Advertisement

ಸುಳ್ಯ: ಹೆದ್ದಾರಿ ಬಳಿ ಬೃಹತ್‌ ಕಾಡುಕೋಣ ಪತ್ತೆ

07:50 PM Oct 09, 2022 | Team Udayavani |

ಸುಳ್ಯ: ಸುಳ್ಯ ಪರಿಸರದಲ್ಲಿ ಕೆಲ ದಿನಗಳಿಂದ ಕಾಡುಕೋಣ ಓಡಾಟ ನಡೆಸುತ್ತಿರುವ ಬಗ್ಗೆ ವರದಿಯಾಗಿದ್ದು, ಶನಿವಾರ ಬೃಹತ್‌ ಕಾಡುಕೋಣವೊಂದು ಹೆದ್ದಾರಿ ಬಳಿ ರಸ್ತೆ ದಾಟುತ್ತಿರುವ ವಿಡಿಯೋ ವೈರಲ್‌ ಆಗಿದೆ.

Advertisement

ಬೆಳ್ಳಾರೆ-ಸುಳ್ಯ ಹೆದ್ದಾರಿಯ ಬೇಂಗಮಲೆ ಬಳಿ ಕಾಡು ಪ್ರದೇಶದಿಂದ ಬೃಹತ್‌ ಕಾಡುಕೋಣ ರಸ್ತೆ ದಾಟಿ ಮತ್ತೊಂದು ಭಾಗದತ್ತ ತೆರಳಿದೆ. ಇದನ್ನು ವಾಹನ ಸವಾರರು ವಿಡಿಯೋ ಚಿತ್ರೀಕರಿಸಿದ್ದು, ಇದೀವ ವೈರಲ್‌ ಆಗಿದೆ. ಶನಿವಾರ ಸಂಜೆ ಕಾಡುಕೋಣ ತೆರಳಿರುವುದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಕಾಡುಕೋಣ ಜಾಲ್ಸೂರು ಪ್ರದೇಶದಲ್ಲೂ ತೋಟ, ಮನೆ ಬಳಿ ಕಂಡುಬಂದ ಬಗ್ಗೆ ಜನರು ತಿಳಿಸಿದ್ದರು. ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ

Advertisement

Udayavani is now on Telegram. Click here to join our channel and stay updated with the latest news.

Next