Advertisement

ಎಂದೂ ಮರೆಯಲಾಗದ ಸ್ವರ್ಣಮಂದಿರ, ಜಲಿಯನ್ ವಾಲಾಬಾಗ್, ವಾಘಾ ಗಡಿ ಪ್ರವಾಸ !

02:53 PM Sep 27, 2020 | Mithun PG |

ಸುಳ್ಯ: ರಾಷ್ಟ್ರಮಟ್ಟದ ಕ್ರೀಡಾ ಪಟುವಾಗಿದ್ದ ನಾನು ಅರಣ್ಯ ಅಭಿವೃದ್ದಿ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಪ್ರತಿ ವರ್ಷವೂ ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಲಾಗುತ್ತಿದ್ದ ರಾಷ್ಟ್ರೀಯ ಅರಣ್ಯ ಕ್ರೀಡಾ ಕೂಟದಲ್ಲಿ weight lifting, ಮತ್ತು ಅಥ್ಲೆಟಿಕ್ಸ್ ವಿಭಾಗದಲ್ಲಿ ಸ್ಪರ್ಧಿಯಾಗಿರುತಿದ್ದೆ. ಅಂತೆಯೇ 2008ರಲ್ಲಿ ಪಂಜಾಬ್ ರಾಜ್ಯದ ಚಂಡೀಗಢದಲ್ಲಿ ನಡೆಸಲಾದ 17ನೇ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ತಂಡದಲ್ಲಿದ್ದ ನಾನು, ನನ್ನ ಮಗನನ್ನೂ ಕೂಡ ಕರೆದುಕೊಂಡು ತೆರಳಿದ್ದೆ.

Advertisement

ಪ್ರತಿ ಬಾರಿ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆದಾಗ, ಕ್ರೀಡಾಪಟುಗಳು ಅಲ್ಲಿನ ಹತ್ತಿರದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೆವು. ಪಂಜಾಬಿನಲ್ಲಿ ನಡೆದ ಕ್ರೀಡಾಕೂಟ ಸಮಯದಲ್ಲೂ ಮೂರು ಪ್ರವಾಸಿ  ಸ್ಥಳಗಳಿಗೆ ತೆರಳಿ ಅಲ್ಲಿನ ಸೌಂದರ್ಯವನ್ನು ಆಸ್ವಾದಿಸಿದೆವು.

ಅಮೃತಸರದಲ್ಲಿರುವ ಶ್ರೀ ಹರ್ಮಂದಿರ್ ಸಾಹಿಬ್ ಅಥವಾ ಸ್ವರ್ಣಮಂದಿರಕ್ಕೆ ನಮ್ಮ ಮೊದಲನೇಯ ಭೇಟಿಯಾಗಿತ್ತು. 1589 ರಿಂದ 1604ರ ಅವಧಿಯಲ್ಲಿ ನಿರ್ಮಿಸಲಾದ, ಸಿಖ್ಖರ ಪವಿತ್ರ ಸ್ವರ್ಣ ಮಂದಿರವು ಸರೋವರದ ಮಧ್ಯದಲ್ಲಿ ಕಣ್ಮನ ಸೆಳೆಯುವ ರೀತಿಯಲ್ಲಿ ನಿರ್ಮಾಣವಾಗಿದೆ. ಸ್ವರ್ಣಮಂದಿರದ golden dome ಎಂಬುದು ಅಪ್ಪಟ 24 ಕ್ಯಾರೆಟ್ ಚಿನ್ನದಿಂದ ಮಾಡಿರುವುದಾಗಿದೆ. ಬಹಳ ಸೌಂದರ್ಯ ಭರಿತವಾದ ಮಂದಿರದಲ್ಲಿ ನೂರಾರು ಭಕ್ತರೊಂದಿಗೆ ಅಲ್ಲಿ ಕಳೆದ ಕ್ಷಣ ಸ್ಮರಣಿಯವಾಗಿತ್ತು.

Advertisement

ನಂತರ ತೆರಳಿದ್ದು ಚರಿತ್ರೆಯಲ್ಲಿ ಬ್ರಿಟಿಷ್ ಸೇನಾಧಿಕಾರಿಯೋರ್ವನ ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಥಳಕ್ಕೆ.  ಈ ಘಟನೆಯಲ್ಲಿ ನೂರಾರು ಮಂದಿ ಪ್ರಾಣತೆತ್ತರು ಎಂಬುದಕ್ಕೆ ಸಾಕ್ಷಿಯಾಗಿ  ಅಲ್ಲಿದ್ದ ಬುಲ್ಲೆಟ್ ಗಳ ಗುರುತು ಕಂಡಾಗ ಕಣ್ಣಾಲಿಗಳು ತೇವಗೊಂಡಿದ್ದವು.

ಮುಂದೆ ಅಮೃತಸರದಿಂದ ಸುಮಾರು 28 ಕಿ. ಮೀ ದೂರದಲ್ಲಿರುವ ವಾಘಾ ಬಾರ್ಡರ್ ಗೆ ನಮ್ಮ ಪ್ರಯಾಣ ಸಾಗಿತ್ತು. ಇಂಡಿಯಾ ಪಾಕಿಸ್ತಾನದ ಗಡಿ ಬಾಗಿಲು. ಸಾಯಂಕಾಲ 4.30 ರಿಂದ 5.30 ರ ಅವಧಿಯಲ್ಲಿ ನಡೆಯುವ ಎರಡು ದೇಶಗಳ ಧ್ವಜಾರೋಹಣ ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ಸೈನಿಕರ ಶೌರ್ಯ, ಧೈರ್ಯ, ಪರಾಕ್ರಮ ಎಲ್ಲವೂ ವರ್ಣನಾತೀತವಾದುದು.

  • ಎ. ರಮೇಶ್  ಸುಳ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next