Advertisement

Hunsur ಕಬ್ಬಿನ ಸಿಪ್ಪೆ ತುಂಬಿದ್ದ ಲಾರಿಗೆ ವಿದ್ಯುತ್‌ ತಂತಿ ತಗುಲಿ ಬೆಂಕಿ; ಸಿಪ್ಪೆ ಭಸ್ಮ

09:46 PM Dec 19, 2023 | Team Udayavani |

ಹುಣಸೂರು: ಕಬ್ಬಿನ ಸಿಪ್ಪೆ ಹೊತ್ತೊಯ್ಯುತ್ತಿದ್ದ ಲಾರಿಗೆ ವಿದ್ಯುತ್‌ ತಂತಿ ತಗುಲಿ ಕಬ್ಬಿನ ಸಿಪ್ಪೆ ಸಂಪೂರ್ಣ ಭಸ್ಮವಾಗಿದ್ದರೆ, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮದಿಂದ ಲಾರಿಗೆ ಯಾವುದೇ ಅಪಾಯವಾಗಿಲ್ಲ.

Advertisement

ಹುಣಸೂರು ನಗರಕ್ಕೆ ಸಮೀಪದ ಎಚ್‌.ಡಿ.ಕೋಟೆ ರಸ್ತೆಯ ಹಂಚ್ಯಾ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನ ಘಟನೆ ಸಂಭವಿಸಿದ್ದು, ಲಾರಿಯಲ್ಲಿ ಎತ್ತರವಾಗಿ ಕಬ್ಬಿನ ಸಿಪ್ಪೆ ತುಂಬಿದ್ದರಿಂದಾಗಿ ಹಂಚ್ಯಾ ಬಳಿಯ ರಸ್ತೆಗೆ ಅಡ್ಡಲಾಗಿ ಹಾಕಿದ್ದ ವಿದ್ಯುತ್‌ ತಂತಿಗೆ ಸಿಲುಕಿ ಒಮ್ಮೆಲೆ ಬೆಂಕಿ ಹತ್ತಿಕೊಂಡಿದೆ.

ತಕ್ಷಣವೇ ಪಕ್ಕದ ಜಮೀನಿನವರು ತಮ್ಮ ಬೋರ್‌ವೆಲ್‌ ನಿಂದ ಪೈಪ್‌ ಮೂಲಕ ನೀರು ಹಾಯಿಸಿದರಾದರೂ ದಟ್ಟ ಹೊಗೆ ಆವರಿಸಿದೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ನಂದಿಸಿದ್ದರಿಂದ ಲಾರಿಗೆ ಹಾನಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next