ಲೀಡ್ಸ್: ಯುನಿವರ್ಸಲ್ ಬಾಸ್, ಸಿಕ್ಸರ್ ಕಿಂಗ್, ಕೆರಿಬಿಯನ್ ದೈತ್ಯ ಕ್ರಿಸ್ಟೋಫರ್ ಹೆನ್ರಿ ಗೇಲ್ ಗುರುವಾರ ತನ್ನ ಅಂತಿಮ ವಿಶ್ವಕಪ್ ಪಂದ್ಯ ಆಡಲಿಳಿದಿದ್ದಾರೆ.
ಐದು ವಿಶ್ವಕಪ್ ಆಡಿದ ಅನುಭವಿ ಕ್ರಿಸ್ ಗೇಲ್ ಅಫ್ಘಾನಿಸ್ಥಾನದ ವಿರುದ್ಧ ಕೊನೆಯ ಪಂದ್ಯದಲ್ಲಿ 18 ರನ್ ಗಳಿಸಿ ದೌಲತ್ ಜದ್ರನ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಇಕ್ರಂ ಅಲಿ ಖಾನ್ ಗೆ ಕ್ಯಾಚ್ ನೀಡಿ ಔಟಾದರು.
1999ರಲ್ಲಿ ಭಾರತದ ವಿರುದ್ದವೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಗೇಲ್ ಭಾರತದ ವಿರುದ್ದವೇ ತನ್ನ ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಡಲಿದ್ದಾರೆ. ಈ ವಿಶ್ವಕಪ್ ಕೂಟದ ನಂತರ ಭಾರತ, ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದೆ. ಗೇಲ್ ಭಾರತದ ವಿರುದ್ದ ಟೆಸ್ಟ್ ಮತ್ತು ಏಕದಿನ ಪಂದ್ಯ ಆಡುವ ಇರಾದೆ ಹೊಂದಿದ್ದಾರೆ.