Advertisement

ತೆಲುಗಿನತ್ತ ಆ ಕರಾಳ ರಾತ್ರಿ

11:37 AM Apr 11, 2020 | Suhan S |

ಕಳೆದ ವರ್ಷ ಕನ್ನಡದಲ್ಲಿ ತೆರೆಗೆ ಬಂದಿದ್ದ ಸಸ್ಪೆನ್ಸ್‌ – ಥ್ರಿಲ್ಲರ್‌ ಚಿತ್ರ ಆ ಕರಾಳ ರಾತ್ರಿ’ ನಿಮಗೆ ನೆನಪಿರಬಹುದು. ಕನ್ನಡದಲ್ಲಿ ಸಿನಿಪ್ರಿಯರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದ, ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಆ ಕರಾಳ ರಾತ್ರಿ’ ಚಿತ್ರ ಶೀಘ್ರದಲ್ಲಿಯೇ ತೆಲುಗಿನಲ್ಲೂ ತೆರೆಗೆ ಬರಲಿದೆ.

Advertisement

ಹೌದು, ಕನ್ನಡದಲ್ಲಿ ಕಡಿಮೆ ಬಜೆಟ್‌ ನಲ್ಲಿ ತಯಾರಾಗಿ ಬಾಕ್ಸಾ ಆಫೀಸ್‌ ನಲ್ಲಿ ಕಮಾಲ್‌ ಮಾಡಿ ಗೆಲುವಿನ ನಗೆ ಬೀರಿದ್ದ “ಆ ಕರಾಳ ರಾತ್ರಿ’ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್‌ ಮಾಡಿ ತೆರೆಗೆ ತರಲು ಟಾಲಿವುಡ್‌ ನ ಹಲವು ನಿರ್ಮಾಪಕರು, ನಿರ್ದೇಶಕರು ಮುಂದೆ ಬಂದಿದ್ದರು. ಬಳಿಕ ಹಲವು ಸುತ್ತಿನ ಮಾತುಕಥೆಯ ಬಳಿಕ “ಆ ಕರಾಳ ರಾತ್ರಿ’ ಚಿತ್ರದ ರಿಮೇಕ್‌ ರೈಟ್ಸ್ ಮಾರಾಟವಾಗಿದ್ದು, ತೆಲುಗು ಅವತರಣಿಕೆಯಲ್ಲಿ ಚಿತ್ರ ತೆರೆಗೆ ಬರೋದಕ್ಕೆ ತೆರೆಮರೆಯಲ್ಲಿ ತಯಾರಾಗುತ್ತಿದೆ. ಆ ಕರಾಳ ರಾತ್ರಿ’ ಚಿತ್ರದ ತೆಲುಗು ರಿಮೇಕ್‌ ಬಗ್ಗೆ ಮಾತನಾಡುವ ಚಿತ್ರದ ನಿರ್ದೇಶಕ ದಯಾಳ್‌ ಪದ್ಮನಾಭನ್‌, ಬೇರೆ ಬೇರೆ ಭಾಷೆಗಳಲ್ಲಿ ಅದರ ರಿಮೇಕ್‌ ರೈಟ್ಸ್ ಗೆ ಬೇಡಿಕೆ ಬರಲು ಶುರುವಾಯ್ತು. ಈಗಾಗಲೇ ಬೇರೆ ಕೆಲವು ಭಾಷೆಗಳ ರಿಮೇಕ್‌ ರೈಟ್ಸ್ ಸೇಲ್‌ ಆಗಿದ್ದು, ಈಗ ತೆಲುಗಿನಲ್ಲಿ ಈ ಸಿನಿಮಾ ರಿಮೇಕ್‌ ಆಗುತ್ತಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next