Advertisement

ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆಯ ಇಣುಕು ನೋಟ

11:16 PM Jul 20, 2021 | Team Udayavani |

ಒಟ್ಟು ಪದಕ: 28
ಚಿನ್ನ: 9
ಬೆಳ್ಳಿ: 7
ಕಂಚು: 12

Advertisement

ಒಲಿಂಪಿಕ್ಸ್‌ನಲ್ಲಿ ಭಾರತ ಸಾಧನೆ
ಒಲಿಂಪಿಕ್ಸ್‌ನಂಥ ಜಾಗತಿಕ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದೇ ಭಾರತೀಯ ಕ್ರೀಡಾಪಟುಗಳ ಮುಖ್ಯ ಗುರಿ ಆದರೆ ಅಪಾರ ನಿರೀಕ್ಷೆಯೊಂದಿಗೆ ಈ ಕ್ರೀಡಾಕೂಟಕ್ಕೆ ತೆರಳುವ ಭಾರತೀಯರಿಗೆ ನಿರಾಸೆದುರಗುವುದೇ ಹೆಚ್ಚು. ಆದರೂ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾರತೀಯರು ಎಂದೂ ಹಿಂಜರಿಯಲಿಲ್ಲ. ಇತಿಹಾಸವನ್ನೊಮ್ಮೆ ಕೆದಕಿದರೆ ಪುರುಷರ ಹಾಕಿಯಲ್ಲಿ 8 ಬಾರಿ ಸ್ವರ್ಣ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆ ಭಾರತ ಉಳಿಸಿಕೊಂಡಿದೆ. ಈ ಬಾರಿ ಟೋಕಿಯೊಗೆ ತೆರಳುವ ಕ್ರೀಡಾಪಟುಗಳಿಗೆ ಹಿಂದೆಂದಿಗಿಂತ್ತಲೂ ದೊರೆಯದ ಬೆಂಬಲ ಸಿಕ್ಕಿದೆ. ದೇಶದೆಲ್ಲಡೆ ಚಿಯರ್‌-4 ಇಂಡಿಯಾ ಎನ್ನುವ ಅಭಿಯಾನ ಬಾರಿ ಸದ್ದು ಮಾಡುತ್ತಿದ್ದು ಕ್ರೀಡಾಪಟುಗಳ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ. ಜತೆಗೆ ಇತ್ತೀಚಿನ ಕೆಲ ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ತೋರಿದ ಉತೃಷ್ಟಮಟ್ಟದ ಪ್ರದರ್ಶನವನ್ನು ಗಮನಿಸುವುದಾದರೆ ಭಾರತಕ್ಕೆ ಹೆಚ್ಚಿನ ಪದಕ ಗೆಲ್ಲಲಿದೆ ಎನ್ನುವ ನಿರೀಕ್ಷೆಯೊಂದಿಗೆ ಹಿಂದಿನ ಒಲಿಂಪಿಕ್ಸ್‌ನಲ್ಲಿ ಭಾರತೀಯರ ಪದಕ ಸಾಧನೆ ಹಿನ್ನೋಟ ಇಲ್ಲಿದೆ.

1928-ಭಾರತ ಹಾಕಿಯ ಸುವರ್ಣ ಯುಗಾರಂಭ
1900ರಲ್ಲಿ ನಡೆದ ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಭಾರತ ಆತ್ಲೆàಟಿಕ್ಸ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದಿತ್ತು. ಅದಾದ ಮೇಲೆ 28 ವರ್ಷಗಳ ನಂತರ ಭಾರತಕ್ಕೆ ಇನ್ನೊಂದು ಪದಕ ಸಿಕ್ಕಿದ್ದು. 1928ರಲ್ಲಿ ನೆದರ್ಲೆಂಡ್‌ನ‌ ಆ್ಯಮ್‌ಸ್ಟರ್ಡಾಮ್‌ನಲ್ಲಿ ನಡೆದ ಒಲಿಂಪಿಕ್‌ನಲ್ಲಿ ಭಾರತ ಹಾಕಿ ತಂಡ ಚಿನ್ನ ಗೆದ್ದಿತ್ತು. ಇಲ್ಲಿಂದ ಭಾರತ ಹಾಕಿ ತಂಡದ ಸುವರ್ಣ ಯುಗಾರಂಭ. ಹೆಚ್ಚು ಕಡಿಮೆ ಅರ್ಧಶತಮಾನದವರೆಗೆ ಒಲಿಂಪಿಕ್‌ನಲ್ಲಿ ಭಾರತದ ಪಾರುಪತ್ಯ ಮುಂದುವರಿಯಿತು. 1956ರವರೆಗೆ ಸತತ 6 ಬಾರಿ ಸ್ವರ್ಣ ಜಯಿಸಿತು.ಧ್ಯಾನ್‌ಚಂದ್‌ ಎಂಬ ಮಹಾನ್‌ ಪ್ರತಿಭೆ ವಿಶ್ವಕ್ಕೆ ಪರಿಚಯವಾಗಿದ್ದೂ ಇಲ್ಲಿಯೇ.

