Advertisement

Russian army ಸೇರಿಕೊಂಡಿದ್ದ ಹರಿಯಾಣ ಯುವಕ ಸಾವು!

12:14 AM Jul 30, 2024 | Team Udayavani |

ಚಂಡೀಗಢ: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೂಬ್ಬ ಭಾರತೀಯ ಯುವಕ ಈಗ ಉಕ್ರೇನ್‌ನ ಯುದ್ಧ ಭೂಮಿ ಯಲ್ಲಿ ಪ್ರಾಣ ಕಳೆದುಕೊಂಡಿ ದ್ದಾರೆ. ಹರಿಯಾಣದ ಕೈಥಾಲ್‌ ಜಿಲ್ಲೆಯ ರವಿ ಮೌನ್‌(22) ಮೃತ ದುರ್ದೈವಿ.

Advertisement

ಸಾರಿಗೆ ವಲಯದಲ್ಲಿ ಉದ್ಯೋಗ ಕೊಡಿ ಸುವುದಾಗಿ ಹೇಳಿ ಜ.13ರಂದು ರವಿ ಅವರನ್ನು ರಷ್ಯಾಗೆ ಕರೆಸಿಕೊಳ್ಳಲಾ ಗಿತ್ತು. ಆದರೆ ಅಲ್ಲಿ ಕಂದಕಗಳನ್ನು ತೋಡುವ ತರಬೇತಿ ನೀಡಿ, ಉಕ್ರೇನ್‌ ಯುದ್ಧಕ್ಕೆ ಬಳಸಿಕೊಳ್ಳಲಾಗಿತ್ತು. ಯುದ್ಧ ದಲ್ಲಿ ಹೋರಾಡದೇ ಇದ್ದರೆ 10 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ರಷ್ಯಾ ಸೇನೆ ಬೆದರಿಕೆ ಹಾಕಿತ್ತು ಎಂದು ರವಿ ಸೋದರ ಅಜಯ್‌ ಮೌನ್‌ ಹೇಳಿದ್ದಾರೆ.

ಒತ್ತಾಯಪೂರ್ವಕವಾಗಿ ರವಿ ಸೇನೆಯಲ್ಲಿ ಕೆಲಸ ಮಾಡಬೇಕಾಯಿತು. ಮಾ.12 ರ ವರೆಗೆ ನಮ್ಮೊಂದಿಗೆ ಆತ ಸಂಪರ್ಕ ದಲ್ಲಿದ್ದ. ಅಲ್ಲದೇ, ಈ ಕೆಲಸದಿಂದ ಬಹಳ ನೊಂದಿದ್ದ. ಬಳಿಕ ಆತ ಸಂಪರ್ಕಕ್ಕೆ ಸಿಗಲಿಲ್ಲ. ಜು.21ರಂದು ರಾಯಭಾರ ಕಚೇರಿಗೆ ನಾನು ಪತ್ರ ಬರೆದು, ನನ್ನ ತಮ್ಮನ ಬಗ್ಗೆ ವಿಚಾರಿಸಿದೆ. ಆಗ, “ಆತ ಯುದ್ಧದಲ್ಲಿ ಮೃತಪಟ್ಟಿದ್ದು, ಮೃತದೇಹದ ಗುರುತು ಪತ್ತೆಗಾಗಿ ನಿಮ್ಮ ತಾಯಿಯ ಡಿಎನ್‌ಎ ಪರೀಕ್ಷೆಯ ವರದಿ ಕಳುಹಿಸಿ’ ಎಂದು ತಿಳಿಸಿದರು ಎಂದು ಅಜಯ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next