Advertisement
ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ಪೋಟೋ ಹಾಕಿ, ಕೋವಿಡ್ 19 ವೈರಸ್‌ದಿಂದ ಬಳಲುತ್ತಿರುವ ಪ್ರಪಂಚದ ಅತಿ ಸುಂದರ ಮಗುವಿಗಾಗಿ ಎಲ್ಲರೂ ಪ್ರಾರ್ಥಿಸಿ. ಮಗು ಬೇಗ ಚೇತರಿಸಿಕೊಳ್ಳಲಿ ಎಂಬ ಹಾರೈಕೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸಾವಿರಾರು ಜನರು ಪೋಸ್ಟ್ ಅನ್ನು ಬೇರೊಂದಿಗೆ ಹಂಚಿ, ಮಗು ಗುಣಮುಖವಾಗಲಿ ಎಂದೂ ಹಾರೈಸಿದ್ದರು.
ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ತನ್ನ ಸಾಮಾಜಿಕ ತಾಣದಲ್ಲಿ ಕಂಡಾಗ ಮಗುವಿನ ಆರೋಗ್ಯ ಕುರಿತ ನೂರಾರು ಪ್ರಶ್ನೆಗಳಿದ್ದವು. ಇವೆಲ್ಲವನ್ನೂ ಗಮನಿಸಿದ ತಾಯಿ ತನ್ನ ಮಗಳು ಹಾಲು ಕುಡಿಯುತ್ತಿರುವ ಪೋಟೋವನ್ನು ಪ್ರಕಟಿಸಿ, ನನ್ನ ಮಗಳು ಆರೋಗ್ಯ ಹಾಗೂ ಸುರಕ್ಷಿತವಾಗಿದ್ದಾಳೆ ಎಂದು ತಿಳಿಸಿ ವೈರಲ್ ಸುದ್ದಿಗೆ ಗುದ್ದು ನೀಡಿದ್ದಾರೆ.