Advertisement

ಅರ್ಧ ರಸ್ತೆ ನುಂಗಿದ ಮಣ್ಣಿನ ಗುಡ್ಡೆ

10:47 AM Sep 20, 2019 | Team Udayavani |

ಬೆಂಗಳೂರು: ನಗರದ ಪ್ರಮುಖ ಭಾಗಗಳಿಗೆ ಸಂಪರ್ಕ ಕೊಂಡಿಯಾಗಿರುವ ಗಾಂಧಿನಗರದ ವೈ.ರಾಮಚಂದ್ರ ರಸ್ತೆ ಈಗ ಅಕ್ಷರಶಃ ಕಸದ ತೊಟ್ಟಿಯಾಗಿದೆ. ಕಾಮಗಾರಿ (ಅನುಪಯುಕ್ತ ತ್ಯಾಜ್ಯವನ್ನು) ಮಣ್ಣನ್ನು ಇಲ್ಲಿ ಸುರಿದಿರುವುದರಿಂದ ಇಡೀ ಮಾರ್ಗ ಮಣ್ಣಿನ

Advertisement

ಗುಡ್ಡಗಳಿಂದ ತುಂಬಿಕೊಂಡಿದೆ. ರಸ್ತೆಯ ಅರ್ಧಭಾಗಕ್ಕೆ ಮಣ್ಣು ಸುರಿದಿದ್ದು, ಇದರ ನಡುವೆಯೇ ಆಟೋ ಮತ್ತು ಕಾರ್‌ ಗಳ ಪಾರ್ಕಿಂಗ್‌ ಮಾಡುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಕೊಳಚೆ ನೀರಿನ ಸಂಗ್ರಹ ಮತ್ತು ಕೊಳಚೆ ನೀರು ಮರುಬಳಕೆ ಉದ್ದೇಶದಿಂದ ಕೇಂದ್ರ ಸರ್ಕಾರದ ಅಮೃತ್‌ ಯೋಜನೆಯಡಿ ಜಲಮಂಡಳಿಯು 100 ಕೋಟಿ ರೂ. ವೆಚ್ಚದಲ್ಲಿ ನಗರದ ಹಲವು ಪ್ರದೇಶಗಳಲ್ಲಿ 24 ವಿಭಾಗೀಯ ಕಾಮಗಾರಿ ಆರಂಭಿಸಿದೆ.

ಇದೇ ಯೋಜನೆಯಡಿ ಗಾಂಧಿನಗರದ ವೈ.ರಾಮಚಂದ್ರ ರಸ್ತೆಯ ಒಂದು ಕಿ.ಮೀ ಮಾರ್ಗವನ್ನು ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಕಾಮಗಾರಿ ಪ್ರಾರಂಭವಾದಾಗಿನಿಂದ ಇಲ್ಲಿನ ಜನ ಧೂಳಿನಲ್ಲಿ ಮಿಂದೇಳುತ್ತಿದ್ದಾರೆ. ಆದರೆ, ಕಾಮಗಾರಿಗಾಗಿ ರಸ್ತೆ ಅಗೆಯಲಾಗಿತ್ತು. ಅಗೆದ ಭಾಗಗಳನ್ನು ಬಹುತೇಕ ಮುಚ್ಚಲಾಗಿದೆ. ಇಲ್ಲಿ ಸುರಿಯಲಾಗಿರುವ ಮಣ್ಣು ಜಲ ಮಂಡಳಿಯ ಕಾಮಗಾರಿಯದ್ದಲ್ಲ. ನಾವು ವ್ಯವಸ್ಥಿತವಾಗಿ ಕಾಮಗಾರಿ ನಡೆಸುತ್ತಿದ್ದೇವೆ ಎಂದು ಈ ಭಾಗದ ಸ್ಥಳೀಯ ಎಂಜಿನಿಯರ್‌ ಪ್ರಸನ್ನ ಹೇಳುತ್ತಾರೆ.

ರಾತ್ರಿ ವೇಳೆ ಬಸ್‌ಗಳ ಪಾರ್ಕಿಂಗ್‌ ಪ್ರದೇಶ: ಖಾಸಗಿ ಬಸ್‌ ಏಜೆನ್ಸಿಗಳು ಈ ರಸ್ತೆಯನ್ನು ಪಾರ್ಕಿಂಗ್‌ ಪ್ರದೇಶವಾಗಿ ಬದಲಾಯಿಸಿಕೊಳ್ಳುತ್ತವೆ. ಹೀಗಾಗಿ, ರಾತ್ರಿ ವೇಳೆ ಇಲ್ಲಿ ಕಾಮಗಾರಿ ನಡೆಸುವುದಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇದಕ್ಕೆ ಕೆಲ ಪ್ರಭಾವಿಗಳ ಬೆಂಬಲವೂ ಇದೆ. ಜತೆಗೆ ಈ ಭಾಗದಲ್ಲಿ ಟೆಂಡರ್‌ ಶ್ಯೂರ್‌ ಕಾಮಗಾರಿಯೂ ನಡೆಯುತ್ತಿದ್ದು, ಬಿಬಿಎಂಪಿ ಹಾಗೂ ಜಲ ಮಂಡಳಿಗಳ ಕಾಮಗಾರಿಗಳು ಏಕಕಾಲಕ್ಕೆ ನಡೆಯುತ್ತಿರುವುದರಿಂದ ಸಮನ್ವಯ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ.

