Advertisement

ಮಂತ್ರಿಗಳ ಪರ ಸಿಎಂ ಕಾಗದ ಪತ್ರ ಮಂಡನೆ

08:20 AM Feb 24, 2018 | Team Udayavani |

ವಿಧಾನಸಭೆ:ಸದನದಲ್ಲಿ ಶಾಸಕರ ಜತೆಗೆ ಬಹುತೇಕ ಸಚಿವರೂ ಗೈರು ಹಾಜರಾಗಿದ್ದರು. ಶುಕ್ರವಾರ ಬೆಳಗ್ಗೆ ಕೋರಂ ಕೊರತೆಯಿಂದಾಗಿ ಸ್ವಲ್ಪ ತಡವಾಗಿಯೇ ಕಲಾಪ ಆರಂಭವಾದರೂ ಹಾಜರಿರಬೇಕಿದ್ದ ಹೆಚ್ಚಿನ ಸಚಿವರು ಆಗಮಿಸಿರಲಿಲ್ಲ. ಸಭೆಯ ಮುಂದಿಡಲಾಗುವ ಕಾಗದ ಪತ್ರಗಳನ್ನು ಅವರವರ ಖಾತೆಯ ಸಚಿವರು ಮಂಡಿಸಬೇಕಿತ್ತು ಆದರೆ ಸಚಿವರು ಸಕಾಲಕ್ಕೆ ಹಾಜರಿರದ ಕಾರಣ ಮಂತ್ರಿಗಳ ಪರವಾಗಿ ಮುಖ್ಯಮಂತ್ರಿಗಳೇ ಕಾಗದ ಪತ್ರಗಳನ್ನು ಮಂಡಿಸಿದರು.

Advertisement

ಮೊದಲು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಕೈಗಾರಿಕೆ ಸಚಿವ ದೇಶಪಾಂಡೆ ಸೇರಿ ಮೂರ್‍ನಾಲ್ಕು ಸಚಿವರ ಪರವಾಗಿ ಸಿಎಂ ಕಾಗದ ಪತ್ರ ಮಂಡಿಸಿದರು. ನಂತರ ಇತರ ಸಚಿವರೂ ಸದನದಲ್ಲಿ ಇರದೇ ಇರುವುದನ್ನು ಗಮನಿಸಿದ ಸಿದ್ದರಾಮಯ್ಯ ಅವರು, “ಇದೇನ್ರಿ ಒಬ್ಬರೂ ಇಲ್ವಲ್ಲ…’ ಎಂದು ಹೇಳಿ ತಾವೇ ಗೈರು ಹಾಜರಾಗಿದ್ದ ಮಂತ್ರಿಗಳ ಪರವಾಗಿ ಕಾಗದ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಸದನದಲ್ಲಿ ಇದ್ದುದ್ದನ್ನು ಗಮನಿಸಿದ ಸಿಎಂ ಕೃಷಿ ಇಲಾಖೆಯ ಕಾಗದ ಪತ್ರವನ್ನು ಕೃಷ್ಣ ಬೈರೇಗೌಡರಿಗೆ ಮಂಡಿಸಲು ಸೂಚಿಸಿದರು. ಸಚಿವರಾದ ಬಸವವರಾಜ ರಾಯರಡ್ಡಿ, ದೇಶಪಾಂಡೆ, ಎಚ್‌.ಕೆ. ಪಾಟೀಲ್‌, ಎಚ್‌.ಎಂ ರೇವಣ್ಣ, ಎ. ಕೃಷ್ಣಪ್ಪ ಸೇರಿ 10 ಸಚಿವರು ಕಾಗದ ಪತ್ರ ಮಂಡಿಸಲು ಹಾಜರಾಗಿರಲಿಲ್ಲ.

ಸಚಿವರ ಗೈರುಹಾಜರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಸಚಿವರ ಪರವಾಗಿ ಮುಖ್ಯಮಂತ್ರಿಗಳು ಕಾಗದ ಪತ್ರ ಮಂಡಿಸುವ ಪರಿಸ್ಥಿತಿ ಬಂದಿತಲ್ಲ ಎಂದು ಆಡಳಿತ ಪಕ್ಷವನ್ನು ಛೇಡಿಸಿದರು. ಹಿರಿಯ ಶಾಸಕ ಸುರೇಶ್‌ ಕುಮಾರ್‌ ಅವರು ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೂ ಮುಖ್ಯಮಂತ್ರಿಗಳು ಒಬ್ಬರೇ ಸಚಿವ ಸಂಪುಟ ಸಭೆ ನಡೆಸಿದ್ದರು. ಅಧಿವೇಶನದ ಕೊನೆಯ ದಿನ ಸಹ ಮುಖ್ಯಮಂತ್ರಿಗಳು ಸದನದಲ್ಲಿ ಒಬ್ಬರೇ ಕಾಗದ ಪತ್ರ ಮಂಡಿಸುತ್ತಿದ್ದಾರೆಂದು ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next