ಬ್ರಿಟಿಷರ ಸೊಕ್ಕು ಮುರಿದ ಸ್ವತಂತ್ರ ಭಾರತ
2ನೇ ವಿಶ್ವಸಮರದ ಹಿನ್ನೆಲೆಯಲ್ಲಿ 1942ರ ಒಲಿಂಪಿಕ್‌ ನಡೆಯಲಿಲ್ಲ. 1948ರಂದು ಇಂಗ್ಲೆಂಡ್‌ ರಾಜಧಾನಿ ಲಂಡನ್‌ನಲ್ಲಿ ಕೂಟ ನಡೆಯಿತು. ಸ್ವತಂತ್ರ ಭಾರತ ಆಡಿದ ಮೊದಲ ಕೂಟ ಇದಾಗಿದ್ದರಿಂದ ಈ ಒಲಿಂಪಿಕ್‌ ಭಾರತದ ಪಾಲಿಗೆ ವಿಶೇಷ. ಇನ್ನೂ ಒಂದು ವಿಶೇಷವಿದೆ. ಭಾರತ ಹಾಕಿ ತಂಡ ಒಂದು ಕಾಲದಲ್ಲಿ ತನ್ನನ್ನು ಆಳಿದ್ದ ಇಂಗ್ಲೆಂಡನ್ನೇ ಫೈನಲ್‌ನಲ್ಲಿ ಸೋಲಿಸಿ ಚಿನ್ನ ಗೆದ್ದಿತು! ಅದೂ 4-0 ಗೋಲುಗಳ ಅಂತರದಿಂದ. ಬ್ರಿಟಿಷರ ವಸಾಹತುಶಾಹಿ ಅಹಂಕಾರಕ್ಕೆ ಭಾರತ ಕೊಟ್ಟ ಭಾರೀ ತಿರುಗೇಟಿನಂತೆ ಈ ಗೆಲುವು ಕಂಡುಬಂದಿತ್ತು.

ಇದನ್ನೂ ಓದಿ :ಟೋಕಿಯೊ ಒಲಂಪಿಕ್ಸ್ ನಲ್ಲಿ ಪದಕಕ್ಕೆ ಪಣ ತೊಟ್ಟ ಪ್ರಣತಿ

Advertisement

 ಆ್ಯತ್ಲೆಟಿಕ್ಸ್‌ನಲ್ಲಿ ಬೆಳ್ಳಿ
ಸ್ವಾತಂತ್ರಕ್ಕೂ ಮುನ್ನ 1990ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬ್ರಿಟನ್‌ ಆ್ಯತ್ಲೀಟ್‌ ನಾರ್ಮನ್‌ ಪ್ರಿಚರ್ಡ್‌ 200 ಮೀ. ಓಟ ಮತ್ತು 200 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಕೋಲ್ಕತಾದಲ್ಲಿ ಜನಿಸಿದ್ದ ಪ್ರಿಚರ್ಡ್‌ ಒಲಿಂಪಿಕ್ಸ್‌ ಯಶಸ್ಸಿನ ಬಳಿಕ 1905ರಲ್ಲಿ ಕಾಯಂ ಆಗಿ ಬ್ರಿಟನ್‌ನಲ್ಲಿಯೇ ವಾಸಿಸತೊಡಗಿದರು.

1952ರಲ್ಲಿ ಕುಸ್ತಿಯಲ್ಲಿ ಕಂಚು
ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯಕ್ತಿಕ ವಿಭಾಗದಲ್ಲಿ ಗೆದ್ದ ಮೊದಲ ಪದಕ ಇದಾಗಿದೆ. ಮಹಾರಾಷ್ಟ್ರದ ಖಾಸಾಬಾ ದಾದಾ ಸಾಹೆಬ್‌ ಜಾಧವ್‌ ಕುಸ್ತಿಯ ಫ್ರೀಸ್ಟೈಲ್‌ ವಿಭಾಗದಲ್ಲಿ ಕಂಚು ಜಯಿಸಿದರು.

