ಬೆಂಗಳೂರು: ನಕಲಿ ಪಾಸ್‌ಪೋರ್ಟ್ ಬಳಸಿ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ತೆರಳಲು ಯತ್ನಿಸಿದ್ದ ವ್ಯಕ್ತಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ.
ಕೇರಳ ಮೂಲದ ಉತ್ತಮ್ ಹಲಾಲ್ ಬಂಧಿತ. ಈತ ನಕಲಿ ಪಾಸ್ ಪೋರ್ಟ್ ಮೂಲಕ ಬ್ಯಾಂಕಾಕ್‌ಗೆ ತೆರ ಳಲು ಯತ್ನಿಸಿದ್ದ. ಜತೆಗೆ ಇಬ್ಬರು ಮಹಿಳೆ ಯರಿಗೆ ವಿದೇಶದಲ್ಲಿ ಕೆಲಸ ಕೊಡಿಸುವು ದಾಗಿ ತನ್ನ ಜತೆಗೆ ಕರೆದುಕೊಂಡು ಬ್ಯಾಂಕಾಕ್‌ಗೆ ತೆರಳಲು ಮುಂದಾಗಿದ್ದ. ಕೆಐಎ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದ ಅಧಿಕಾರಿಗಳು ಅನುಮಾನದ ಮೇರೆಗೆ ಉತ್ತಮ್ ಹಲಾಲ್ ಪಾಸ್ ಪೋರ್ಟ್ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ.
ಕೂಡಲೇ ಆತನನ್ನು ವಿಚಾರಿಸಿದಾಗ ಭಾರತ ಮೂಲದ ಹಾಗೂ ನೇಪಾಳಿ ಮೂಲದ ಮಹಿಳೆ ಜತೆ ತಲಾ 8 ಲಕ್ಷ ರೂ. ಜತೆಗೆ ಹೆಚ್ಚುವರಿಯಾಗಿ ಒಬ್ಬರಿಂದ 1.5 ಲಕ್ಷ ಹಣ ಪಡೆದು ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್‌ಗೆ ತೆರಳಲು ಯತ್ನಿಸಿರುವ ಸಂಗತಿಯನ್ನು ಬಾಯ್ಬಿಟ್ಟಿದ್ದಾನೆ.
ಆರೋಪಿಯನ್ನು ಬಂಧಿಸಿದ ಪೊಲೀಸರು, ಮತ್ತಿಬ್ಬರು ಮಹಿಳೆಯರನ್ನು ವಾಪಸ್ ಕಳಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.