Advertisement

ಗಣರಾಜ್ಯೋತ್ಸವಕ್ಕೆ ಸಂಚಾರ ಸ್ವಲ್ಪ ಬದಲಾವಣೆ

12:13 PM Jan 26, 2017 | Team Udayavani |

ಬೆಂಗಳೂರು: ಇಂದು ನಗರದ ಮಾಣೆಕ್‌ ಷಾ ಪರೇಡ್‌ ಮೈದಾನ ದಲ್ಲಿ ನಡೆಯಲಿರುವ 68ನೇ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕೆಲವೆಡೆ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿ, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದೆಡೆ ಸಮಾರಂಭದ ಭದ್ರತೆಗಾಗಿ ಪೊಲೀಸ್‌ ಇಲಾಖೆ ಸನ್ನದ್ದುಗೊಂಡಿದೆ. ಅಲ್ಲದೆ, ಕೇಂದ್ರದಿಂದ ಎನ್‌ಎಸ್‌ಜಿ ಪಡೆಯೂ ಬೆಂಗಳೂರಿಗೆ ಬಂದಿಳಿದಿದೆ. 

Advertisement

ಹಳದಿ ಕಾರ್‌ಪಾಸ್‌ಗಳನ್ನು ಹೊಂದಿರುವ ಎಲ್ಲ ಆಹ್ವಾನಿತರು ಕಬ್ಬನ್‌ ರಸ್ತೆಯಲ್ಲಿ ಸಂಚರಿಸಿ, ಮಾಣಿಕ್‌ಷಾ ಪರೇಡ್‌ ಮೈದಾನದ ಪ್ರವೇಶದ್ವಾರ-1ರ ಮುಖಾಂತರ ಒಳಪ್ರವೇಶಿಸಿ ತಮ್ಮ ವಾಹನಗಳನ್ನು ಪರೇಡ್‌ ಮೈದಾನದ ಪಶ್ಚಿಮ ಭಾಗದಲ್ಲಿ ನಿಲುಗಡೆ ಮಾಡಬೇಕು.

ಬಿಳಿ ಕಾರ್‌ ಪಾಸ್‌ಗಳನ್ನು ಹೊಂದಿರುವ ಎಲ್ಲ ಗಣ್ಯರು, ಸೇನಾ ಅಧಿಕಾರಿಗಳು ಕಬ್ಬನ್‌ರಸ್ತೆಯಲ್ಲಿ ಸಂಚರಿಸಿ ಪ್ರವೇಶದ್ವಾರ-2ರ ಮೂಲಕ ಒಳಪ್ರವೇಶಿಸಿ ಬಲ ತಿರುವು ಪಡೆದು ಪರೇಡ್‌ ಮೈದಾನದ ಪಶ್ಚಿಮ ಭಾಗದ ಪಾರ್ಕಿಂಗ್‌ನಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಹಿರಿಯ ಸೇನಾ ಅಧಿಕಾರಿಗಳು ಪರೇಡ್‌ ಮೈದಾನದ ಉತ್ತರ ದಿಕ್ಕಿನಲ್ಲಿ ನಿಗದಿಪಡಿಸಿರುವ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಬೇಕು. 

ಎಲ್ಲ ಗಣ್ಯರು, ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಮಾಧ್ಯಮದವರ ವಾಹನ, ಓ.ಬಿ. ವ್ಯಾನ್‌ಗಳು ಪ್ರವೇಶ ದ್ವಾರ-3ರ ಮೂಲಕ ಒಳಪ್ರವೇಶಿಸಿ ಮೈದಾನದ ಉತ್ತರ ದಿಕ್ಕಿನಲ್ಲಿ ನಿಗದಿಪಡಿಸಿರುವ ಪಾರ್ಕಿಂಗ್‌ನಲ್ಲಿ ವಾಹನಗಳನ್ನು ನಿಲ್ಲಿಸಬೇಕು. 