1996ರಲ್ಲಿ ಲಿಯಾಂಡರ್‌ ಪೇಸ್‌ಗೆ ಕಂಚು
ಅಮೆರಿಕದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ ಏಕೈಕ ಕಂಚಿನ ಪದಕ ಜಯಿಸಿತ್ತು. ಲಿಯಾಂಡರ್‌ ಪೇಸ್‌ ಟೆನಿಸ್‌ ಸಿಂಗಲ್ಸ್‌ ವಿಭಾಗದಲ್ಲಿ ಕಂಚು ಜಯಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ 44 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಪದಕ ಇದಾಗಿತ್ತು. ಇಲ್ಲಿ ಲಿಯಾಂಡರ್‌ ಪೇಸ್‌ ಬ್ರಝಿಲ್‌ನ ಫೆರ್ನಾಂಡೊ ಮೆಲಿಗಿನಿ ಅವರನ್ನು ಮಣಿಸಿ ಈ ಸಾಧನೆ ಮೆರೆದಿದ್ದರು.

ಸಿಡ್ನಿಯಲ್ಲಿ ಕಂಚು ಗೆದ್ದ ಕರ್ಣ ಮಲ್ಲೇಶ್ವರಿ
ಆಂಧ್ರ ಪ್ರದೇಶ ಮೂಲದವರಾದ ಕರ್ಣ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಆಸ್ಟ್ರೇಲಿಯದ ಸಿಡ್ನಿಯಲ್ಲಿ ನಡೆದ ಕೂಟದಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊಟ್ಟ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದರು. 69 ಕೆಜಿ ವಿಭಾಗದಲ್ಲಿ ಮಲ್ಲೇಶ್ವರಿ ಈ ಸಾಧನೆ ಮಾಡಿದ್ದರು.

ಶೂಟಿಂಗ್‌ನಲ್ಲಿ ರಾಥೋಡ್‌ಗೆ ಬೆಳ್ಳಿ
ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದ ಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ರಾಜಸ್ಥಾನದ ಶೂಟರ್‌ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಪುರುಷರ ಡಬಲ್‌ ಟ್ರಾಯಪ್‌ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಗುರಿ ಇರಿಸಿದರು. ಈ ಸಾಧನೆಯೊಂದಿಗೆ ವೈಯಕ್ತಿಕ ವಿಭಾಗದಲ್ಲಿ ರಜತ ಗೆದ್ದ ಮೊದಲ ಭಾರತೀಯರೆನಿಸಿದರು. ಈ ಕ್ರೀಡಾಕೂಟದಲ್ಲಿ ಭಾರತದ ಏಕೈಕ ಪದಕ ಜಯಿಸಲಷ್ಟೇ ಶಕ್ತವಾಯಿತು. ಹಿಂದಿನ ಎರಡು ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದರೆ, ಇಲ್ಲಿ ಬೆಳ್ಳಿ ಪದಕದ ಭಡ್ತಿ ಲಭಿಸಿತು.

ಬೀಜಿಂಗ್‌ನಲ್ಲಿ ಅಭಿನವ್‌ ಸ್ವರ್ಣ ಸಾಧನೆ
ಚೀನದ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯ ಕೂಟವಾಗಿದೆ. ಸ್ವತಂತ್ರ ಭಾರತದಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ವರ್ಣ ಸಾಧನೆ ಮಾಡಿದ್ದು ಇದೇ ಕೂಟದಲ್ಲಿ ಅಲ್ಲದೆ ಮೊಟ್ಟ ಮೊದಲ ಬಾರಿಗೆ ಒಂದೇ ಕೂಟದಲ್ಲಿ 3 ಪದಕಗಳು ಭಾರತದ ಪಾಲಾಗಿದ್ದವು. ಅಭಿನವ್‌ ಬಿಂದ್ರ 10 ಮೀ. ಏರ್‌ ರೈಫ‌ಲ್‌ನಲ್ಲಿ ಸ್ವರ್ಣ ಗೆದ್ದು ಇತಿಹಾಸ ನಿರ್ಮಿಸಿದ್ದರು. ಇದು ಭಾರತೀಯ ಶೂಟಿಂಗ್‌ ಕ್ಷೇತ್ರದ ದಿಕ್ಕನ್ನೇ ಬದಲಿಸಿತ್ತು. ಇತ್ತೀಚೆಗೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಕುಸ್ತಿಪಟು ಸುಸೀಲ್‌ ಕುಮಾರ್‌ ಪುರುಷರ ಕುಸ್ತಿಯ 75 ಕೆಜಿ ವಿಭಾಗದಲ್ಲಿ ಕಂಚು ಗೆದ್ದರೆ ಬಾಕ್ಸಿಂಗ್‌ನಲ್ಲಿ ವಿಜೇಂದರ್‌ ಸಿಂಗ್‌ 66 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದರು.

