Advertisement

‘ವಿಚಾರವಿಲ್ಲದ ಮನುಷ್ಯ ಜೋಳವಿಲ್ಲದ ತೆನೆಯಂತೆ’

11:03 AM Dec 15, 2021 | Team Udayavani |

ಭಾಲ್ಕಿ: ಆಧ್ಯಾತ್ಮಿಕ ವಿಚಾರವಿಲ್ಲದ ಮನುಷ್ಯ ಜೋಳವಿಲ್ಲದ ತೆನೆಯಂತೆ ಇರುವನು ಎಂದು ಮಹಾರಾಷ್ಟ್ರದ ವಿರಕ್ತಮಠ ನೀಲಂಗಾ ಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಚನ್ನಬಸವಾಶ್ರಮದಲ್ಲಿ ಮಂಗಳವಾರ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಠದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜೀವನದಲ್ಲಿ ಭಕ್ತಿ ತುಂಬ ಮುಖ್ಯ. ಭಕ್ತಿ ಇಲ್ಲದಿದ್ದರೆ ಜೀವನ ಜಲವಿಲ್ಲದ ಕೆರೆ, ಫಲವಿಲ್ಲದ ಬನವಿದ್ದಂಗೆ. ಭಕ್ತನಿಲ್ಲದ ಗ್ರಾಮ ಸುಡುಗಾಡು ಕಾಣಯ್ನಾ ಎಂದು ಶರಣರು ಹೇಳಿದ್ದಾರೆ. ಜಲವಿಲ್ಲದಿದ್ದರೆ ಕೆರೆಗೆ, ಫಲವಿಲ್ಲದಿದ್ದರೆ ಬನಕ್ಕೆ ಹೇಗೆ ಮಹತ್ವ ಇಲ್ಲವೋ ಹಾಗೆ ಒಂದು ಗ್ರಾಮದಲ್ಲಿ ಭಕ್ತ ನಿಲ್ಲದಿದ್ದರೆ ಆ ಗ್ರಾಮಕ್ಕೂ ಮಹತ್ವವಿರದು ಎನ್ನುವ ಶರಣ ಅನುಭವದ ನುಡಿಗಳಾಗಿವೆ. ನಮ್ಮೆಲ್ಲರಲ್ಲಿಯೂ ಪ್ರೇಮ, ಭಕ್ತಿ ಇದ್ದರೆ ಎಲ್ಲರೂ ಜೀವನದಲ್ಲಿ ಸುಖೀಯಾಗಿರಬಹುದು ಎಂದರು.

ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಮುಖೇಡ ತಾಲೂಕಿನ ಬೇಟಮುಗ್ರಾದ ಸಿದ್ಧದಯಾಳ ಮಹಾಸ್ವಾಮಿಗಳು ಮಾತನಾಡಿ, ಭಕ್ತಿಯಲ್ಲಿ ಲೀನವಾದರೆ, ಜ್ಞಾನ, ವೈರಾಗ್ಯ ತನ್ನಿಂತಾನೇ ನಮ್ಮಲ್ಲಿ ಬರುವುದು ಎಂದರು.

ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಭಕ್ತಿ ಸಾಮ್ರಾಜ್ಯವೇ ನಿರ್ಮಾಣವಾಗಿತ್ತು. ಹೀಗಾಗಿ ಅಲ್ಲಿಯ ಎಲ್ಲ ಶರಣರು ಭಕ್ತಿ ರಸದಲ್ಲಿ ಲೀನರಾಗಿ, ಜ್ಞಾನ, ವೈರಾಗ್ಯ ನಿಧಿಯಾಗಿದ್ದರು ಎಂದರು.

Advertisement

ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ವೇದಿಕೆ ಕೆಳಗೆ ಕುಳಿತು ಪೂಜ್ಯದ್ವಯರ ಪ್ರವಚನ ಆಲಿಸಿದರು. ಈ ವೇಳೆ ಶ್ರೀ ಗುರುಬಸವ ಪಟ್ಟದ್ದೇವರು ಸೇರಿದಂತೆ ಹಲವಾರು ಮಠಾಧೀಶರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next