Advertisement

ಖಾಸಗಿ ಆಸ್ಪತ್ರೆ ಲ್ಯಾಬ್‌ ವ್ಯವಸ್ಥಾಪಕರಕಚೇರಿಗೆ ಪಾಲಿಕೆ ಬೀಗಮುದ್ರೆ

04:42 PM Jul 15, 2018 | Team Udayavani |

ದಾವಣಗೆರೆ: ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳನ್ನ ವೈಜ್ಞಾನಿಕವಾಗಿ ಸಂಗ್ರಹಿಸಿ, ಪ್ರತ್ಯೇಕಿಸಿ, ವಿಲೇವಾರಿ ಮಾಡದ ನಗರದ ಖಾಸಗಿ ಆಸ್ಪತ್ರೆಯೊಂದರ ಲ್ಯಾಬ್‌ ವ್ಯವಸ್ಥಾಪಕರ ಕಚೇರಿಗೆ ಶನಿವಾರ ಮಹಾನಗರ ಪಾಲಿಕೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.

Advertisement

ಪಿ.ಜೆ. ಬಡಾವಣೆಯಲ್ಲಿನ ಖಾಸಗಿ ಆಸ್ಪತ್ರೆ ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ಪ್ರತ್ಯೇಕವಾಗಿ ಬೇರ್ಪಡಿಸಿ, ವಿಲೇವಾರಿ ಮಾಡದೆ ಮಹಾನಗರ ಪಾಲಿಕೆ ಸ್ವತ್ಛತಾ ಕೆಲಸಗಾರರ ಮೂಲಕ ವಿಲೇವಾರಿ ಮಾಡಿಸುತ್ತಿದ್ದನ್ನ ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಲ್ಯಾಬ್‌ ವ್ಯವಸ್ಥಾಪಕರ ಕಚೇರಿಗೆ ಬೀಗ ಹಾಕುವ ಮೂಲಕ ಸೂಕ್ತ ಎಚ್ಚರಿಕೆ ನೀಡಿದರು.

ದಾವಣಗೆರೆಯಲ್ಲಿನ ಕೆಲವು ನರ್ಸಿಂಗ್‌ ಹೋಂ, ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ಪ್ರತ್ಯೇಕವಾಗಿ ಬೇರ್ಪಡಿಸಿ, ಅಮರಾವತಿಯ ಮೆ|| ಸುಶಾಂತ್‌ ಎನ್ವಿರಾಮೆಂಟಲ್‌ ಟೆಕ್ನಾಲಜೀಸ್‌ ಗೆ ವಿಲೇವಾರಿ ಮಾಡದೇ ಇರುವ ಹಿನ್ನೆಲೆಯಲ್ಲಿ
ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಸೂಕ್ತ ರೀತಿ ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳನ್ನ ಸೂಕ್ತ ರೀತಿ ವಿಲೇವಾರಿ ಮಾಡದವರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆ, 1986 ಮತ್ತು ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳ(ವ್ಯವಸ್ಥಾಪನೆ ಮತ್ತು ನಿರ್ವಹಣೆ)ನಿಯಮಗಳು- 2016 ರ ಅಡಿಯಲ್ಲಿ
ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಸಾಕಷ್ಟು ಎಚ್ಚರಿಕೆ ನೀಡಿದೆ. ಆದರೂ, ಅಂತಹ ಘಟನೆ ಮರುಕಳಿಸುತ್ತಲೇ ಇವೆ. 

Advertisement

Udayavani is now on Telegram. Click here to join our channel and stay updated with the latest news.

Next