ಕುಣಿಗಲ್: ಆಟೋ ರಿಕ್ಷಾ ಚಾಲಕರ ಬುದ್ಧಿವಂತಿಕೆ, ಸಮಯ ಪ್ರಜ್ಞೆಯಿಂದ ಅಪಹರಿಸಲಾಗಿದ್ದ ಎರಡು ವರ್ಷದ ಗಂಡು ಮಗು ಮತ್ತೆ ತಾಯಿ ಮಡಿಲಿಗೆ ಸೇರಿದ್ದು, ಮಕ್ಕಳ ಕಳ್ಳಿ ಪೊಲೀಸರ ಅತಿಥಿಯಾಗಿರುವ ಘಟನೆ ಶನಿವಾರ ಬೆಳಗ್ಗೆ ಪಟ್ಟಣದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ವಾಸಿ ತಮಿಳುನಾಡು ಮೂಲದ ಗೀತಾ(35) ಸಾರ್ವಜನಿಕರಿಂದ ಗೂಸಾ ತಿಂದು ಪೊಲೀಸರ ಅಥಿತಿಯಾಗಿರುವ ಮಕ್ಕಳ ಕಳ್ಳಿ.
ಪ್ರಕರಣದ ವಿವರ: ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆ ರಾಯದುರ್ಗದ ಹೊನ್ನ ಸ್ವಾಮಿ ಹಾಗೂ ಸರಳ ಕುಣಿಗಲ್‌ನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕಳಸಿಪಾಳ್ಯ ಮೇಸ್ತ್ರಿ ಬಸವರಾಜು ಬಳಿಗಾರೆ ಕೆಲಸ ಮಾಡಿ ಕೊಂಡಿದ್ದರು. ಶನಿವಾರ ಊರಿಗೆ ತೆರಳಲು ಕುಣಿಗಲ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹನ್ನೊಂದು ದಿನದ ಹೆಣ್ಣು ಮಗು ಹಾಗೂ ಎರಡು ವರ್ಷದ ಗಂಡು ಮಗುವಿನೊಂದಿಗೆ ಬಸ್‌ಗೆ ಕುಳಿತ್ತಿದ್ದರು. ಈ ವೇಳೆ ಪತಿ ಹೊನ್ನಸ್ವಾಮಿ ಮೇಸ್ತ್ರಿ ಬಳಿ ಹಣ ಪಡೆಯಲು ಹೋಗಿದ್ದ. ಈ ಸಂದರ್ಭ ಅಲ್ಲಿಗೆ ಬಂದ ಮಕ್ಕಳ ಕಳ್ಳಿ ಗೀತಾ ಮಕ್ಕಳ ಜೊತೆ ಕುಳಿತಿದ್ದ ಸರಳರನ್ನು ಪರಿಚಯ ಮಾಡಿಕೊಂಡು ಮಗುವಿಗೆ ತಿಂಡಿ ಕೊಡಿಸುವುದಾಗಿ ಹೇಳಿ ಗಂಡು ಮಗುವನ್ನು ಎತ್ತಿ ಕೊಂಡು ಆಟೋ ದಲ್ಲಿ ಪರಾರಿಯಾಗಲು ಯತ್ನಿಸಿದ್ದಾಳೆ.
ಇದನ್ನು ಗಮನಿಸಿದ ಮಗುವಿನ ತಾಯಿ ಕೂಗಿ ಕೊಂಡಾಗ ಮತ್ತೂಂದು ಅಟೋದಲ್ಲಿ ಚಾಲ ಕರು ಹಿಂಬಾಲಿಸಿ ರೈಲ್ವೆ ನಿಲ್ದಾಣದಲ್ಲಿ ಸಾರ್ವ ಜನಿಕರ ಸಹಕಾರದಿಂದ ಹಿಡಿದು ಗೀತಾಳಿಗೆ ಗೂಸಾ ಕೊಟ್ಟು ಕುಣಿಗಲ್ ಪೊಲೀಲಿಸರ ವಶಕ್ಕೆ ನೀಡಿ, ಮಗುವನ್ನು ತಾಯಿ ಮಡಿಲಿಗೆ ಸೇರಿಸಿದ್ದಾರೆ.”ಮಗುವಿಗೆ ತಿಂಡಿ ಕೊಡಿಸಲು ಕರೆದು ಕೊಂಡು ಹೋಗಿದ್ದೆ’ ಎಂದು ಮಕ್ಕಳ ಕಳ್ಳಿ ಗೀತಾ ಹೇಳಿದ್ದು. ತಿಂಡಿ ಕೊಡಿಸುವು ದಾದರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ದಲ್ಲೇ ಕೊಡಿಸಬೇಕಾಗಿತ್ತು. 3 ಕಿಮೀ ದೂರದಲ್ಲಿರುವ ರೈಲ್ವೆ ಸ್ಟೇಷನ್‌ಗೆ ಏಕೆ ಕರೆದುಕೊಂಡು ಹೋದೆ ಎಂದು ಪೊಲೀಸರು ಪ್ರಶ್ನಿಸಿದಾಗ ಉತ್ತರಿಸಲಿಲ್ಲ.
ಅಂತಿಮವಾಗಿ “ನನಗೆ ಹೆಣ್ಣು ಮಕ್ಕಳಿ ದ್ದರೂ, ಗಂಡು ಮಗುವಿನ ಆಸೆಗಾಗಿ ಈ ರೀತಿ ಮಾಡಿದೆ’ ಎಂದು ಹೇಳಿದ್ದಾಳೆ. ಗೀತಾಳನ್ನು ವಶಕ್ಕೆ ಪಡೆದಿರುವ ಪೊಲೀ ಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾಳೆ. ಮಗುವಿನ ಹೆತ್ತವರು ತೀರಾ ಬಡವರಾಗಿರುವುದರಿಂದ ದೂರು ನೀಡಲು ನಿರಾಕರಿಸಿದ್ದಾರೆ.ಬಂಧಿತೆಯನ್ನು ತಹಶೀಲ್ದಾರ್ ಮುಂದೆ ಹಾಜರುಪಡಿಸಿ ಸಾಂತ್ವನ ಕೇಂದ್ರಕ್ಕೆ ನೀಡಲಾಗುವುದೆಂದು ಪಿಎಸ್‌ಐ ವಿಕಾಸ್ ಗೌಡ ತಿಳಿಸಿದರು.