Advertisement

ಎ.ಜೆ. ವೈದ್ಯಕೀಯ ಕಾಲೇಜು; ಕೋವಿಡ್‌-19 ಪರೀಕ್ಷೆಗೆ ಐಸಿಎಂಆರ್‌ ಅನುಮೋದನೆ

08:07 AM Jul 23, 2020 | mahesh |

ಮಂಗಳೂರು: ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಆ್ಯಂಡ್‌ ರೀಸರ್ಚ್‌ ಕೇಂದ್ರವು ಕೋವಿಡ್‌ -19 ಪರೀಕ್ಷೆಗೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌)ಯ ಅನು ಮೋದನೆಯನ್ನು ಪಡೆದುಕೊಂಡಿದೆ.

Advertisement

ಎ.ಜೆ. ಪಿಸಿಆರ್‌ ಮತ್ತು ವೈರಾಲಜಿ ಪ್ರಯೋಗಾಲಯದ ವೈದ್ಯಕೀಯ ಪರೀಕ್ಷೆಯ ಸೌಲಭ್ಯಗಳಿಗಾಗಿ ಇತ್ತೀಚೆಗೆ ಎನ್‌ಎಬಿಎಲ್‌ (ರಾಷ್ಟ್ರೀಯ ಪರೀಕ್ಷಾ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯ ಗಳ ಮಾನ್ಯತೆ ಮಂಡಳಿ) ಮೌಲ್ಯಮಾಪನ ಮಾಡಿ ಮಾನ್ಯತೆ ನೀಡಿತು. ಇದು ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿ ರುವ ಕೋವಿಡ್‌ -19 ಪರೀಕ್ಷಾ ಸೌಲಭ್ಯಗಳಿಗೆ ಉತ್ತೇಜನ ನೀಡಿದೆ. ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಆ್ಯಂಡ್‌ ರಿಸರ್ಚ್‌ ಸೆಂಟರ್‌ ಲಕ್ಷ್ಮೀ ಸ್ಮಾರಕ ಶಿಕ್ಷಣ ಟ್ರಸ್ಟ್‌ (ಎಲ್‌ಎಂಇಟಿ)ನ ಒಂದು ಘಟಕವಾಗಿದೆ.

ಸರಕಾರದ ಮಾರ್ಗಸೂಚಿಗಳಂತೆ ಕೋವಿಡ್‌ -19 ಪರೀಕ್ಷೆಯನ್ನು ಮಾಡಲಾಗುವುದು. ಮಾದರಿ ಸಂಗ್ರಹಕ್ಕಾಗಿ ಮೀಸಲಾದ ಕಿಯೋಸ್ಕ್ ಆಸ್ಪತ್ರೆಯಲ್ಲಿ ಲಭ್ಯವಿದೆ. ಎ.ಜೆ. ಪಿಸಿಆರ್‌ ಮತ್ತು ವೈರಾಲಜಿ ಪ್ರಯೋಗಾಲಯವು ಸುಧಾರಿತ ರಿಯಲ್‌ ಟೈಮ್‌ ಆರ್‌ಟಿ-ಪಿಸಿಆರ್‌ ಯಂತ್ರ, ಸಂಪೂರ್ಣ ಸ್ವಯಂ ಚಾಲಿತ ನ್ಯೂಕ್ಲಿಯಿಕ್‌ ಆ್ಯಸಿಡ್‌ ಎಕ್ಸ್‌ಟ್ರಾಕ್ಟರ್‌, ಜೈವಿಕ ಸುರಕ್ಷತಾ ಕ್ಯಾಬಿನೆಟ್‌ಗಳು, ಕೇಂದ್ರಾಪಗಾಮಿ ಮತ್ತು ಇತರ ಉಪಕರಣಗಳನ್ನು ಒಳಗೊಂಡಿದೆ.

ಮೈಕ್ರೋಬಯಾಲಜಿ ವಿಭಾಗದ ಸಿಬಂದಿ ಮತ್ತು ತಂತ್ರಜ್ಞರು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಆಣಿಕ ಪರೀಕ್ಷೆಯಲ್ಲಿ ತರಬೇತಿ ಪಡೆದಿದ್ದಾರೆ. ಆಸ್ಪತ್ರೆಯು ಶಂಕಿತ ಮತ್ತು ಸಕಾರಾತ್ಮಕ ಕೋವಿಡ್‌ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಮೀಸಲಾದ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಿದೆ ಮತ್ತು ಸಾಕಷ್ಟು ಮೂಲ ಸೌಕರ್ಯ ಮತ್ತು ಸಮರ್ಪಕ ಸಿಬಂದಿಯನ್ನು ಒಳಗೊಂಡಿದೆ. ಮಾತ್ರವಲ್ಲದೆ ತನ್ನ ಸೇವೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next