Advertisement

ಶರಣರ ಸಾಹಿತ್ಯಕ್ಕೊಂದು ಗ್ರಂಥಾಲಯ

03:47 PM Apr 30, 2017 | |

ಕಲಬುರಗಿ: ಜಗತ್‌ ವೃತ್ತದ ಆವರಣದಲ್ಲಿರುವ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಗ್ರಂಥಾಲಯ ನಿರ್ಮಿಸಿ ಅದರಲ್ಲಿ ಬಸವಣ್ಣನವರ ಮತ್ತು ಬಸವಾದಿ ಶರಣರ ಸಮಗ್ರ ಸಾಹಿತ್ಯ ಸಂಗ್ರಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. 

Advertisement

ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಬಸವ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ 884ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬಸವಣ್ಣನವರು ಕಲಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದಲ್ಲಿ ಮುನಿಯಬೇಡ ಎಂದು ತಿಳಿಸಿದ್ದಾರೆ.

ಎಲ್ಲರೂ ಬಸವಣ್ಣನವರ ವಚನಗಳನ್ನು ಅರ್ಥೈಸಿಕೊಂಡು ಒಬ್ಬರ ಮೇಲೊಬ್ಬರು ಕೋಪ ಮಾಡಿಕೊಳ್ಳದೇ ಬದುಕಬೇಕು ಎಂದರು. ಶ್ರೀಶೈಲ ಸಾರಂಗಮಠದ ಡಾ| ಸಾರಂಗಧರ ದೇಶಿಕೇಂದ್ರದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ, ಕಡಗಂಚಿ ಬಳಿಯ ಕೇಂದ್ರೀಯ ವಿವಿಗೆ ಡಾ| ಅಂಬೇಡ್ಕರ್‌ ಹೆಸರಿಟ್ಟಿದರೆ ಗುಲಬರ್ಗಾ ವಿವಿಗೆ ಬಸವೇಶ್ವರ ಹೆಸರಿಡಿ ಎಂದು ಹೇಳಿದರು. 

ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುವರ್ಣಾ ಹಣಮಂತ ಮಾಲಾಜಿ, ಶಾಸಕ ಡಾ| ಖಮರುಲ್‌ ಇಸ್ಲಾಂ, ವಿಧಾನ ಪರಿಷತ್‌ ಸದಸ್ಯರಾದ ಅಮರನಾಥ ಪಾಟೀಲ, ಬಿ.ಜಿ. ಪಾಟೀಲ, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ, ಮಹಾಪೌರ ಶರಣಕುಮಾರ ಮೋದಿ,

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್‌ ಅಜಗರ್‌ ಚುಲಬುಲ್‌, ಮಾಜಿ ಶಾಸಕರಾದ ಅಲ್ಲಂ ಪ್ರಭುಪಾಟೀಲ, ಮಾರುತಿ ಮಾಲೆ, ಉದ್ಯಮಿ ಎಸ್‌.ಎಸ್‌. ಪಾಟೀಲ, ಅಖೀಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶರಣಬಸಪ್ಪ ಬಿ. ಭೂಸನೂರ ಮುಂತಾದವರಿದ್ದರು. 

Advertisement

ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ,

ಬಸವ ಜಯಂತಿ ಉತ್ಸವ ಸಮಿತಿ ಪದಾಧಿಕಾರಿಗಳಾದ ಸಂಗಮೇಶ ನಾಗನಹಳ್ಳಿ, ಮಂಜುನಾಥ ರೆಡ್ಡಿ, ಶರಣು ಮೋತಕಪಲ್ಲಿ, ಕಲ್ಯಾಣರಾವ್‌ ಪಾಟೀಲ, ರವೀಂದ್ರ ಶಾಬಾದಿ, ಜಂಬನಗೌಡ ಶೀಲವಂತರ ಹಾಜರಿದ್ದರು. ಇದಕ್ಕೂ ಮುನ್ನ ಸಚಿವರು ಬಸವೇಶ್ವರ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. 

ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರ ತರಲಾದ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಬಿಡುಗಡೆಗೊಳಿಸಿದರು. ನಂತರ 2016-17ನೇ ಸಾಲಿನ ಎಚ್‌.ಕೆ.ಆರ್‌.ಡಿ.ಬಿ. ಮ್ಯಾಕ್ರೋ ಅನುದಾನದಡಿ ಜಗತ್‌ ವೃತ್ತದಲ್ಲಿರುವ 50 ಲಕ್ಷ ರೂ. ವೆಚ್ಚದ ಡಾ| ಬಿ.ಆರ್‌. ಅಂಬೇಡ್ಕರ್‌ ಉದ್ಯಾನವನದ ಅಭಿವೃದ್ಧಿ ಕಾಮಗಾರಿ ಹಾಗೂ 50 ಲಕ್ಷ ರೂ. ವೆಚ್ಚದ ಬಸವೇಶ್ವರ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next