Advertisement

ಕಡಬ ಪೇಟೆಯಲ್ಲಿ ರಸ್ತೆಗೆ ಬಾಗಿರುವ ಬೃಹತ್‌ ಮರ

10:59 AM Jul 14, 2022 | Team Udayavani |

ಕಡಬ: ಪೇಟೆಯಲ್ಲಿ ರಸ್ತೆಗೆ ಬಾಗಿರುವ ಬೃಹತ್‌ ಮರವೊಂದರ ರೆಂಬೆಗಳು ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಸಾಧ್ಯತೆಗಳಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.

Advertisement

ಪೇಟೆಯ ದೈವಗಳ ಮಾಡದ ಬಳಿ ಇರುವ ಬಸ್‌ ತಂಗುದಾಣದ ಎದುರು ರಸ್ತೆಯ ಬದಿಯಲ್ಲಿರುವ ಈ ಮರದ ಉದ್ದನೆಯ ರೆಂಬೆಗಳು ರಸ್ತೆಯತ್ತ ಚಾಚಿ ಕೊಂಡಿದ್ದು, ಅದರ ಕೆಳಗೆ ವಿದ್ಯುತ್‌ ಲೈನ್‌ ಕೂಡ ಹಾದುಹೋಗುತ್ತಿದೆ. ಉಪ್ಪಿನಂಗಡಿ -ಕಡಬದ ಮೂಲಕ ಸುಬ್ರಹ್ಮ ಣ್ಯದತ್ತ ತೆರಳುವ ಸರಕಾರಿ ಬಸ್‌ ಗಳು ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಿಕೊಳ್ಳಲು ಇದೇ ಮರದಡಿಯಲ್ಲಿ ನಿಲ್ಲುತ್ತಿವೆ. ಮರದ ಕೆಳಗೆ ಗೂಡಂಗಡಿಗಳು ಕೂಡ ಇದ್ದು, ಸದಾ ಇಲ್ಲಿ ಜನರು ಓಡಾಡುತ್ತಿರುತ್ತಾರೆ. ಮರ ಅಥವಾ ಅದರ ರೆಂಬೆಗಳು ಮುರಿದುಬಿದ್ದರೆ ಅಪಾಯ ಖಂಡಿತ ಎನ್ನುವ ಪರಿಸ್ಥಿತಿ ಇಲ್ಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡಬ ಮೆಸ್ಕಾಂ ಎಇಇ ಸಜಿಕುಮಾರ್‌, ಪ.ಪಂ. ವತಿಯಿಂದ ಮರದ ರೆಂಬೆಗಳನ್ನು ತೆರವುಗೊಳಿಸುವುದಾದರೆ ಆ ಸಂದ ರ್ಭದಲ್ಲಿ ಮರದ ಕೆಳ ಭಾಗದಿಂದ ಹಾದು ಹೋಗಿರುವ ವಿದ್ಯುತ್‌ ತಂತಿಯನ್ನು ತೆಗೆದುಕೊಡುವುದಾಗಿ ತಿಳಿಸಿದ್ದಾರೆ.

ಟ್ರಾನ್ಸ್‌ಫಾರ್ಮರ್‌ಗೂ ಅಪಾಯ ಸಾಧ್ಯತೆ

ಒಂದು ವೇಳೆ ಮರ ಅಥವಾ ಅದರ ರೆಂಬೆಗಳು ವಿದ್ಯುತ್‌ ಲೈನ್‌ನ ಮೇಲೆ ಬಿದ್ದರೆ ಹತ್ತಿರದಲ್ಲಿಯೇ ಇರುವ ಟ್ರಾನ್ಸ್‌ ಫಾರ್ಮರ್‌ ಕೂಡ ಉರುಳುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ಪಕ್ಕದಲ್ಲಿಯೇ ಇರುವ ಆಟೋ ತಂಗುದಾಣದ ಮೇಲೆ ಟ್ರಾನ್ಸ್‌ಫಾರ್ಮರ್‌ ಬೀಳುವ ಭೀತಿ ಇದೆ. ಕೂಡಲೇ ಪ.ಪಂ. ಅಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರೆಂಬೆಯನ್ನಾದರೂ ತೆರವುಗೊಳಿಸಬೇಕೆಂದು ಕಡಬ ಕದಂಬ ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಚೆನ್ನಪ್ಪ ಗೌಡ ಆಗ್ರಹಿಸಿದ್ದಾರೆ.

ರೆಂಬೆ ತೆರವಿಗೆ ಕ್ರಮ: ಅಪಾಯಕಾರಿ ಮರದಿಂದ ತೊಂದ ರೆಯಾಗುವ ಸಾಧ್ಯತೆ ಗಮನಕ್ಕೆ ಬಂದಿದೆ. ಮೆಸ್ಕಾಂ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಮರದ ಅಪಾಯಕಾರಿ ರೆಂಬೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. –ಪಕೀರ ಮೂಲ್ಯ, ಮುಖ್ಯಾಧಿಕಾರಿ, ಕಡಬ ಪ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next