ಪಿಂಕ್‌ (ಗುಲಾಬಿ) ಹಾಗೂ ಹಸಿರು ಪಾಸ್‌ ಹೊಂದಿರುವವರು ಕಬ್ಬನ್‌ ರಸ್ತೆಯಲ್ಲಿ, ಮಣಿಪಾಲ್‌ ಸೆಂಟರ್‌ನಿಂದ ಕೆ.ಆರ್‌. ರಸ್ತೆ ಮತ್ತು ಕಾಮ್‌ರಾಜ್‌ ರಸ್ತೆ ಮಧ್ಯ, ಕಾಮ್‌ರಾಜ್‌ ರಸ್ತೆ (ಸಫೀನಾ ಪ್ಲಾಜಾ ಬಳಿ), ಆರ್ಮಿ ಶಾಲೆ ಬಳಿ ವಾಹನಗಳನ್ನು ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸಿ, ಪಿಂಕ್‌ ಪಾಸ್‌ ಹೊಂದಿರುವವರು ಪ್ರವೇಶದ್ವಾರ-3ರ ಮೂಲಕ ನಡೆದೇ ಮೈದಾನ ಪ್ರವೇಶಿಸಬಹುದು. ಹಸಿರು ಪಾಸ್‌ ಹೊಂದಿದವರು ಪ್ರವೇಶದ್ವಾರ-4 ಮತ್ತು 5ರ ಮೂಲಕ ಮೈದಾನ ಪ್ರವೇಶಿಸಬೇಕು.

Advertisement

ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳನ್ನು ಕರೆ ತರುವ ಎಲ್ಲ ವಾಹನಗಳು ಪ್ರವೇಶದ್ವಾರ 1ರ ಬಳಿ ನಿಲ್ಲಿಸಿ, ಮಕ್ಕಳನ್ನು ಇಳಿಸಿದ ಬಳಿಕ ತಮ್ಮ ವಾಹನಗಳನ್ನು ಎಂ.ಜಿ. ರಸ್ತೆಯಲ್ಲಿ, ಅನಿಲ್‌ ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದವರೆಗೆ ರಸ್ತೆಯ ಉತ್ತರ ಭಾಗದಲ್ಲಿ ನಿಲ್ಲಿಸಬೇಕು. ಲೋಕೋಪಯೋಗಿ, ಬಿಬಿಎಂಪಿ ಮತ್ತಿತರ ಸರ್ಕಾರಿ ವಾಹನಗಳು ಪ್ರವೇಶದ್ವಾರ-1ರ ಮುಖಾಂತರ ಮೈದಾನ ಪ್ರವೇಶಿಸಿ ನಂತರ ಪೋರ್ಟ್‌ ವಾಲ್‌ ಹಿಂಭಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದು. 

ಎಲ್ಲ ದ್ವಿಚಕ್ರ ವಾಹನಗಳ ಸವಾರರು ತಮ್ಮ ವಾಹನಗಳನ್ನು ಕಾಮರಾಜ ರಸ್ತೆ ಪೂರ್ವ ಭಾಗದಲ್ಲಿ ನಿಲುಗಡೆ ಮಾಡಿ, ನಂತರ ಕಾಮರಾಜ ರಸ್ತೆಯಲ್ಲಿರುವ ಪ್ರವೇಶ ದ್ವಾರ-4 ಮತ್ತು 5ರ ಮೂಲಕ ಒಳಪ್ರವೇಶಿಸಬೇಕು. ಕಾರ್‌ಪಾಸ್‌ಗಳಿಲ್ಲದೆ ಇರುವವರು ತಮ್ಮ ವಾಹನಗಳನ್ನು ಕಾಮರಾಜ ರಸ್ತೆ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಿ ಪ್ರವೇಶದ್ವಾರ 4 ಮತ್ತು 5ರ ಮೂಲಕ ಒಳಪ್ರವೇಶಿಸ ಬೇಕು. ದ್ವಿಚಕ್ರ ವಾಹನ, ಕಾರುಗಳಲ್ಲಿ ಕಾರ್ಯಕ್ರಮಕ್ಕೆ ಬರುವವರು ತಮ್ಮ ವಾಹನಗಳನ್ನು ಸಫೀನಾ ಪ್ಲಾಜಾ ಮುಂಭಾಗ, ಶಿವಾಜಿನಗರ ಬಿಎಂಟಿಸಿ ಸಂಕೀìಣದ 2ನೇ ಮಹಡಿ, ಶಿವಾಜಿನಗರದ ಛೋಟಾ ಮೈದಾನ ಹಾಗೂ ಕಂಠೀರವ ಕ್ರಿಡಾಂಗಣದಲ್ಲಿ ನಿಲುಗಡೆ ಮಾಡಬೇಕು.

