ಕೂಡಲಸಂಗಮ: ಮಕರ ಸಂಕ್ರಾಂತಿ ಪುಣ್ಯಸ್ನಾನ ನಿಷೇಧದ ನಡುವೆ ಕೃಷ್ಣಾ, ಮಲಪ್ರಭಾ ನದಿಗಳ ಸಂಗಮ ಕೂಡಲಸಂಗಮಕ್ಕೆ ರಾಜ್ಯ ಮಾತ್ರವಲ್ಲದೆ ನೆರೆ ರಾಜ್ಯಗಳಿಂದ ಆಗಮಿಸಿದ ಅಪಾರ ಭಕ್ತರು ಬಸವಣ್ಣನ ಐಕ್ಯ ಮಂಟಪ, ಕ್ಷೇತ್ರಾಧಿಪತಿ ಸಂಗಮನಾಥನ ದರ್ಶನ ಪಡೆದರು. ಕೆಲವು ಭಕ್ತರು ರಥದ ಬೀದಿ ಬಳಿಯ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ಸಂಕ್ರಾಂತಿ ಆಚರಿಸಿದರು.
ಬಸವ ಧರ್ಮ ಪೀಠದ ದಿಂದ ನಡೆಯುತ್ತಿರುವ 34ನೇ ಶರಣ ಮೇಳ ಹಾಗೂ ಲಿಂಗಾಯತ ಪಂಚಮಸಾಲಿ ಪೀಠದಿಂದ ಗುರುವಾರ ಹಮ್ಮಿಕೊಂಡ 2ಎ ಮೀಸಲಾತಿಗಾಗಿ ಪಾದಯಾತ್ರೆ ಸಮಾರಂಭಕ್ಕೆ ಆಗಮಿಸಿದ್ದ ಭಕ್ತರು, ಮಕರ ಸಂಕ್ರಾಂತಿಯ ನಿಮಿತ್ತ ಕೆಲವು ಭಕ್ತರು ಬಂದಿದ್ದರಿಂದ ಕೂಡಲಸಂಗಮದ ರಸ್ತೆಗಳು ಜನರಿಂದ ತುಂಬಿಕೊಂಡಿದ್ದವು.
ಇದನ್ನೂ ಓದಿ:ಕೊಟ್ಟಮಾತಿಗೆ ತಪ್ಪಿದ ಸಿಎಂ: ಕಾಶಪ್ಪನವರ
ಕೂಡಲಸಂಗಮ ಅಭಿವೃದ್ಧಿ ಮಂಡಳಿ ಬೆಳಗ್ಗೆಯಿಂದಲೇ ದೇವಾಲಯ ಆವರಣದಲ್ಲಿ ಧ್ವನಿವರ್ಧಕದ ಮೂಲಕ ಸಾಮಾಜಿಕ ಅಂತರ ಕಾಪಾಡಿ, ಸ್ಯಾನಿಟೈಸರ್ ಹಾಕಿಕೊಳ್ಳಿ, ಮಾಸ್ಕ್ ಇಲ್ಲದೇ ಪ್ರವೇಶ ಇಲ್ಲ, ನದಿಯ ಸ್ನಾನ ನಿಷೇಧಿಸಿದೆ ಎಂದು ನಿರಂತರ ಘೋಷಿಸುತ್ತಿದ್ದರು.
ಪ್ರಮುಖ ಜಾಗದಲ್ಲಿ ಬ್ಯಾನರ್‌ಗಳನ್ನು ಅಳವಡಿಸಿದ್ದರು. ಸಂಗಮೇಶ್ವರ ದೇವಾಲಯ ಆವರಣ ಬಳಿಯ ಕೃಷ್ಣಾ, ಮಲಪ್ರಭಾ ನದಿಯ ದಡಕ್ಕೆ ಸ್ನಾನಕ್ಕೆ ತೆರಳದಂತೆ ಮಂಡಳಿಯ ಸಿಬ್ಬಂದಿ ತಗಡಿನ ಶೀಟ್‌ಗಳನ್ನು ಹಾಕಿದ್ದರು. ಅಧಿ ಕ ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದರಿಂದ ನದಿಯ ದಡ ಸಂಪೂರ್ಣ ಖಾಲಿ ಇತ್ತು. ಸಂಗಮೇಶ್ವರ ದೇವಾಲಯ, ಬಸವಣ್ಣನ ಐಕ್ಯ ಮಂಟಪ ದರ್ಶನಕ್ಕೆ ಭಕ್ತರು ಸರದಿಯ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಬಸವೇಶ್ವರ ವೃತ್ತದಿಂದ ದೇವಾಲಯಕ್ಕೆ ಇರುವ ಮುಖ್ಯ ರಸ್ತೆಗಳ ವಾಹನ ಸಂಚಾರ ನಿಕ್ಷೇದಿಸಿದ್ದರಿಂದ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಿತ್ತು.