Advertisement
ಸ್ಟೆನ್ಸಿಲ್ ಆರ್ಟ್ ಕಲೆಯಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಕೇವಲ 3 ನಿಮಿಷ 12 ಸೆಕೆಂಡ್‌ಗಳಲ್ಲಿ 2019ರ ಸೆ. 20ರಂದು ರಚಿಸುವ ಮೂಲಕ ನೆಲ್ಯಾಡಿಯ ಪರೀಕ್ಷಿತ್ (18 ವರ್ಷ) ಅಮೋಘ ಸಾಧನೆ ಮಾಡಿದ್ದಾರೆ. ಕಪ್ಪು, ಬಿಳಿ ಪೇಪರ್‌ಗಳು, ಒಂದು ಪೆನ್ಸಿಲ್, ಬ್ಲೇಡ್, ಗಮ್ ಟೇಪ್, ಸ್ಟಾಂಡ್ ಮತ್ತು ಬೋರ್ಡ್ – ಇವಿಷ್ಟು ಪರಿಕರಗಳನ್ನು ಕೈಯಲ್ಲಿಟ್ಟುಕೊಂಡು ಪೇಪರ್ ಕಟ್ಟಿಂಗ್ ಪೋಟ್ರೈಟ್ ಸ್ಟೆನ್ಸಿಲ್ ಆರ್ಟ್ ಕಲೆಯಲ್ಲಿ ಪರೀಕ್ಷಿತ್ ಸಾಧನೆ ಮಾಡಿದ್ದಾರೆ.
ಅವರ ಹಿರಿಯ ಸಹಪಾಠಿ ಚಂದನ್ ಸುರೇಶ್ ಇದೇ ಕಲೆಯಲ್ಲಿ ಇಂಡಿಯಾ ಬುಕ್ ಆಫ್ ದ ರೆಕಾರ್ಡ್ ನಲ್ಲಿ ಐದು ನಿಮಿಷ ಆರು ಸೆಕೆಂಡ್‌ಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರವನ್ನು ಬಿಡಿಸಿದ್ದರು. ಅವರಿಂದ ಪ್ರೇರಣೆಗೊಳಗಾಗಿದ್ದ ಪರೀಕ್ಷಿತ್ ಈ ಕಲೆ ಯನ್ನು ಕರಗತ ಮಾಡಿಕೊಂಡಿದ್ದಾರೆ. ವಿಶ್ವ ದಲ್ಲೇ ಪ್ರಥಮ ಸ್ಥಾನಿಯಾಗಿರುವ ಅವರು ದೇಶಕ್ಕೆ ಕೀರ್ತಿ ತಂದಿದ್ದಾರೆ. ವಿಶ್ವಕ್ಕೇ ಅಗ್ರಗಣ್ಯ
ತುಂಬಾ ವಿರಳವಾಗಿರುವ ಸ್ಟೆನ್ಸಿಲ್ ಆರ್ಟ್‌ನಲ್ಲಿ ಇಡೀ ದೇಶದಲ್ಲಿ ಮುಂಚೂಣಿಯಲ್ಲಿರುವ ಹೆಸರು ಇರುವುದು ಮೂರು ಮಂದಿಯದ್ದು. ಅದರಲ್ಲೂ ಪ್ರಥಮ ಸ್ಥಾನವನ್ನು ಹೊಂದಿರುವ ದ.ಕ. ಜಿಲ್ಲೆಯ ನೆಲ್ಯಾಡಿಯ ಈ ಸಾಧಕ ಬಾಲಕ ಸದ್ಯ ವಿಶ್ವದಲ್ಲೇ ಪ್ರಥಮ ಸ್ಥಾನಿ. ಚಿತ್ರಕಲೆಯಲ್ಲೂ ಆಸಕ್ತಿಯನ್ನು ಬೆಳೆಸಿಕೊಂಡಿರುವ ಪರೀಕ್ಷಿತ್ ಹಲವಾರು ಕಾರ್ಯಕ್ರಮದಲ್ಲಿ ಸ್ಥಳದಲ್ಲೇ ಮಹಾನ್ ವ್ಯಕ್ತಿಗಳ, ಅತಿಥಿಗಳ ಭಾವಚಿತ್ರವನ್ನು ಕ್ಷಣಾರ್ಧದಲ್ಲಿ ಬಿಡಿಸಿದ್ದಾರೆ. ದ.ಕ. ಜಿಲ್ಲಾ ಗಾಣಿಗರ ಯಾನೆ ಸಪಲಿಗರ ಸಂಘದಿಂದ ಪ್ರಶಸ್ತಿಯೂ ಲಭಿಸಿದೆ.