ಎಲ್ಲೆಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ
ಜ. 26ರಂದು ಬೆಳಿಗ್ಗೆ 8.30ರಿಂದ 10.30ರವರೆಗೆ ಕಬ್ಬನ್‌ ರಸ್ತೆಯಲ್ಲಿ ಬಿ.ಆರ್‌.ವಿಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರವನ್ನು ನಿರ್ಬಂಧಿಸಿ, ಅದಕ್ಕೆ ಪರ್ಯಾಯವಾಗಿ ಈ ಕೆಳಕಂಡಂತೆ ಸಂಚಾರ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಇನ್‌ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್‌ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫೆಂಟ್ರಿ ರಸ್ತೆ-ಸಫೀನಾ ಪ್ಲಾಜಾ- ಎಡ ತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ-ಆಲೀಸ್‌ ಸರ್ಕಲ್‌-ಡಿಸ್ಪೆನ್ಸರಿ ರಸ್ತೆ-ಕಾಮರಾಜ ರಸ್ತೆ,

ಡಿಕನ್ಸನ್‌ ರಸ್ತೆ ಜಂಕ್ಷನ್‌-ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ-ಕಬ್ಬನ್‌ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಕಬ್ಬನ್‌ ರಸ್ತೆ ಮುಖಾಂತರ ಮಣಿಪಾಲ್‌ ಸೆಂಟರ್‌ ಕಡೆಗೆ ಸಾಗಬಹುದು. ಕಬ್ಬನ್‌ ರಸ್ತೆಯಲ್ಲಿ ಮಣಿಪಾಲ್‌ ಸೆಂಟರ್‌ ಜಂಕ್ಷನ್‌ನಿಂದ ಬಿ.ಆರ್‌.ವಿ ಜಂಕ್ಷನ್‌ ಕಡೆಗೆ ಬರುವ ವಾಹನಗಳು ಕಾಮರಾಜ ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ನಲ್ಲಿ ಕಾಮರಾಜ ರಸ್ತೆಗೆ ಎಡ ತಿರುವು ಪಡೆದು, ಕಾವೇರಿ ಆರ್ಟ್ಸ್ ಆ್ಯಂಡ್‌ ಕ್ರಾಪ್ಸ್‌ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಎಂ.ಜಿ. ರಸ್ತೆಯ ಮುಖಾಂತರ ಬಂದು ಅನಿಲ್‌ಕುಂಬ್ಳೆ ವೃತ್ತದ ಮೂಲಕ ಮುಂದೆ ಸಾಗಬಹುದು.

