Advertisement

ಎರಡೂ ವೈರುಧ್ಯಗಳ ನಡುವಿನ ಸಾಮರಸ್ಯ ಗೀತೆ

12:22 AM Feb 07, 2020 | Sriram |

ತಿಳಿ ಮತ್ತು ಗಾಢ ಬಣ್ಣಗಳ ನಡುವೆ ಹೊಂದಿಸಿ ಉಡುಪನ್ನು ಧರಿಸುತ್ತಿದ್ದುದು ಹಳೇ ಕಾಲ. ಈಗ ಏನಿದ್ದರೂ ಎರಡೂ ವಿರುದ್ಧ ಬಣ್ಣಗಳನ್ನು ಹೊಂದಿಸಿ ಶೋಭಿಸುವುದೇ ಹೊಸ ಟ್ರೆಂಡ್‌ ಎನ್ನುತ್ತಾರೆ ಸುಶ್ಮಿತಾ ಶೆಟ್ಟಿ.

Advertisement

ಬಣ್ಣಗಳೆಂದರೆ ಹಾಗೇ ಎಲ್ಲರಿಗೂ ಬಲು ಇಷ್ಟ. ಉಡುಗೆಗಳನ್ನು ಆಯ್ಕೆ ಮಾಡುವಾಗಲೂ ಬಣ್ಣಗಳೇ ಮುಖ್ಯ. ಕೆಲವು ಶರೀರ ಗುಣ ಹೊಂದಿರುವವರಿಗೆ ಆಯ್ಕೆ ಮಾಡಿದ ಕೆಲವು ಬಣ್ಣ ಮಾತ್ರ ಒಪ್ಪುತ್ತವೆ. ಆದುದರಿಂದಲೇ ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.

ಮ್ಯಾಚಿಂಗ್‌ ಎಂದು ಪದ ಕೇಳಿರಬ ಹುದು. ದಶಕಗಳ ಹಿಂದೆ ಸೀರೆ ಅಂಗಡಿ ಯಲ್ಲೇ ಇದ್ದ ಇನ್ನೊಂದು ಭಾಗವೆಂದರೆ ಅದು ಮ್ಯಾಚಿಂಗ್‌ ಸೆಂಟರ್‌. ನಿಮ್ಮ ಸೀರೆಗೆ ಒಪ್ಪುವಂಥ ರವಿಕೆಯ ಬಟ್ಟೆ ಸಿಗು ತ್ತಿದ್ದದ್ದು ಆ ಮ್ಯಾಚಿಂಗ್‌ ಸೆಂಟರ್‌ನಲ್ಲಿ. ಈಗ ಕಾಲ ಸಂಪೂರ್ಣ ಬದಲಾಗಿದೆ.

ಸೀರೆಗಳಿಗೆ ಅದೇ ಬಣ್ಣದ ರವಿಕೆ, ಒಂದೇ ಬಣ್ಣದ ಪ್ಯಾಂಟ್‌ ಮತ್ತು ಕುರ್ತಾಗಳು ಆ ಕಾಲದ ಆಕರ್ಷಕ ಉಡುಗೆ ಯಾಗಿದ್ದರೆ, ಈಗ ಕಾಂಟ್ರಾಸ್ಟ್‌ ಬಣ್ಣಗಳ ಹೊಂದಿಕೆಯೇ ಹೊಸ ವಿನ್ಯಾಸ. ಎರಡು ಸಂಪೂರ್ಣ ವಿಭಿನ್ನ ಬಣ್ಣಗಳ ಉಡುಪುಗಳನ್ನು ಹೊಂದಿಸಿಕೊಂಡು ಹಾಕು ವುದೇ ಈ ಶೈಲಿ. ಸೀರೆಗಳ ಜರಿ ಅಂಚಿನ ಬಣ್ಣದ ರವಿಕೆ, ಪ್ಯಾಂಟ್‌ ಮತ್ತು ದುಪಟ್ಟಾಗಳು ಒಂದು ಬಣ್ಣ ವಾದರೆ, ಕುರ್ತಾಗಳ ಬಣ್ಣ ಸಂಪೂರ್ಣ ಬೇರೆಯೇ. ಈ ಎರಡೂ ಬಣ್ಣಗಳನ್ನು ಒಟ್ಟಿಗೆ ಹಾಕಿಕೊಳ್ಳುವುದೇ ಹೊಸ ಟ್ರೆಂಡ್‌.