Related Articles
ಫೈರ್ ಆರ್ಟ್ (ಬೆಂಕಿಯ ದೀವಟಿಗೆಯನ್ನು ಪೇಪರ್‌ಗೆ ಹಿಡಿದು ಅದರ ಮೂಲಕ ಭಾವಚಿತ್ರ ಬಿಡಿಸುವ ಕಲೆ), ಪ್ರಿಂಟ್ ವರ್ಕ್, ಗಿಟಾರ್ ವಾದನ, ಭರತನಾಟ್ಯ ಕಲೆಯನ್ನು 9 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾರೆ. ಪಾಶ್ಚಾತ್ಯ ನೃತ್ಯ, ನಾಟಕ, ಮೈಮ್ ಶೋ, ಸಂಗೀತ ಉಪಕರಣಗಳ ಶಬ್ದವನ್ನು ಬಾಯಿಯಲ್ಲೆ ನುಡಿಸುವ ಬೀಟ್ ಬಾಕ್ಸ್, ಕ್ರಿಯೇಟಿವ್ ಆರ್ಟ್, ಎರಡೂ ಕೈಗಳಲ್ಲಿ ಚಿತ್ರ ಬಿಡಿಸುವ ಕಲೆ, ಅಷ್ಟಾವಧಾನ, ಸಂಜ್ಞೆಯ ಮೂಲಕ ಹೇಳಲಾದ ದೂರವಾಣಿ ಸಂಖ್ಯೆಗಳನ್ನು ಕ್ಷಣಾರ್ಧದಲ್ಲಿ ಪತ್ತೆ ಮಾಡಿ ಅಸಂಖ್ಯಾತ ದೂರವಾಣಿ ಸಂಖ್ಯೆಗಳನ್ನು ಮನಃಪಟಲದಲ್ಲಿ ಇಟ್ಟುಕೊಳ್ಳುವ ಕಲೆ, ಬಡಗುತಿಟ್ಟಿನ ಯಕ್ಷಗಾನದಲ್ಲಿ ಮರದ ಕಾಲುಗಳನ್ನು ಬಳಸಿ ನೃತ್ಯ ಮೊದಲಾದವುಗಳನ್ನು ಸಿದ್ಧಿಸಿಕೊಳ್ಳುತ್ತಿರುವ ಪರೀಕ್ಷಿತ್, ಚಿತ್ರಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವ ಅಭಿಲಾಷೆ ಹೊಂದಿದ್ದಾರೆ. ತಾನು ಈಗ ಕಲಿಯುತ್ತಿರುವ ಇಂಟೀರಿಯರ್ ಡಿಸೈನ್‌ನಲ್ಲಿ ದೇಶದಲ್ಲಿ ಈವರೆಗೆ ಇಲ್ಲದ ಹೊಸ ಆವಿಷ್ಕಾರಗಳನ್ನು ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ.
Advertisement
ಗೋಪಾಡ್ಕರ್ ಪ್ರೋತ್ಸಾಹಪರೀಕ್ಷಿತ್ ಅವರು ನೆಲ್ಯಾಡಿ ಶ್ರೀಧರ್ ಎಂ.-ಸುಧಾಮಣಿ ಅವರ ಪುತ್ರ. 9ನೇ ತರಗತಿಯವರೆಗೆ ನೆಲ್ಯಾಡಿಯ ಜ್ಞಾನೋದಯ ಬೆಥನಿ, ಎಸೆಸೆಲ್ಸಿಯನ್ನು ಮಂಗಳೂರಿನ ಗೋಪಾಡ್ಕರ್ ಅವರ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಮಾಡಿದ ಅನಂತರ ಅವರಿಗೆ ಮೈಮ್ ಶೋ, ನೆರಳು ಬೆಳಕಿನ ಸಂಯೋಜನೆಯ ಪ್ರಸಿದ್ಧ ಕಲಾವಿದರಾದ ಗೋಪಾಡ್ಕರ್ ಅವರ ವಿದ್ಯಾಸಂಸ್ಥೆಯಲ್ಲಿ ಅವರ ತಂಡದೊಂದಿಗೆ ಚಿತ್ರಕಲೆ ಮತ್ತಿತರ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಗೆ ಸೂಕ್ತ ವೇದಿಕೆಯೂ ಲಭಿಸಿತು. ಉತ್ತರ ಕರ್ನಾಟಕದ ಹಲವಾರು ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ತನ್ನ ಆಸಕ್ತಿಯ ಈ ಸ್ಟೆನ್ಸಿಲ್ ಆರ್ಟ್‌ಗಳನ್ನು ಪ್ರದರ್ಶಿಸುವ ಅವಕಾಶ, ಪ್ರೋತ್ಸಾಹ ಗೋಪಾಡ್ಕರ್ ಅವರ ಮೂಲಕ ಲಭಿಸಿತ್ತು. ಇಂದಿನ ಮಹತ್ ಸಾಧನೆಗೆ ಅದುವೇ ಪ್ರೇರಣೆಯೂ ಆಯಿತು. ಪ್ರಶಸ್ತಿಗೆ ಆಯ್ಕೆ
ಉತ್ತರ ಪ್ರದೇಶದಲ್ಲಿ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಪ್ರಧಾನ ಕಚೇರಿ ಇದ್ದು, ವಿಶ್ವದ ಎಲ್ಲ ದೇಶಗಳಿಂದ ಇಲ್ಲಿಗೆ ಸ್ಪರ್ಧಿಗಳು ತಮ್ಮ ಇವೆಂಟ್ ಅನ್ನು ಕಳುಹಿಸುತ್ತಾರೆ. ಇದೀಗ ಈ ಸಂಸ್ಥೆಯ ಚೀಫ್ ಎಕ್ಸಿಕ್ಯೂಟಿವ್ ಪಂಕಜ್ ಕತ್ವಾನಿ ಪರೀಕ್ಷಿತ್‌ನ ಲೈವ್ ವೀಡಿಯೋವನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಗುರುಮೂರ್ತಿ ಎಸ್. ಕೊಕ್ಕಡ