ಸುರತ್ಕಲ್: ಶ್ರಾದ್ದಕ್ಕೆ ಬಂದಿದ್ದ ಯುವತಿಯರು ಸಮುದ್ರ ಸ್ನಾನ ಮಾಡಲು ತೆರಳಿರುವ ವೇಳೆ ಬೃಹತ್ ಗಾತ್ರದ ಅಲೆಗೆ ಸಿಲುಕಿ ನೀರು ಪಾಲಾದ ಘಟನೆ ಸುರತ್ಕಲ್‍ನ ಎನ್‍ಐಟಿಕೆ ಬೀಚ್‍ನಲ್ಲಿ ಭಾನುವಾರ ನಡೆದಿದೆ.
ಮಂಗಳೂರಿನ ನಿವಾಸಿಗಳಾದ ವೈಷ್ಣವಿ (21), ತ್ರಿಷಾ (17) ಮೃತ ದುರ್ದೈವಿಗಳು.
ಶ್ರಾದ್ದಕ್ಕೆಂದು 15 ಜನರ ತಂಡ ಬಂದಿದ್ದ ವೇಳೆ, ಸ್ನಾನ ಮಾಡಲು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಬೃಹತ್ ಗಾತ್ರದ ಅಲೆ ಬಂದು ಯುವತಿಯರು ಕೊಚ್ಚಿಹೋಗಿದ್ದಾರೆ.
ಇದನ್ನೂ ಓದಿ:ಪುತ್ರಿಯ ವಿವಾಹ ಆಮಂತ್ರಣ ನೀಡಲು ತೆರಳುವ ವೇಳೆ ಅಪಘಾತವಾಗಿ ತಂದೆ ಸಾವು
ಕೂಡಲೇ ಸ್ಥಳೀಯ ಈಜುಗಾರರು ಧಾವಿಸಿ, ಯುವತಿಯರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ, ತೀವ್ರ ಅಸ್ವಸ್ಥರಾದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.