ಅನಿಲ್‌ ಕುಂಬ್ಳೆ ವೃತ್ತದಿಂದ ಕಬ್ಬನ್‌ ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್‌ ರಸ್ತೆಯಲ್ಲಿ ಸಾಗಿ, ಬಲಕ್ಕೆ ತಿರುವು ಪಡೆದು ಇನ್‌ಫೆಂಟ್ರಿ ರಸ್ತೆ-ಸಫೀನಾ ಪ್ಲಾಜಾ-ಎಡಕ್ಕೆ ತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ-ಆಲಿ ಸರ್ಕಲ್‌-ಡಿಸ್ಪೆನ್ಸರಿ ರಸ್ತೆ-ಕಾಮರಾಜ ರಸ್ತೆ ಮತ್ತು ಡಿಕನ್ಸನ್‌ ರಸ್ತೆ ಜಂಕ್ಷನ್‌-ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ-ಕಬ್ಬನ್‌ ರಸ್ತೆ ಮತ್ತು ಕಾಮರಾಜ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು,

ಕಬ್ಬನ್‌ ರಸ್ತೆ ಮುಖಾಂತರ ಮಣಿಪಾಲ್‌ ಸೆಂಟರ್‌ ಕಡೆಗೆ ಸಾಗಬಹುದು. ಎಂ.ಜಿ. ರಸ್ತೆಯಲ್ಲಿ ಕಾವೇರಿ ಆರ್ಟ್ಸ್ ಆ್ಯಂಡ್‌ ಕ್ರಾಫ್ಟ್ ವೃತ್ತದಿಂದ ಬಂದು, ಕಬ್ಬನ್‌ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ಗೆ ಹೋಗುವ ವಾಹನಗಳು ನೇರವಾಗಿ ಎಂ.ಜಿ. ರಸ್ತೆಯಲ್ಲಿ ಸಾಗಿ ಅನಿಲ್‌ ಕುಂಬ್ಳೆ ವೃತ್ತದ ಬಳಿಗೆ ಬಂದು, ಬಲ ತಿರುವು ಪಡೆದು-ಬಿ.ಆರ್‌.ವಿ ಜಂಕ್ಷನ್‌ನಲ್ಲಿ ನೇರವಾಗಿ ಸಂಚರಿಸಿ, ಸೆಂಟ್ರಲ್‌ ಸ್ಟ್ರೀಟ್‌ ರಸ್ತೆಯಲ್ಲಿ ಮುಂದೆ ಸಾಗಬಹುದು.

ಬೆಂಗಳೂರಿನಲ್ಲಿ ಎನ್‌ಎಸ್‌ಜಿ ಪಡೆ
ಬೆಂಗಳೂರು:
ಗಣರಾ ಜ್ಯೋತ್ಸವ ವೇಳೆ ಉಗ್ರರು ದುಷ್ಕೃತ್ಯ ಎಸಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಷ್ಟ್ರೀಯ ಭದ್ರತಾ ಪಡೆಯನ್ನು (ಎನ್‌ಎಸ್‌ಜಿ) ನಗರದಲ್ಲಿ ನಿಯೋಜಿಸಲಾಗಿದೆ. ನಗರ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ 68ನೇ ಗಣರಾಜ್ಯೋತ್ಸವ ನಡೆಯಲಿದ್ದು, ಈ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹದ್ದಿನಕಟ್ಟಿದ್ದಾರೆ.

ಮುನ್ನಚ್ಚರಿಕೆ ಕ್ರಮವಾಗಿ 40 ಮಂದಿ ಎನ್‌ಎಸ್‌ಜಿ ಪಡೆಯನ್ನು ಕೇಂದ್ರವು ನಗರಕ್ಕೆ ಕಳುಹಿಸಿಕೊಟ್ಟಿದೆ. ಗಣರಾಜ್ಯೋತ್ಸವ ಭದ್ರತೆಗಾಗಿ ಎನ್‌ಎಸ್‌ಜಿ ಪಡೆಯನ್ನು ಇದೇ ಮೊದಲ ಬಾರಿಗೆ  ಕಳುಹಿಸಲಾಗಿದೆ. ತುರ್ತು ಸಂದರ್ಭ ಎದುರಾದಲ್ಲಿ ಮಾತ್ರ ಪಡೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್‌ ಆಯುಕ್ತ ಮಾಲಿನಿ ಕೃಷ್ಣಮೂರ್ತಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next