Advertisement

ಮಧ್ಯಪ್ರದೇಶದಲ್ಲಿ 26,00 ಜನರಿಗೆ ಗೃಹ ನಿರ್ಬಂಧ ; ಇದಕ್ಕೆ ಕಾರಣ ಇಲ್ಲಿದೆ!

03:34 AM Apr 06, 2020 | Hari Prasad |

ಮಧ್ಯಪ್ರದೇಶದ ಮೊರೆನಾದಲ್ಲಿ 10 ಜನರಲ್ಲಿ ಕೋವಿಡ್ 19 ಸೋಂಕು ಹರಡಿರುವ ಹಿನ್ನೆಲೆಯಲ್ಲಿ, ಆ ಪ್ರಾಂತ್ಯದ 26,000 ಜನರನ್ನು ಗೃಹ ನಿರ್ಬಂಧದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ತನ್ನ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ದುಬೈನ ಹೋಟೆಲೊಂದರಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮೊರೆನಾಕ್ಕೆ ಆಗಮಿಸಿದ್ದ. ಆತನ ಆಗಮನದ ನಂತರ ಮೃತರ ಶವಸಂಸ್ಕಾರ ಜರುಗಿತ್ತು.

Advertisement

13ನೇ ದಿನದ ಕಾರ್ಯಕ್ರಮದಲ್ಲಿ 1,500 ಮಂದಿ ಭಾಗವಹಿಸಿದ್ದರು. ಏ. 2ರಂದು ಆತ ಮತ್ತು ಆತನ ಪತ್ನಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿತ್ತು. ಈತನ ಜೊತೆಗೆ ಒಡನಾಡಿದ್ದ ಮೊರೆನಾ ಪ್ರಾಂತ್ಯದ 10 ಜನರಿಗೆ ಸೋಂಕು ಇರುವುದು ಏ. 3ರಂದು ದೃಢಪಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next