Advertisement

ಐಹೊಳೆಯತ್ತ ಪ್ರವಾಸಿಗರ ದಂಡು

12:21 PM Oct 09, 2019 | Team Udayavani |

ಅಮೀನಗಡ: ಪ್ರವಾಹ ಭೀತಿಯಿಂದಾಗಿ ಪ್ರವಾಸ ಮೊಟಕುಗೊಳಿಸಿದ್ದ ಪ್ರವಾಸಿಗರು ಪ್ರವಾಸಿ ತಾಣ ಐಹೊಳೆ ಕಡೆಗೆ ಮುಖ ಮಾಡಿದ್ದಾರೆ.

Advertisement

ರವಿವಾರ ಸೇರಿದಂತೆ ಮಹಾನವಮಿ, ವಿಜಯದಶಮಿ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಸಾಲು ಸಾಲು ರಜೆ ಹಾಗೂ ಮಕ್ಕಳಿಗೆ ದಸರಾ ನಿಮಿತ್ತ ಶಾಲೆಗಳ ರಜೆ ಹಿನ್ನೆಲೆಯಲ್ಲಿ ಐಹೊಳೆಯಲ್ಲಿರುವ ಐತಿಹಾಸಿಕ ಪ್ರಸಿದ್ಧ ದೇವಾಲಯಗಳನ್ನು ವೀಕ್ಷಣೆ ಮಾಡಲು ಆಗಮಿಸುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ವಿಶೇಷವಾಗಿ ಐಹೊಳೆ ಮತ್ತು ಪಟ್ಟದಕಲ್ಲಿಗೆ ಎರಡು ಮೂರು ದಿನಗಳಲ್ಲಿ ರಾಜ್ಯದ ಮತ್ತು ಹೊರರಾಜ್ಯದ ವಿವಿಧ ಭಾಗಗಳಿಂದ ತಂಡೋಪತಂಡವಾಗಿ ಸಾವಿರಾರು ಜನ ಪ್ರವಾಸಿಗರು ಆಗಮಿಸಿದ್ದು, ಪ್ರವಾಸಿ ಸ್ಥಳಗಳಲ್ಲಿ ಜನಸಾಗರ ಕಂಡು ಬರುತ್ತಿದೆ.

ಪ್ರವಾಸಿಗರಿಂದ ಸ್ಮಾರಕ ವೀಕ್ಷಣೆ: ಐಹೊಳೆಗೆ ಬಂದ ಪ್ರವಾಸಿಗರು ಇತಿಹಾಸ ಪ್ರಸಿದ್ದ ಪಾರಂಪರಿಕ ಸ್ಮಾರಕಗಳಾದ ದುರ್ಗಾ ದೇವಾಲಯ, ಲಾಡಖಾನ, ಗೌಡರ ದೇವಾಲಯ, ಹುಚ್ಚಮಲ್ಲಿ ದೇವಾಲಯ, ರಾವಳಪಡಿ ಗುಹಾಂತರ, ಗಳಗನಾಥ ದೇವಾಲಯ,ಸೂರ್ಯನಾರಯಣನ ಗುಡಿ, ಕೊಂತಿ ಗುಡಿಗಳ ಗುಂಪು ಸೇರಿದಂತೆ 125 ಕ್ಕೂ ಹೆಚ್ಚು ದೇಗುಲಗಳನ್ನು ಐಹೊಳೆ ಪರಿಸರದಲ್ಲಿ ನೋಡಬಹುದಾಗಿದೆ ಮತ್ತು ವಿಶಾಲವಾದ ಸ್ಥಳಗಳನ್ನು ಒಳಗೊಂಡಂತೆ ದುರ್ಗದ ಗೋಡೆಗಳಿದ್ದು, ಈಗ ಅವುಗಳ ಕುರುಹುಗಳ ಮಾತ್ರ ಉಳಿದಿವೆ.