ಕಾಂಟ್ರಾಸ್ಟ್‌ ಬಣ್ಣಗಳ ಆಯ್ಕೆ ಹೀಗಿರಲಿ
ಹಳದಿ ಮತ್ತು ಹಸುರು: ಎರಡೂ ಕೂಡ ಗಾಢ ಬಣ್ಣಗಳೇ. ಆದರೂ ಒಂದಕ್ಕೊಂದು ತುಂಬಾ ಚೆನ್ನಾಗಿ ಹೊಂದಿ ಕೊಳ್ಳುತ್ತವೆ. ಹಸುರು ಸ್ಕರ್ಟ್‌ಗೆ ಹಳದಿ ಟಾಪ್‌, ಹಳದಿ ಪಟಿಯಾಲ ಪ್ಯಾಂಟ್‌ಗೆ ಹಸುರು ಟಾಪ್‌ಗ್ಳು ಚಂದ.
ಗ್ರೇ ಮತ್ತು ಪಿಂಕ್‌: ಒಂದು ತಿಳಿ ಬಣ್ಣವಾಗಿದ್ದರೆ ಮತ್ತೂಂದು ಗಾಢ ಬಣ್ಣ, ಇವುಗಳ ಹೊಂದಾಣಿ ಕೆಯೂ ತುಂಬಾ ಚೆನ್ನಾಗಿರುತ್ತದೆ. ಗ್ರೇ ಬಣ್ಣದ ಸೀರೆಗೆ ಪಿಂಕ್‌ರವಿಕೆ ಅಥವಾ ಪಿಂಕ್‌ ಬಣ್ಣದ ಸೀರೆಗೆ ಗ್ರೇ ಬಣ್ಣದ ರವಿಕೆ ಹೆಚ್ಚು ಸೂಕ್ತ.
ಗಾಢ ನೀಲಿ ಮತ್ತು ಕೆಂಪು: ಆಧುನಿಕ ಫ್ಯಾಶನ್‌ಗಳನ್ನು ಇಷ್ಟಪಡುವವರಿಗೆ ಈ ಬಣ್ಣಗಳ ಕಾಂಬಿನೇಷನ್‌ ಹೆಚ್ಚು ಸೂಕ್ತ. ಗಾಢ ನೀಲಿ ಬಣ್ಣದ ಜೀನ್ಸ್‌ ಹಾಗೂ ಕೆಂಪು ಬಣ್ಣದ ಕೋಟ್‌ ಹೆಚ್ಚು ಅಂದ ವಾಗಿರುತ್ತದೆ. ಗಾಢ ನೀಲಿ ಬಣ್ಣ ಜತೆಗೆ ಕೇಸರಿ ಬಣ್ಣವೂ ಅಂದವಾಗಿರುತ್ತವೆ.

Advertisement

ಮರೂನ್‌ ಮತ್ತು ತಿಳಿ ಬಣ್ಣಗಳು
ಮರೂನ್‌ ಹೆಚ್ಚು ಗಾಢ ಬಣ್ಣವಾಗಿ ರುವುದರಿಂದ ಇದರ ಜತೆ ತಿಳಿ ಬಣ್ಣಗಳು ಹೆಚ್ಚು ಹೊಂದಿಕೊಳ್ಳುತ್ತವೆ. ಕೆಲವು ಬಣ್ಣಗಳು ಪರಸ್ಪರ ಹೊಂದಿಕೊಳ್ಳುವುದಿಲ್ಲ. ಅಂತಹ ಬಣ್ಣಗಳ ಉಡುಗೆಗಳು ಹೆಚ್ಚು ಹೊಂದಾಣಿಕೆಯಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next