Advertisement

ಲಾಠಿ ಹಿಡಿವ ಕೈ ಕೊಳಲು ಹಿಡಿದಾಗ…

04:57 AM May 18, 2020 | Sriram |

ಮಂಗಳೂರು: ನಗರದ ಕದ್ರಿ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಮನೋಜ್‌ ಗಟ್ಟಿ ಅವರ ಕೊಳಲು ವಾದನ ಪ್ರತಿಭೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗಿದೆ.

Advertisement

ಲಾಠಿ ಹಿಡಿಯುವ ಕೈ ಕೆಲವೊಮ್ಮೆ ಕೊಳಲು ಹಿಡಿದು ನುಡಿಸುವಾಗ ಸುಮಧುರ ಸಂಗೀತ ಮಾಧುರ್ಯ ಪಸರಿಸುತ್ತದೆ. ಲಾಠಿಯು ಜನರಿಗೆ ಭಯ ಮತ್ತು ರಕ್ಷಣೆಯನ್ನು ಒದಗಿಸುತ್ತಿದ್ದರೆ ಕೊಳಲಿನ ಧ್ವನಿ ಜನರನ್ನು ತನ್ನತ್ತ ಆಕರ್ಷಿಸುತ್ತದೆ.

ಮನೋಜ್‌ 29 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿದ್ದು, ಮೂಲ್ಕಿ, ಮಂಗಳೂರು ಗ್ರಾಮಾಂತರ ಠಾಣೆ, ಬರ್ಕೆ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಕದ್ರಿ ಠಾಣೆಯಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಆಗಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಕೊಳಲು ಆಸಕ್ತಿ ರೂಢಿಸಿಕೊಂಡಿದ್ದಾರೆ. ಕೆಲವು ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಕೊಳಲು ವಾದನ ಕಛೇರಿ ನೀಡಿದ್ದಾರೆ.

ಬಾಲ್ಯದಲ್ಲಿ ಜಾತ್ರೆಯ ಸಂತೆಯಲ್ಲಿ ಮಾರಾಟಕ್ಕೆ ಇರಿಸಿದ್ದ ಕೊಳಲುಗಳನ್ನು ನೋಡಿ ಆಕರ್ಷಿತನಾಗಿದ್ದೆ. ಹಾಗೆ ಅಲ್ಲಿಂದ ಕೊಳಲು ಖರೀದಿಸಿಕೊಂಡು ಬಂದು ಅದನ್ನು ನುಡಿಸಲು ಅಭ್ಯಾಸ ಮಾಡುತ್ತಿದ್ದೆ. ಈ ಮೂಲಕ ಕೊಳಲು ವಾದನದ ಬಗ್ಗೆ ನನಗೆ ಅಭಿ ರುಚಿ ಹುಟ್ಟಿತ್ತು ಎನ್ನುತ್ತಾರೆ ಹೆಡ್‌ ಕಾನ್‌ಸ್ಟೇಬಲ್‌ ಮನೋಜ್‌ ಗಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next