Advertisement
ಅತಿ ಹೆಚ್ಚಾಗಿ ಬೈಗುಳ ತಿನ್ನುವುವುದು ಎಂದರೆ ಬಸ್ಸು. ನಾವು ಎಲ್ಲಾದರೂ ಬಸ್ಸಿನಲ್ಲಿ ಹೋಗಲು ನಿಶ್ಚಯಿಸಿ ಬಸ್ಸಿಗಾಗಿ ಕಾಯುತ್ತಿರುವ ಸಮಯದಲ್ಲಿ, ಒಂದು ವೇಳೆ ಅದು ಅಷ್ಟ ರ ಲ್ಲಿಯೇ ಹೋಗಿದ್ದರೆ “ಯಾವಾಗಲೂ ಲೇಟಾಗಿ ಬರುವ ಹಾಳಾದ ಬಸ್ ಇವತ್ತು ಬೇಗ ಹೋಗಿದೆ’ ಎಂಬ ಬೈಗುಳ! ಕೆಲವೊಮ್ಮೆ ಬಸ್ ಸಮಯಕ್ಕೆ ಸರಿಯಾಗಿ ಬಾರದೇ ತಡವಾಗಿ ಬಂದರೆ “ಯಾವಾಗಲೂ ಬೇಗ ಬರುವ ಬಸ್ ಇವತ್ತು ಇನ್ನೂ ಬಂದೇ ಇಲ್ಲ. ಚಾಲಕನಿಗೆ ಸಮಯಪ್ರಜ್ಞೆಯೇ ಇಲ್ಲ’ ಎನ್ನುವಂಥ ಮಾತುಗಳು. ನಮ್ಮಲ್ಲಿ ಸಮಯಕ್ಕೆ ಸರಿಯಾಗಿ ತಲುಪುವಂತೆ ವಾಹನ ಚಲಾಯಿಸಬಹುದಾದ, ಸೂಕ್ತವಾದ ರಸ್ತೆಗಳು ಇವೆಯೆ? ಒಂದು ವೇಳೆ ಸರಿಯಾದ ರಸ್ತೆ ಇದ್ದರೂ ಅದರಲ್ಲಿರುವ ವಾಹನದಟ್ಟಣೆ ಏನು ಕಡಿಮೆಯೆ? ಇವೆಲ್ಲವನ್ನು ಅರಿತು ಅಥವಾ ಅರಿಯದೆ ನಾವು ಸದಾ ಬಸ್ಸನ್ನು ಹೀಗಳೆಯುತ್ತೇವೆ. ಅತ್ತ ಇಳಿಯುವ ಪ್ರಯಾಣಿಕರನ್ನು ಇಳಿಯಲು ಬಿಡದೆ, ಇತ್ತ ಹತ್ತುವವರನ್ನು ಹತ್ತಲು ಬಿಡದೆ, ಮುದುಕರು, ಎಳೆಯರು ಎನ್ನದೆ ತಾವು ಸೀಟನ್ನು ಕಾಯ್ದಿªರಿಸಲು ಪೇಚಾಡುವ ಪರಿ, ಅದು ರಾಜಕೀಯದಲ್ಲಿ ಪದವಿಗಾಗಿ ಪೈಪೋಟಿ ನಡೆಸುವ ನಾಯಕರಿಗಿಂತ ಕಡಿಮೆಯೇನಲ್ಲ. ಇನ್ನೂ ಇದಕ್ಕೆ ಅಪವಾದವಾಗಿರುವ ಕೆಲವು ಮಹಾನುಭಾವರಿರುತ್ತಾರೆ. ಬಸ್ಸನ್ನು ಹತ್ತುವ ಗೋಜಿಗೆ ಹೋಗದೆ ಬಸ್ಸಿನ ಕಿಟಕಿಯಿಂದಲೇ ತಮ್ಮ ಕರವಸ್ತ್ರವನ್ನೋ, ಬ್ಯಾಗನ್ನೋ ಸೀಟಿನ ಮೇಲೆ ಬಿಸಾಕಿ ಆಸನವನ್ನು ಕಾಯ್ದಿರಿಸುವ ಮೇಧಾವಿಗಳು. ಒಂದು ವೇಳೆ ಆ ಆಸನದಲ್ಲಿ ಯಾರಾದರೂ ಕುಳಿತಿದ್ದರೆ, ಅವರ ಆವೇಶವನ್ನು ಗಮನಿಸಬೇಕು. ತಾವೇ ಹಣ ಕೊಟ್ಟು ಆಸನವನ್ನು ಖರೀದಿಸಿದವರಂತೆ ವರ್ತಿಸುತ್ತಾರೆ .
ಅಂತಿಮ ಎಂ. ಕಾಂ., ಸರ ಕಾರಿ ಪ್ರಥಮದರ್ಜೆ ಕಾಲೇಜು, ಬೆಳ್ತಂಗಡಿ