಸೋದ್ಯಮಕ್ಕೆ ಹಲವಾರು ಅವಕಾಶಗಳಿವೆ. ಪ್ರವಾಸಿಗರೂ ಕೂಡ ಅಷ್ಟೇ ಪ್ರಮಾಣದಲ್ಲಿ ಭೇಟಿ ನೀಡುತ್ತಾರೆ. ಹಾಗಾಗಿ ನಾಗಸಾಕಿಯ ಹೊಟೇಲ್‌ ಮಾದರಿಯನ್ನು ನಮ್ಮ ನಗರದ ಹೊಟೇಲ್‌ಗ‌ಳು ಕೂಡ ಅಳವಡಿಸಿಕೊಳ್ಳಲಿ ಎಂಬ ಆಶಯವಷ್ಟೇ.

ಎಲ್ಲಿದೆ ಈ ಹೊಟೇಲ್‌
ಜಪಾನ್‌ ಪ್ರಮುಖ ನಗರವಾದ ನಾಗಸಾಕಿಯಲ್ಲಿ ನಿರ್ಮಾಣಗೊಂಡಿರುವ ಖಾಸಗೀ ಹೊಟೇಲ್‌ ಇದು ಜಗತ್ತಿನ ಬಹುತೇಕ ಹೊಟೇಲ್‌ಗ‌ಳಿಗೆ ಮಾದರಿ ನಿಟ್ಟಿನಲ್ಲಿ ನಿರ್ಮಾಣವಾಗಿದೆ. ಈ ಹೊಟೇಲ್‌ ಪರಿಸರ ಸ್ನೇಹಿ ಅಂಶಗಳನ್ನು ಅಳವಡಿಸಿಕೊಂಡಿದೆ. ಪ್ರವಾಸಿ ಗರಿಗೆ ಹೆಚ್ಚಿನ ಪ್ರಿಯವಾಗುವ ಹೊಟೇಲ್‌ ಇದಾಗಿದೆ.

-ಅಭಿನವ

Advertisement

Udayavani is now on Telegram. Click here to join our channel and stay updated with the latest news.

Next