Advertisement

ಡೆಮಾಕ್ರಾಟ್‌ ನಾಯಕಿ ತುಳಸಿಗೆ ಸವಾಲು ಹಾಕಿ ಸೋತುಬಿಟ್ಟ

09:49 AM Jan 21, 2020 | Hari Prasad |

ವಾಷಿಂಗ್ಟನ್‌: ಅಮೆರಿಕದಲ್ಲಿ ಡೆಮಾಕ್ರಾಟಿಕ್‌ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರುವ ಭಾರತೀಯ ಮೂಲದ ತುಳಸಿ ಗಬ್ಟಾರ್ಡ್‌ ದಂಡ ತೆಗೆಯುವ (ಪುಷ್‌ ಅಪ್‌) ಸ್ಪರ್ಧೆಯಲ್ಲಿ ವ್ಯಕ್ತಿಯನ್ನು ಸೋಲಿಸಿದ್ದಾರೆ. ಈ ವೀಡಿಯೋ ವೈರಲ್‌ ಆಗಿದೆ.

Advertisement

ನ್ಯೂ ಹೆಮಿಸ್ಪಿಯರ್‌ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ವ್ಯಕ್ತಿ ‘ದಂಡ ತೆಗೆಯುವುದರಲ್ಲಿ ಯಾರಾದರೂ ಇದ್ದರೆ ಬಂದು ನನ್ನನ್ನು ಸೋಲಿಸಬಹುದು’ ಎಂದು ಅಮೆರಿಕದ‌ ಮಾಜಿ ಉಪಾಧ್ಯಕ್ಷ ಜಾಯ್‌ ಬಿಡೆನ್‌ರ ಸಭೆಯಲ್ಲಿದ್ದ ಜನರಿಗೆ ಸವಾಲು ಹಾಕಿದರು.

ಸವಾಲು ಸ್ವೀಕರಿಸಿದ ತುಳಸಿ, ಜಾಯ್‌ರಿಂದ ದಂಡ ತೆಗೆಯಲು ಆರಂಭಿಸಿದರು. ನಿಮಿಷಗಳ ಬಳಿಕ ಸವಾಲು ಹಾಕಿದ ವ್ಯಕ್ತಿ ತುಳಸಿ ಎದುರು ಸೋತು, ಉಸ್ಸಪ್ಪಾ ಎಂದರು. ಬಳಿಕ ಅವರೇ ಸವಾಲು ಹಾಕಿದ್ದ ವ್ಯಕ್ತಿಯನ್ನು ಎಬ್ಬಿಸಿ, ಕೈಕುಲುಕಿ ಬೀಳ್ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next