ಪಿರಿಯಾಪಟ್ಟಣ: ಶಾಲಾ ಹಸಿರುದಳ ಸ್ಥಾಪನೆಯ ಮೂಲಕ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪರಿಸರ ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್ ತಿಳಿಸಿದರು. ತಾಲೂಕಿನ ಭುವನಹಳ್ಳಿ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ತಾಲೂಕು ಸಮಗ್ರ ಸುಸ್ಥಿರ ಅಭಿವೃದ್ಧಿ ಸಮಿತಿ ವತಿಯಿಂದ ಆಯೋ ಜಿಸಿದ್ದ ಶಾಲಾಹಸಿರು ದಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಮುಂದಿನ ಪೀಳಿಗೆಯಲ್ಲಿ ಪರಿಸರ ಪ್ರೇಮ ವನ್ನು ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಹಸಿರು ದಳಗಳನ್ನು ಸಮಗ್ರ ಸುಸ್ಥಿರ ಅಭಿವೃದ್ಧಿ ಸಮಿತಿ ವತಿಯಿಂದ ಸ್ಥಾಪಿಸ ಲಾಗುತ್ತಿದೆ. ಈ ಹಸಿರು ದಳದ ಸದಸ್ಯ ವಿದ್ಯಾರ್ಥಿಗಳಿಗೆ ಪರಿಸರ ಬಗ್ಗೆ ರಸಪ್ರಶ್ನೆ, ಚಿತ್ರಕಲಾ ಸ್ಪರ್ಧೆ, ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆ ಮುಂತಾದ ಪರಿಸರ ಪೂರಕ ಚಟುವಟಿಕೆಗಳನ್ನು ವರ್ಷವಿಡೀ ನಡೆಸ ಲಾಗುತ್ತದೆ. ಅಲ್ಲದೇ ವನ್ಯಜೀವಿಗಳು, ಸರಿಸೃಪ ಗಳು, ಪಕ್ಷಿಗಳು ಮುಂತಾದವುಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.
ಬಹುಮಾನ: ಶಾಲೆಗಳು ಸಮಗ್ರ ಸುಸ್ಥಿರ ಅಭಿವೃದ್ಧಿ ಸಮಿತಿಯೊಂದಿಗೆ ನೋಂದಣಿ ಮಾಡಿಕೊಳ್ಳ ಬೇಕು. ಅವುಗಳಲ್ಲಿ ಉತ್ತಮ ವಾಗಿ ಗಿಡಗಳನ್ನು ಬೆಳೆಸುವ ಶಾಲೆಗೆ ಪ್ರಥಮ 5,000, ದ್ವಿತೀಯ 3,000 ಮತ್ತು ತೃತೀಯ 2,000 ರೂ. ನಗದು ಬಹುಮಾನವನ್ನು ನೀಡಲಾಗುವುದು. ಪರಿಸರ ಕಾಳಜಿ ತೋರಿದ ಶಾಲೆಯ ಉತ್ತಮ ವಿದ್ಯಾರ್ಥಿಯ ವ್ಯಾಸಂಗಕ್ಕೆ ಸಹಾಯಧನ ನೀಡಲಾಗುವುದೆಂದು ತಿಳಿಸಿದರು.
ಹಣವೇ ಬದುಕಲ್ಲ: ಪ್ರೌಢಶಾಲೆ ಸಹಶಿಕ್ಷಕ ಮಹದೇವಸ್ವಾಮಿ ಮಾತನಾಡಿ, ಪ್ರತಿ ಮನುಷ್ಯ ಹಣ ಮಾಡುವುದೇ ಬದುಕು ಎಂದುಕೊಂಡಿದ್ದಾನೆ. ಪ್ರಕೃತಿಯನ್ನು ಪ್ರೀತಿಸುವ ಅದಕ್ಕಾಗಿ ಸಮಯ ಮೀಸಲಿಡು ವರು ಕಡಿಮೆಯಾಗಿದ್ದಾರೆ. ತೊಂದರೆಗಳು ನಡೆದಾಗ ಪಕೃತಿ ನೆನಪಿಗೆ ಬರುತ್ತದೆ. ಆದ್ದರಿಂದ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪರಿಸರ ಜಾnನ ಬೆಳೆಸುತ್ತಿರುವುದು ಉತ್ತಮ ಕೆಲಸ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಮುಖ್ಯ ಶಿಕ್ಷಕ ಕುಮಾರ್ ಮಾತ ನಾಡಿ, ಪರಿಸರಕ್ಕೆ ಪೂರಕವಾಗಿ ಮನುಷ್ಯ ಬದುಕು ಕಟ್ಟಿಕೊಳ್ಳಬೇಕು. ಪ್ರಸ್ತುತ ಮನುಷ್ಯನ ದುರಾಸೆ ಯಿಂದ ಪಕೃತಿ ನಾಶದ ಹಾದಿ ಯಲ್ಲಿದೆ. ಇದರೊಂದಿಗೆ ಮನು ಕುಲವು ನಾಶ ವಾಗುತ್ತದೆ. ಆದ್ದರಿಂದ ಪರಿಸರವನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಯಾಗಿದ್ದು, ಶಾಲಾ ಹಂತದಲ್ಲಿ ಮಕ್ಕಳಿಗೆ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಅಗತ್ಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ನಾಗಭೂಷಣ ಆರಾಧ್ಯ, ಉಪಾಧ್ಯಕ್ಷೆ ನಾಗಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಭುವನಹಳ್ಳಿ ಮೇಲ್ವಿ ಚಾರಕ ಸುಧೀರ್, ನಿರಂಜನ್, ಉಮೇಶ್, ಎಸ್‌ಡಿಎಸ್‌ಸಿ ಸದಸ್ಯರು ಇದ್ದರು.