Advertisement

Police: ಕೊಟ್ಟಿಗೆಹಾರದ ವ್ಯಕ್ತಿ ಮಂಗಳೂರಿನಲ್ಲಿ ಸಾವು

11:11 PM Aug 24, 2023 | Team Udayavani |

ಮಂಗಳೂರು: ಚಿಕ್ಕಮಗಳೂರು ಮೂಡಿಗೆರೆ ಕೊಟ್ಟಿಗೆಹಾರದ ಕೃಷ್ಣಪ್ಪ ಅಲಿಯಾಸ್‌ ಹರೀಶ್‌ (45) ಅವರು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಆ.13ರಂದು ಸಂಜೆ ಮಿಲಾಗ್ರಿಸ್‌ ಹಾಲ್‌ ಬಳಿಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಮಲಗಿಕೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆ.19ರಂದು ಮೃತಪಟ್ಟಿದ್ದಾರೆ. ಇವರ ವಾರಸುದಾರರು ಪತ್ತೆಯಾಗಿಲ್ಲ.

Advertisement

ಸುಮಾರು 5.5 ಅಡಿ ಎತ್ತರ, ಬಿಳಿ ಗಡ್ಡ ಮತ್ತು ಮೀಸೆ ಹೊಂದಿದ್ದು, ಎಡ ತೊಡೆಯಲ್ಲಿ ಕಪ್ಪು ಮಚ್ಚೆ ಇದೆ. ವಾರಸುದಾರರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next