Advertisement

ಹಳಿಯಾಳ ತೆರಗಾಂವ್ ಬಳಿ ಕೊಚ್ಚಿಹೋದ ರಸ್ತೆ

09:13 PM Aug 07, 2019 | sudhir |

ಕಾರವಾರ : ಕಾರವಾರ ಸೇರಿದಂತೆ ಜಿಲ್ಲೆಯ ಹಳಿಯಾಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಳಿಯಾಳ ತಾಲ್ಲೂಕಿನ ತೆರಗಾಂವ ಗ್ರಾಮದಿಂದ ಹುನ್ಸವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬಳಿ ಸುಮಾರು 15 ಅಡಿಗೂ ಅಧಿಕ ರಸ್ತೆ ನದಿಯ ನೀರಿನ ಸೆಳೆತಕ್ಕೆ ಸೇತುವೆ ಬಳಿ ರಸ್ತೆ ಕೊಚ್ಚಿ ಹೋಗಿದೆ.

Advertisement

ಇದರಿಂದ ತೆರಗಾಂವ ಹುನ್ಸವಾಡ ಗ್ರಾಮದ ಸಂಪರ್ಕ ಸಂಪೂರ್ಣ ಕಡಿತವಾಗಿದೆ.

ಇತ್ತ ಕಾರವಾರದ ಕದ್ರಾ ,ಮಲ್ಲಾಪುರ ಗ್ರಾಮಗಳಲ್ಲಿ ನುಗ್ಗಿದ ನದಿ ನೀರು ಇಳಿದಿಲ್ಲ. ಎರಡು ಅಡಿ ನೀರು ಹಾಗೇ ಇದೆ. ಕದ್ರಾ ಅಣೆಕಟ್ಟಿನಿಂದ ನಿರಂತರವಾಗಿ ನೀರು ನದಿಗೆ ಹರಿದಿದೆ. 1.5 ಲಕ್ಷ ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next