Advertisement

ಉಪ ಚುನಾವಣೆ ಪ್ರಚಾರದ ಭರಾಟೆ ಜೋರು

12:39 PM Mar 24, 2017 | |

ಮೈಸೂರು: ನಂಜನಗೂಡು ಉಪ ಚುನಾವಣೆಯ ಮತದಾನಕ್ಕೆ ದಿನಗಳು ಹತ್ತಿರವಾದಂತೆ ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳ ಮುಖಂಡರು ಮತ್ತು ಅಭ್ಯರ್ಥಿಗಳು ಬೇಸಿಗೆಯ ಬಿರು ಬಿಸಿಲನ್ನೂ ಲೆಕ್ಕಿಸದೆ ಮತದಾರನ ಮನೆಬಾಗಿಲಿಗೆ ಎಡತಾಕುತ್ತಿದ್ದು, ಎರಡೂ ಪಕ್ಷಗಳ ಪ್ರಚಾರದ ಭರಾಟೆ ತಾರಕಕ್ಕೇರಿದೆ.

Advertisement

ಪಕ್ಷದ ಅಭ್ಯರ್ಥಿ ಗೆಲುವಿಗೆ ಟೊಂಕಕಟ್ಟಿ ದುಡಿಯುತ್ತಿರುವ ಚಾಮರಾಜ ನಗರ ಕ್ಷೇತ್ರದ ಲೋಕಸಭಾ ಸದಸ್ಯ ಆರ್‌.ಧ್ರುವನಾರಾಯಣ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಜತೆಗೆ ಗುರುವಾರ ಬೆಳಗ್ಗಿನಿಂದಲೇ ನಂಜನಗೂಡು ಕ್ಷೇತ್ರ ವ್ಯಾಪ್ತಿಯ ಕಾರ್ಯ, ಮಾದಾಪುರ, ದುಗ್ಗಳ್ಳಿ, ಕಗ್ಗಲೂರು, ಎಂ.ಕೊಂಗಳ್ಳಿ, ಮುಲ್ಕುಂಡಿ, ಹುರ, ಸಿದ್ದೇಗೌಡನ ಹುಂಡಿ, ಮೆಲ್ಲಹಳ್ಳಿ, ಕೆಲ್ಲೂರು, ದೇವೇಗೌಡನ ಪುರ, ಮೂಕನಪುರ, ಕಸುವಿನಹಳ್ಳಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ, ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ವಿವರಿಸಿ, ಕಾಂಗ್ರೆಸ್‌ ಬೆಂಬಲಿಸುವಂತೆ ಮತಯಾಚಿಸಿದರು.

ಮಧ್ಯಾಹ್ನದ ನಂತರ ಕ್ಷೇತ್ರಕ್ಕೆ ಆಗಮಿಸಿದ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪಮೆಲ್ಲಹಳ್ಳಿ, ಕೆಲ್ಲೂರು, ದೇವೇಗೌಡನಹುಂಡಿ, ಮೂಕನಪುರ, ಕಸುವಿನಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಜಿಪಂ ಮಾಜಿ ಅಧ್ಯಕ್ಷ ಬಸವರಾಜು, ಜಿಲ್ಲಾ ಕಾಂಗ್ರೆಸ್‌ ವಕ್ತಾರ ಜಿ.ವಿ.ಸೀತಾರಾಂ, ನಂಜನಗೂಡು ಎಪಿಎಂಸಿ ಅಧ್ಯಕ್ಷ ಮಾದಪ್ಪ ಇತರರು ಮತಯಾಚನೆಯಲ್ಲಿ ತೊಡಗಿದ್ದರು.

ಬಿಜೆಪಿ ವತಿಯಿಂದ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ವಿ.ಸೋಮಣ್ಣ ಪ್ರತ್ಯೇಕವಾಗಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಪರ ಮತಯಾಚನೆ ಮಾಡಿದರು. ವಿ.ಸೋಮಣ್ಣ  ಕ್ಷೇತ್ರ ವ್ಯಾಪ್ತಿಯ ಹೊರಳವಾಡಿ, ಬಸವೇಶ್ವರ ನಗರ, ಹೊಸೂರು, ವೀರೇಗೌಡನಹುಂಡಿ, ಬದನವಾಳು, ಬಸವಟ್ಟಿಗೆ, ಭುಜಂಗಯ್ಯನ ಹುಂಡಿ, ಮೆಲ್ಲಹಳ್ಳಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹಲ್ಲರೆ, ಹುರ, ದೇವರಾಯಶೆಟ್ಟಿ ಪುರ, ಹೆಡಿಯಾಲ, ಹಾಡ್ಯ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ವಿಪ ಸದಸ್ಯ ಡಿ.ಎಸ್‌.ವೀರಯ್ಯ ಹಲ್ಲರೆ, ಮುಲ್ಕುಂಡಿ, ಹುರ, ಮಡಿಕೆಹುಂಡಿ, ಹಾಡ್ಯ, ಕಂದೇಗಾಲ, ಚಿಲಕಳ್ಳಿ, ಹೆಡಿಯಾಲ, ಬಂಕಳ್ಳಿ, ಒಡೆಯನಪುರ, ವೀರೇಗೌಡನಹುಂಡಿ, ಬಳ್ಳೂರು ಹುಂಡಿ, ಹಂಚೀಪುರ, ಇಂದಿರಾ ನಗರ, ಹೊಸವೀಡು ಹುಂಡಿ, ಮಡುವಿನಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.

Advertisement

ಜಿಪಂ ಸದಸ್ಯ ಸದಾನಂದ, ಬಿಜೆಪಿ ಮುಖಂಡರಾದ ಆಲನಹಳ್ಳಿ ಪುಟ್ಟಸ್ವಾಮಿ, ಜಮೀನಾªರ್‌ ಮಹೇಶ್‌, ಕೇಬಲ್‌ ಮಹೇಶ್‌,ಡಾ.ಚಿದಾನಂದ ಮೂರ್ತಿ, ಬಿದರಗೂಡು ಕುಮಾರ್‌, ಕಣೇನೂರು ವೃಷಬೇಂದ್ರ, ನಂಜನಗೂಡು ಮನು ಮತ್ತಿತರರು ಮನೆ ಮನೆಗೆ ತೆರಳಿ ಮತಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next