Advertisement

Tiger ಸರಣಿಯ ಹ್ಯಾಟ್ರಿಕ್ ಸಕ್ಸಸ್: ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಕೃತಜ್ಞತೆ

07:18 PM Nov 18, 2023 | Team Udayavani |

ಮುಂಬಯಿ: “ಟೈಗರ್” ಫ್ರ್ಯಾಂಚೈಸ್‌ನ ಯಶಸ್ಸು ತುಂಬಾ ವೈಯಕ್ತಿಕವಾಗಿದೆ ಎಂದು ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಪ್ರೇಕ್ಷಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

Advertisement

2012 ರ “ಏಕ್ ಥಾ ಟೈಗರ್” ನೊಂದಿಗೆ ಪ್ರಾರಂಭವಾದ “ಟೈಗರ್” ಸರಣಿ 2017 ರ “ಟೈಗರ್ ಜಿಂದಾ ಹೈ” ಮತ್ತುಈಗ ‘ಟೈಗರ್ 3’ ಅಭೂತ ಪೂರ್ವ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಕತ್ರಿನಾ ಕೈಫ್(ಜೋಯಾ ಪಾತ್ರ) ಜತೆಗೆ ಸೂಪರ್ ಸ್ಪೈ ಅವಿನಾಶ್ ಸಿಂಗ್ ರಾಥೋರ್ ಪಾತ್ರದಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಕುರಿತು ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆಯಾದ ಚಿತ್ರ ಜಾಗತಿಕವಾಗಿ 300 ಕೋಟಿ ರೂ. ಬಾಚಿಕೊಂಡು ಮುನ್ನುಗ್ಗುತ್ತಿದೆ.

“ವರ್ಷಗಳಿಂದ ಅಭಿಮಾನಿಗಳು ನನ್ನ ಮೇಲೆ ತೋರಿದ ಪ್ರೀತಿಗೆ ಮತ್ತು ನನ್ನ ಟೈಗರ್ ಫ್ರಾಂಚೈಸಿಗೆ ನೀಡಿದ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ! ನಾನು ಈಗ ಮೂರು ಬಾರಿ ಸೂಪರ್ ಸ್ಪೈ ಟೈಗರ್ ಪಾತ್ರವನ್ನು ನಿರ್ವಹಿಸಿದ್ದೇನೆ. ಹಾಗಾಗಿ, ಈ ಮೆಚ್ಚುಗೆ ನನ್ನ ಪಾಲಿಗೆ ಹ್ಯಾಟ್ರಿಕ್ ಯಶಸ್ಸಿನಂತೆ ಭಾಸವಾಗುತ್ತಿದೆ. ಪ್ರತಿ ಬಾರಿ ನನ್ನನ್ನು ಮುನ್ನೆಲೆಯಲ್ಲಿ ಇರಿಸುವ ಪಾತ್ರವಾಗಿದೆ. ನಾನು ವಾಸ್ತವವಾಗಿ ನನ್ನ ಎಲ್ಲವನ್ನೂ ಕೊಟ್ಟಿದ್ದೇನೆ. ಹಾಗಾಗಿ, ಈ ಚಿತ್ರಗಳ ಯಶಸ್ಸು ನನಗೆ ತುಂಬಾ ವೈಯಕ್ತಿಕವಾಗಿದೆ. ಆಕ್ಷನ್ ಹೀರೋ ಆಗಿರುವುದಕ್ಕೆ ಅಗಾಧವಾದ ಹೆಮ್ಮೆ ಇದೆ” ಎಂದು 57 ವರ್ಷದ ನಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ದಬಾಂಗ್”, “ವಾಂಟೆಡ್”, “ಬಾಡಿಗಾರ್ಡ್”, “ಕಿಕ್”, “ರಾಧೆ” ಮತ್ತು “ಕಿಸಿ ಕಾ ಭಾಯ್ ಕಿಸಿ ಕಿ ಜಾನ್” ನಂತಹ ಸಾಹಸ ಚಲನಚಿತ್ರಗಳ ಮೂಲಕವೂ ಸಲ್ಮಾನ್ ಮೋಡಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next