ಸಂಚಾರ ಪೊಲೀಸರು ಹೈರಾಣ:  ಇಲ್ಲಿ ಸಂಚಾರ ದಟ್ಟಣೆ ನಿಭಾಯಿಸಲು ಸಂಚಾರ ಪೊಲೀಸರು ಹರಸಾಸ ಪಡುತ್ತಾರೆ. ಸದಾ ಒಂದಿಲ್ಲೊಂದು ಕಾಮಗಾರಿ ನಡೆಸುವುದರಿಂದ ಅರ್ಧ ರಸ್ತೆ ಕಾಮಗಾರಿಗೆ ಮೀಸಲಿರುತ್ತದೆ. ಇದರಿಂದ ದ್ವಿಮುಖ ಮಾರ್ಗ ಏಕಮುಖ

Advertisement

ಮಾರ್ಗದಷ್ಟು ಕಿರಿದಾಗುತ್ತದೆ. ಈ ಭಾಗದಲ್ಲಿ ಹೆಚ್ಚು ಶಾಲೆ, ಕಾಲೇಜುಗಳಿದ್ದು ವಿದ್ಯಾರ್ಥಿಗಳು ಏಕಾಏಕಿ ರಸ್ತೆ ದಾಟುತ್ತಾರೆ. ಹಿರಿಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ವಿಧಾನಸೌಧಕ್ಕೆ ಹೋಗಲು ಇದೇ ಮಾರ್ಗ ಬಳಸುವುದರಿಂದ ಟ್ರ್ಯಾಕ್‌ ಸಮಸ್ಯೆ

ಉಂಟಾದರೆ ಉದ್ಯೋಗಕ್ಕೆ ಕುತ್ತು ಬರುವ ಸಾಧ್ಯತೆಯೂ ಇದೆ ಎಂಬುದು ಸಂಚಾರ ಪೊಲೀಸರ ಅಳಲು.

ಕಾಮಗಾರಿ ನಡೆಸುವುದು ಸವಾಲು :  “ಈ ರಸ್ತೆಗಳಲ್ಲಿ ವಾಹನ ಸಂಚಾರ ಸದಾ ಹೆಚ್ಚಾಗಿರುವ ಕಾರಣ ಕಾಮಗಾರಿ ನಡೆಸುವುದು ಸವಾಲಿನ ಕೆಲಸ. ಕಾಮಗಾರಿ ಬಹುತೇಕ ಮುಗಿದಿದ್ದು, ಆದಷ್ಟು ಬೇಗ ಮಣ್ಣನ್ನು ತೆರವುಗೊಳಿಸಲಾಗುವುದು. “ಈ ಮಾರ್ಗದಲ್ಲಿಹಿಂದೆ ಅಳವಡಿಸಿದ್ದ ಪೈಪ್‌ಗ್ಳು 30 ವರ್ಷಗಳಷ್ಟು ಹಳೆಯವು. ಹೀಗಾಗಿ, ಕೊಳಚೆ ನೀರನ್ನು ಶುದ್ಧೀಕರಿಸುವ ಉದ್ದೇಶದಿಂದ ಈಗ ಉತ್ಕೃಷ್ಟ ಗುಣಮಟ್ಟದ ಪೈಪ್‌ ಅಳವಡಿಸಲಾಗುತ್ತಿದೆ’ ಎಂದು ಜಲ ಮಂಡಳಿಯ ಸಹಾಯಕ ಎಂಜಿನಿಯರ್‌ ರೇಣುಕುಮಾರ್‌ ಮಾಹಿತಿ ನೀಡಿದರು.

ಏನಿದು ಕಾಮಗಾರಿ? : ನಗರದ ಒಳಚರಂಡಿ ಹಾಗೂ ತ್ಯಾಜ್ಯ ನೀರನ್ನು ಮರುಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಒಂದು ಅಡಿ ಪೈಪ್‌ಗ್ಳನ್ನು ತೆಗೆದು ಎರಡು ಅಡಿ ಪೈಪ್‌ಗ್ಳನ್ನು ಅಳವಡಿಸಲಾಗುತ್ತಿದೆ. ಈ ಮಾರ್ಗಗಳಲ್ಲಿ ಅಳವಡಿಸಿರುವ ಪೈಪ್‌ಗ್ಳನ್ನು ನೇರವಾಗಿ ನಾಯಂಡಹಳ್ಳಿಯ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ (ಎಸ್‌ ಟಿಪಿ) ಸಂಪರ್ಕಿಸಿ, ಶುದ್ಧೀಕರಿಸಲು ಜಲಮಂಡಳಿ ಯೋಜನೆ ರೂಪಿಸಿದೆ.

 

.ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next