ಲಂಡನ್‌ನಲ್ಲಿ ಮಿಂಚಿದ ಅಮೋಘ ಸಾಧನೆ
ಲಂಡನ್‌ನಲ್ಲಿ ನಡೆದ 2012ರ ಒಲಿಂಪಿಕ್ಸ್‌ನಲ್ಲಿ ಭಾರತ ಅಮೋಘ ಸಧನೆಯೊಂದನ್ನು ಮಾಡಿತು. ಅರ್ಧ ಡಜನ್‌ ಪದಕ ಸಂಭ್ರವನ್ನಾಚರಿಸಿತು. ಭಾರತದ ಶೂಟಿಂಗ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌, ಕ್ಷೇತ್ರಕ್ಕೆ ಹೊಸ ಆಯಾಮ ಸೃಷ್ಟಿಸಿದ ಕೂಟ ಕೂಟ ಇದಾಗಿತ್ತು. 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳು ಭಾರತದ ಪಾಲಾದವು. ಶೂಟಿಂಗ್‌ನಲ್ಲಿ ವಿಜಯ್‌ ಕುಮಾರ್‌ 25 ಮೀ. ರ್ಯಾಪಿಟ್‌ ಫೈರ್‌ ಪಿಸ್ತೂಲ್‌ನಲ್ಲಿ ಬೆಳ್ಳಿ ಗೆದ್ದರೆ, ಸುಶೀಲ್‌ ಕುಮಾರ್‌ ಪುರುಷರ 66 ಕೆಜಿ ಫ್ರೀ ಸ್ಟೈಲ್‌ನಲ್ಲಿ ರಜತ ಸಾಧನೆಯೊಂದಿಗೆ ಸತತ 2ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದರು. ಮತೋರ್ವ ಶೂಟರ್‌ ಗಗನ್‌ ನಾರಂಗ್‌ (10 ಮೀ ಏರ್‌ ರೈಫ‌ಲ್‌), ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಬಾಕ್ಸರ್‌ ಮೇರಿ ಕೋಮ್‌ ಹಾಗೂ ಮತೋರ್ವ ಕುಸ್ತಿಪಟು ಯೋಗೇಶ್ವರ್‌ ದತ್‌ ಕಂಚಿನ ಪದಕ ಜಯಿಸಿದರು.

 ರಿಯೋದಲ್ಲಿ ಸಿಂಧುಗೆ ಒಲಿದ ಬೆಳ್ಳಿ
ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ರಿಯೋ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಕೆರೊಲಿನ ಮರಿನ್‌ ವಿರುದ್ಧ ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿ ಭಾರತಕ್ಕೆ ಚಿನ್ನ ಗೆಲ್ಲುವ ಭರವೆಸೆ ಮೂಡಿಸಿದರು. ಆದರೆ ಅನಂತರದ ಎರಡೂ ಗೇಮ್‌ಗಳಲ್ಲಿ ತಿರುಗಿಬಿದ್ದ ಮರಿನ್‌ ಸತತ ಗೆಲುವಿನ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದರು. ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಈ ಸಾಧನೆಯೊಂದಿಗೆ ಸಿಂಧು ಬ್ಯಾಡ್ಮಿಂಟನ್‌ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಶಟ್ಲರ್‌ ಎನಿಸಿಕೊಂಡರು.

ಕುಸ್ತಿಪಟು ಸಾಕ್ಷಿ ಮಲಿಕ್‌ ಕೂಡ ಬೆಳ್ಳಿ ಪದಕ ಜಯಿಸಿದರು. ಈ ಕೂಟದಲ್ಲಿ ಭಾರತಕ್ಕೆ ಕೇವಲ 2 ಪದಕಗಳಷ್ಟೇ ಒಲಿದು ಬಂದಿತು.

– ಅಭಿ

Advertisement

Udayavani is now on Telegram. Click here to join our channel and stay updated with the latest news.

Next