ತುಮಕೂರು: ಡಿ.15 ರಂದು ತುಮಕೂರು ಸೇರಿದಂತೆ ಪಕ್ಷದಿಂದ ಸ್ಪರ್ಧಿಸುವ 150 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ
ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಪಕ್ಷ ನಿಷ್ಠೆಯಿಂದ ಕೆಲಸ ಮಾಡುವವರಿಗೆ ಟಿಕೆಟ್ ನೀಡಲಾಗುವುದು. ಈಗ ಪಕ್ಷದಲ್ಲಿರುವ ಎಲ್ಲಾ ಶಾಸಕರಿಗೂ ಟಿಕೆಟ್ ನೀಡಲಾಗುವುದು. ನಾನು ರಾಮನಗರದಿಂದ ಸ್ಪರ್ಧಿಸುತ್ತೇನೆ. ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಡಿ.15ರಂದು ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿದರು.
ಪರಂ ಸೋತವರ ಮುಖಂಡ: ಇದೇ ವೇಳೆ, ಕಾಂಗ್ರೆಸ್‌ನ ಯಾತ್ರೆ ಕುರಿತು ಲೇವಡಿ ಮಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಓಡುವ ಬಸ್ಸುಗಳನ್ನು ಇಟ್ಟುಕೊಂಡು, ಕೆಪಿಸಿಸಿ ಅಧ್ಯಕ್ಷರಿಗೆ ಕೆಟ್ಟು ಹೋಗುವ ಹಳೆ ಬಸ್ಸುಗಳನ್ನು ನೀಡಿದ್ದಾರೆ. ಇದರ ಅರ್ಥ ನೀನು ಸೋತವರ ಮುಖಂಡನಾಗು, ನಾನು ಗೆದ್ದವರ ಮುಖಂಡನಾಗುತ್ತೇನೆ ಎನ್ನುವ ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್ ನಿಂದ ಸೋತಿರುವ ಅಭ್ಯರ್ಥಿಗಳ ಸಂಘಟಿಸಿ ಗೆಲುವು ಸಾಧಿಸುವಂತೆ ಮಾಡಲು ಪರಮೇಶ್ವರ್‌ಗೆ ಜವಾಬ್ದಾರಿ ನೀಡಿದ್ದಾರೆ. ಗೆದ್ದಿರುವ ಶಾಸಕರ ಜವಾಬ್ದಾರಿಯನ್ನು ಸಿದ್ದರಾಮಯ್ಯ ತಾವೇ ಹೊರುತ್ತಿದ್ದಾರೆ ಎಂದರು.