ಕಾರವಾರ: ಹವಳದ ದಿಬ್ಬ ಬೆಳೆಯುವ ನೇತ್ರಾಣಿ ಯಂಥ ದ್ವೀಪದ ತಳದಲ್ಲಿ ಕಂಡು ಬರುವ ಹಾಕ್ಸ ಬಿಲ್ ಸಮುದಾಯದ ಆಮೆ ಮಾಜಾಳಿಯಲ್ಲಿ ಇಂದು ಕಂಡು ಬಂದಿದೆ.ಮೀನುಗಾರರ ಬಲೆಗೆ ಬಿದ್ದ ಹಾಕ್ಸ ಬಿಲ್ ಆಮೆಯನ್ನು ರಕ್ಷಿಸಿ , ಚಿಕಿತ್ಸೆ ನೀಡಿ ಮರಳಿ ಮಾಜಾಳಿ ಕಡಲತೀರದಲ್ಲಿ ಸಮುದ್ರಕ್ಕೆ ಬಿಡಲಾಗಿದೆ.
ಹಾಕ್ಸ ಬಿಲ್ ಆಮೆಗೆ ಕಡಲಜೀವಿಗಳ ವೈದ್ಯರಾದ ಡಾ.ಮೇಘನಾ, ಡಾ.ತೇಜಸ್ವಿನಿ ಚಿಕಿತ್ಸೆ ನೀಡಿದರು .
ಹಾಕ್ಸ ಬಿಲ್ ಆಮೆ ಅಪರೂಪದ್ದು. ಇದರ ಮೂತಿ ರಣಹದ್ದು ಅಥವಾ ಗರುಡ ಮುಖವನ್ನು ಹೋಲುತ್ತದೆ. ಮಾಜಾಳಿ ಕಡಲತೀರದಲ್ಲಿ ಹಾಕ್ಸ ಬಿಲ್ ಆಮೆ ಕಳೆದ ವರ್ಷ ಮೃತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ ಆ.
18 ಗುರುವಾರ ಜೀವಂತವಾಗಿ ಮೀನುಗಾರರಿಗೆ ಸಿಕ್ಕಿದೆ.
ಆಲಿವ್ ರಿಡ್ಲೆ ಜಾತಿಯ ಆಮೆಗಳು ಕಾರವಾರ, ದೇವಭಾಗ, ಮಾಜಾಳಿ ಕಡಲತೀರದಲ್ಲಿ ಕಾಣ ಸಿಗುವುದು ಸಹಜ. ಆದರೆ ಈ ಸಲ ಹಾಕ್ಸ ಬಿಲ್ ಆಮೆ ಸಿಕ್ಕಿರುವುದು ವಿಶೇಷ ಎಂದುಕಡಲ ಜೀವಿಗಳ ರಕ್ಷಣೆಯ ಆರ್ ಎಫ್ ಓ ಪ್ರಮೋದ್.ಬಿ. ತಿಳಿಸಿದರು . ಕಾರವಾರ ವಿಭಾಗದ ಡಿಎಫ್ಓ ಪ್ರಶಾಂತ .ಕೆ.ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.