Advertisement

EV ಚಾರ್ಜಿಂಗ್‌ಗೆ “ಮಾಸ್ಟರ್‌ ಆ್ಯಪ್‌”?: ಹೊಸ ಆ್ಯಪ್‌ ಅಭಿವೃದ್ಧಿಪಡಿಸಲು ಕೇಂದ್ರ ಚಿಂತನೆ

09:50 AM Jun 13, 2023 | Team Udayavani |

ದೇಶದಲ್ಲೀಗ ವಿದ್ಯುತ್‌ಚಾಲಿತ ವಾಹನಗಳ ಕಾರುಬಾರು ಹೆಚ್ಚಾಗಿದೆ. ಇವುಗಳು ಜನಪ್ರಿಯತೆ ಪಡೆಯುತ್ತಿದ್ದಂತೆ ಚಾರ್ಜಿಂಗ್‌ ಸ್ಟೇಷನ್‌ಗಳ ಸಂಖ್ಯೆಯೂ ಹೆಚ್ಚುತ್ತಿವೆ. ಇವಿ ಚಾರ್ಜಿಂಗ್‌ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ನಿಟ್ಟಿನಲ್ಲಿ ಈಗ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ. ಅದೇನು ಗೊತ್ತೇ?

Advertisement

ಇವಿ ಚಾರ್ಜಿಂಗ್‌ ಇನ್ನು ಸುಲಭ

ನಕ್ಷೆಯ ಮೂಲಕ ನಿಮ್ಮ ಸಮೀಪದಲ್ಲಿರುವ ವಿದ್ಯುತ್‌ಚಾಲಿತ ವಾಹನಗಳ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಪತ್ತೆಹಚ್ಚುವಂಥ ಮಾಸ್ಟರ್‌ ಆ್ಯಪ್‌ವೊಂದನ್ನು ಅಭಿವೃದ್ಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜೂ.7ರಂದು ನೀತಿ ಆಯೋಗವು ಇದಕ್ಕೆ ಸಂಬಂಧಿಸಿದ ಕಂಪನಿಗಳೊಂದಿಗೆ ಸಭೆಯನ್ನೂ ನಡೆಸಿದೆ. ಚಾರ್ಜಿಂಗ್‌ ಸ್ಟೇಷನ್‌ಗಳು ಎಲ್ಲೆಲ್ಲಿವೆ ಎಂಬುದನ್ನು ಕುಳಿತಲ್ಲಿಂದಲೇ ಹುಡುಕಿ, ಸೇವೆ ಪಡೆಯುವಂಥ ಅವಕಾಶವನ್ನು ಈ ಮಾಸ್ಟರ್‌ ಆ್ಯಪ್‌ ಕಲ್ಪಿಸಲಿದೆ. ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನ ಹಣಕಾಸು ನೆರವಿನಿಂದ ಈ ಯೋಜನೆ ಜಾರಿಗೆ ಬರಲಿದೆ. ಈ ಆ್ಯಪ್‌ ಅನ್ನು ಭಾರತ ಸರ್ಕಾರವೇ ನಿರ್ವಹಣೆ ಮಾಡಲಿದೆ.

ಅನುಕೂಲತೆ ಏನು?

– ನಿಮ್ಮ ಸಮೀಪದಲ್ಲಿ ಯಾವ ಚಾರ್ಜಿಂಗ್‌ ಸ್ಟೇಷನ್‌ ಲಭ್ಯವಿದೆ ಎಂದು ತಿಳಿದುಕೊಳ್ಳಬಹುದು.

Advertisement

– ಮುಂಚಿತವಾಗಿಯೇ ಸ್ಲಾಟ್‌ ಬುಕ್‌ ಮಾಡಿಕೊಳ್ಳಬಹುದು

– ಪಾವತಿಯನ್ನೂ ಮುಂಚಿತವಾಗಿಯೇ ಮಾಡಬಹುದು.

 

7,013- ದೇಶದ ಒಟ್ಟು ಚಾರ್ಜಿಂಗ್‌ ಸ್ಟೇಷನ್‌ಗಳು

1,000 ಕೋಟಿ ರೂ.- ಫೇಮ್‌ ಇಂಡಿಯಾ ಯೋಜನೆಯ 2ನೇ ಹಂತದಲ್ಲಿ ಚಾರ್ಜಿಂಗ್‌ ಮೂಲಸೌಕರ್ಯಕ್ಕೆ ಮೀಸಲಿಟ್ಟ ಮೊತ್ತ

2,877- ಮಂಜೂರಾಗಿರುವ ಚಾರ್ಜಿಂಗ್‌ ಸ್ಟೇಷನ್‌

Advertisement

Udayavani is now on Telegram. Click here to join our channel and stay updated with the latest news.

Next