ದುಡಿಮೆಯನ್ನೇ ನಂಬಿರುವ ಇವರ ಬದುಕು ಯುವ ಕೃಷಿಕರಿಗೆ ಮಾದರಿ. ಈಗಲೂ ಭತ್ತ, ಕಾಯಿಪಲ್ಲೆ, ಶೇಂಗಾ, ಕಡಲೆ, ತೆಂಗು ಬೆಳೆದು ಜೀವನ ನಡೆಸುತ್ತಾರೆ. ಸುತ್ತಲಿನ ಗ್ರಾಮಸ್ಥರಿಗೆ ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದಾರೆ.
Advertisement
ಮಕ್ಕಳೇ ಹಿರಿಯ ನಾಗರಿಕರು: ಭಗವಂತ ಪಡ್ತಿ ಅವರಿಗೆ 109 ವಯಸ್ಸು ಎಂದು ಅಂದಾಜು. ಅವರ ಜನ್ಮದಿನಕ್ಕೆ ದಾಖಲೆಗಳಿಲ್ಲ. ಪಡ್ತಿ ಪತ್ನಿ ಆನಂದಿಗೆ 95 ವರ್ಷ. ಈ ದಂಪತಿಗಳಿಗೆ 12 ಮಕ್ಕಳು. ಈ ಪೈಕಿ ಮೂವರು ಹದಿಹರೆಯದಲ್ಲೇ ತೀರಿ ಹೋದರಂತೆ. ಬದುಕಿರುವ ಗಂಡು ಮಕ್ಕಳಲ್ಲಿ ಒಬ್ಬರಿಗೆ 85. ಮತ್ತೂಬ್ಬರಿಗೆ 75 ವರ್ಷ. 5 ಹೆಣ್ಣು ಮಕ್ಕಳಲ್ಲಿ 4 ಜನರಿಗೆ ಮದುವೆಯಾಗಿದೆ. 4ಗಂಡು ಮಕ್ಕಳ ಪೈಕಿ ಇಬ್ಬರು ಇತ್ತೀಚೆಗೆ ನಿಧನರಾಗಿದ್ದಾರೆ. ಕೊನೆಯ ಮಗಳ ಜೊತೆ ಭಗವಂತ ಪಡ್ತಿ ಹೆಬ್ಬುಳ ಗ್ರಾಮದಲ್ಲಿ ನೆಲೆಸಿದ್ದಾರೆ. ಮೊಮ್ಮಕ್ಕಳು ಆಗಾಗ ಬಂದು ಹೋಗುತ್ತಿದ್ದಾರೆ.
Related Articles
ಕೃಷಿಯಿಂದ ಯುವ ಪೀಳಿಗೆ ದೂರ ವಾಗುತ್ತಿರುವ ಈ ಕಾಲದಲ್ಲಿ ಭಗವಂತ ಪಡ್ತಿ ಕೃಷಿಕರಿಗೆ ಮತ್ತು ಯುವ ಪೀಳಿಗೆಗೆ
ಆದರ್ಶವಾಗಿದ್ದಾರೆ. ಅವರನ್ನು ಪ್ರೀತಿ ಯಿಂದ ಕಾಣುವ ಗ್ರಾಮಸ್ಥರು, ಬೈಕ್ ನಲ್ಲಿ ಕೂರಿಸಿಕೊಂಡು ಊರಿನಲ್ಲಿ ಸುತ್ತು ಹಾಕಿಸುತ್ತಾರೆ ಎನ್ನುತ್ತಾರೆ ಗ್ರಾಮದ ಮಹೇಶ್ ನಾಯ್ಕ, ಹೊನ್ನಪ್ಪ ನಾಯ್ಕ
Advertisement
ಭೂಮಿ ತಾಯಿ ನನ್ನ ಕೈಬಿಟ್ಟಿಲ್ಲ. ದಶಕಗಳಿಂದ ನಾನು ಭೂಮಿಯ ಜೊತೆ ಬೆರೆತಿದ್ದೇನೆ. ಭೂಮಿ ನನಗೆ ಅನ್ನ ಕೊಟ್ಟಿದೆ.●ಭಗವಂತ ಪಡ್ತಿ, ಕೃಷಿಕ, ಅವರ್ಸಾ ●ನಾಗರಾಜ್ ಹರಪನಹಳ್ಳಿ