ಭಟ್ಕಳ: ಹೆಬ್ಬಾವು ಕಚ್ಚಿದರೂ ವಿಚಲಿತನಾಗದೆ ಹಾವನ್ನುಹೊತ್ತುಕೊಂಡೇ ಆಸ್ಪತ್ರೆಗೆ ದಾಖಲಾಗಿರುವ ಆಶ್ಚರ್ಯಕರ ಘಟನೆಯೊಂದು ಸೋಮವಾರ ರಾತ್ರಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹೆಬ್ಬಾವು ಕಚ್ಚಿಕೊಂಡು ಗಾಯಗೊಂಡ ವ್ಯಕ್ತಿಯನ್ನು ಮಣ್ಕುಳಿ ಸೀತಾರಾಮ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ.
ಭಟ್ಕಳದಲ್ಲಿ ಕೆಲದಿನಗಳಿಂದ ಮಳೆ ಸುರಿಯುತ್ತಿದ್ದು, ಹೆಬ್ಬಾವೊಂದು ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಇರುವ ಮನೆಯ ಪಕ್ಕದಲ್ಲಿ ಇತ್ತು. ರಸ್ತೆಯಲ್ಲಿ ಮತ್ಯಾರಿಗಾದರೂ ಕಚ್ಚಿದರೆ ಅಪಾಯವಾಗುತ್ತದೆ ಎಂದು ತಿಳಿದ ಸೀತಾರಾಮ ನಾಯ್ಕ ತನ್ನ ಕೆಲವು ಸ್ನೇಹಿತರ ಸಹಾಯದಿಂದ ಹಾವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರಿಗೆ ಹಾವು ಕಚ್ಚಿದೆ. ಹೆಬ್ಬಾವಿನಿಂದ ಕಚ್ಚಿಸಿಕೊಂಡ ಇವರು ವಿಚಲಿತಗೊಳ್ಳದೆ, ಆರೇಳು ಅಡಿ ಉದ್ದದ ಹೆಬ್ಬಾವವನ್ನು ತಮ್ಮ ಸ್ನೇಹಿತರ ಸಹಾಯದೊಂದಿಗೆ ಹಿಡಿದುಕೊಂಡೇ ಚಿಕಿತ್ಸೆ ಬಂದು ಆಸ್ಪತ್ರೆ ದಾಖಲಾಗಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ದೇವಸ್ಥಾನಕ್ಕೆ 10 ಸಾವಿರ ರೂ. ದೇಣಿಗೆ ನೀಡಿದ ಭಿಕ್ಷುಕಿ
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಬಂದು ಹಾವನ್ನು ಹಿಡಿದುಕೊಂಡು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದರು.