Advertisement

Para Asiad: ಪ್ಯಾರಾ ಏಷ್ಯಾಡ್‌ನ‌ಲ್ಲಿ ಐತಿಹಾಸಿಕ ಸಾಧನೆ- ಒಟ್ಟು 82 ಪದಕಗಳನ್ನು ಗೆದ್ದ ತಂಡ

10:34 PM Oct 26, 2023 | Team Udayavani |

ಹಾಂಗ್‌ಝೋ: ಈ ಬಾರಿಯ ಏಷ್ಯನ್‌ ಗೇಮ್ಸ್‌ನಲ್ಲಿ 107 ಪದಕ ಗೆದ್ದು ಅಮೋಘ ಸಾಧನೆ ಮಾಡಿದ್ದ ಭಾರತ, ಇದೀಗ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲೂ ಐತಿಹಾಸಿಕ ಸಾಧನೆ ಮಾಡಿದೆ. ಕೂಟ ಮುಗಿಯುವುದಕ್ಕೆ ಇನ್ನೂ ಎರಡು ದಿನಗಳಿರುವಂತೆಯೇ ಭಾರತದ ಪದಕಗಳ ಸಂಖ್ಯೆ 82ಕ್ಕೆ ಮುಟ್ಟಿದೆ. ಇದು ಹಿಂದೆಂದಿಗಿಂತಲೂ ಭಾರತದ ಶ್ರೇಷ್ಠ ಸಾಧನೆ. 2018ರ ಆವೃತ್ತಿಯಲ್ಲಿ 72 ಪದಕ ಗೆದ್ದಿದ್ದು ಭಾರತದ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು.

Advertisement

18
ಗುರುವಾರ ಭಾರತ ಒಟ್ಟು 18 ಪದಕಗಳನ್ನು ಗೆದ್ದಿದೆ. ಇದರಲ್ಲಿ 3 ಚಿನ್ನದ ಪದಕಗಳು ಸೇರಿವೆ.
82
ಒಟ್ಟಾರೆ ಭಾರತದ ಪದಕಗಳ ಸಂಖ್ಯೆ 82ಕ್ಕೆ ಮುಟ್ಟಿದೆ. ಇದರಲ್ಲಿ 18 ಚಿನ್ನ, 23 ಬೆಳ್ಳಿ, 41 ಕಂಚಿನ ಪದಕಗಳು ಸೇರಿವೆ.
72
2018ರ ಜಕಾರ್ತ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 72 ಪದಕಗಳನ್ನು ಗೆದ್ದಿತ್ತು. ಆಗ 15 ಚಿನ್ನ, 24 ಬೆಳ್ಳಿ, 33 ಕಂಚಿನ ಪದಕಗಳು ದಕ್ಕಿದ್ದವು. ಇದೇ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು.

8ನೇ ಸ್ಥಾನಕ್ಕೆ ಕುಸಿತ
ಭಾರತ ಪದಕ ಗಳಿಕೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದರೂ, ಪದಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ. ಬುಧವಾರ ಭಾರತ 6ನೇ ಸ್ಥಾನದಲ್ಲಿತ್ತು. ಗುರುವಾರ ಭಾರತಕ್ಕೆ ಬಂದಿದ್ದು ಕೇವಲ 3 ಚಿನ್ನಗಳಷ್ಟೇ. ಇದೇ ಕುಸಿತಕ್ಕೆ ಕಾರಣವಾಯಿತು.

ಚಿನ್ನ ವಿಜೇತ ದಿಗ್ಗಜರು
ಸಚಿನ್‌ ಸರ್ಜೆರಾವ್‌ ಖೀಲಾರಿ-ಪುರುಷರ ಎಫ್46 ಶಾಟ್‌ಪುಟ್‌
ಸಿದ್ಧಾರ್ಥ ಬಾಬು -ಆರ್‌6 ಮಿಶ್ರ 50 ಮೀ. ರೈಫ‌ಲ್‌ ಪ್ರೋನ್‌
ಶೀತಲ್‌ ದೇವಿ-ರಾಕೇಶ್‌ ಕುಮಾರ್‌-ಬಿಲ್ಗಾರಿಕೆ ಮಿಶ್ರ ತಂಡ ವಿಭಾಗ (ಚೀನಾ ಎದುರಾಳಿಗಳ ವಿರುದ್ಧ ಜಯ)

Advertisement

Udayavani is now on Telegram. Click here to join our channel and stay updated with the latest news.

Next