ಆರನೇಯ ಶತಮಾನದ ಈ ಕೋಟೆ ಕರ್ನಾಟಕದ ಒಂದು ಪ್ರಾಚೀನ ದುರ್ಗವಾಗಿದೆ. ಇಲ್ಲಿ ಬೃಹತ್‌ ಶಿಲಾಯುಗದ ಕಾಲದಿಂದಲೂ ಪ್ರಾಚ್ಯ ಅವಶೇ‚ಷಗಳು ಕಾಣಸಿಗುತ್ತವೆ. ಪ್ರವಾಸಿಗರು ಐಹೊಳೆಯಲ್ಲಿ ಸುತ್ತಾಡಿ ಪಾರಂಪರಿಕೆ ದೇವಾಲಯಗಳನ್ನು ವೀಕ್ಷಣೆ ಮಾಡಿ ರಜೆಯ ಮಜಾ ಪಡೆಯುತ್ತಿದ್ದಾರೆ. ಸ್ಥಳೀಯ ಪ್ರವಾಸೋದ್ಯಮ ಕಳೆ ಕಟ್ಟಿದೆ.

ವ್ಯಾಪಾರ ಜೋರು: ಐತಿಹಾಸಿಕ ಪ್ರವಾಸಿ ಕೇಂದ್ರ ಐಹೊಳೆಯಲ್ಲಿ ಪ್ರವಾಸಿಗರ ದಂಡು ಏರಿಕೆಯಾಗಿದೆ ಇದರಿಂದ ಪ್ರವಾಸಿಗರ ನಂಬಿದ್ದ ಹೋಟೆಲ್‌ಗ‌ಳು, ಸಣ್ಣ ವ್ಯಾಪಾರಿಗಳು, ಹಣ್ಣು ವ್ಯಾಪಾರಿಗಳು, ಬೀದಿ ವ್ಯಾಪಾರಿಗಳ ಮುಖದಲ್ಲಿ ಸಂತಸ ಮೂಡಿಸಿದೆ. ಪ್ರವಾಸಕ್ಕೆ ಆಗಮಿಸಿದ್ದ ಪ್ರವಾಸಿಗರು ತಿಂಡಿ ತಿನಿಸಿನ ಅಂಗಡಿಗಳಲ್ಲಿ ತಿಂಡಿ ಖರೀದಿ, ಹಣ್ಣು ಹಂಪಲು ಖರೀದಿ ಕೂಡಾ ಹೆಚ್ಚಾಗಿತ್ತು. ಪ್ರವಾಸಿ ತಾಣಗಳಲ್ಲಿ ಕೆಲ ಮೂಲಭೂತ ಕೊರತೆಯಿಂದ ಪ್ರವಾಸಿಗರು ಪರದಾಡಿದ್ದು ಕೂಡಾ ಕಂಡು ಬಂದಿದ್ದು ಮಾತ್ರ ಬೇಸರದ ಸಂಗತಿ.

Advertisement

ಐತಿಹಾಸಿಕ ಪ್ರವಾಸಿ ತಾಣ ಐಹೊಳೆಗೆ ಮಲಪ್ರಭಾ ನದಿಯ ಪ್ರವಾಹ ಬಂದ ಹೋದ ನಂತರ ಪ್ರವಾಸಿಗರ ಸಂಖ್ಯೆ ಬಹುತೇಕ ಕಡಿಮೆಯಾಗಿತ್ತು. ಈಗ ಸಾಲು ಸಾಲು ಸರ್ಕಾರಿ ಕಚೇರಿಯ ರಜೆ ಮತ್ತು ದಸರಾ ಹಬ್ಬದ ನಿಮಿತ್ತ ಶಾಲೆಗಳ ರಜೆ ಹಿನ್ನೆಲೆಯಲ್ಲಿ ಎರಡು ಮೂರು ದಿನಗಳಿಂದ ಪ್ರವಾಸಿಗರ ಆಗಮನ ಹೆಚ್ಚಾಗಿದೆ.  –ಬಿ.ಡಿ. ಮುತ್ತಗಿ, ಭಾರತೀಯ ಪುರಾತತ್ವ ಇಲಾಖೆ ಸಿಬ್ಬಂದಿ

 

-ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next