ಕಲಬುರಗಿ: ಬುಧವಾರ ಜಿಲ್ಲೆಯಲ್ಲಿ ಲಘು ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.4 ರಷ್ಟು ತೀರ್ವತೆಯ ಭೂ ಕಂಪನವಾಗಿದೆ.
ಇಂದು (ಬುಧವಾರ) ಮುಂಜಾನೆ 9.48.16 ರ ಸಮಯಕ್ಕೆ ಕಂಪಿಸಿದ ಭೂಮಿ ಕಂಪಿಸಿದೆ. ಐದು ಸೆಕೆಂಡ ಕಾಲ ಕಂಪನದ ಅನುಭವವಾಗಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಂಪನದ ಅನುಭವವಾಗಿದ್ದು, ಕಂಪನದಿಂದ ಜನ ಗಾಬರಿಯಾಗೊಂಡಿದ್ದು, ಏನಾಗಿದೆ ಎಂಬುದು ಗೊತ್ತಾಗಲಿಲ್ಲ ಎಂದಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಲಘು ಭೂಮಿ ಕಂಪಿಸಿದ ಬಗ್ಗೆ ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ( center for seismology) ವು ತನ್ನ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದೆ.
ನಾಳೆ ಮೋದಿ ಭೇಟಿ: ಪ್ರಧಾನಿ ನರೇಂದ್ರ ಮೋದಿ ಹಕ್ಕು ಪತ್ರಗಳನ್ನು ವಿತರಿಸಲು ಜ. 19 ರಂದು ಭೂಕಂಪನದ ಕೇಂದ್ರ ಬಿಂದು ಸಮೀಪವೇ ಆಗಮಿಸುತ್ತಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ದತೆಗಳು ಭರದಿಂದ ನಡೆದಿವೆ. ಈಗಾಗಲೇ ವಿಶೇಷ ಭದ್ರತಾ ಪಡೆ ಆಗಮಿಸಿದೆ.