Advertisement

ಬೀಜಾಡಿ; ಜೋಕಾಲಿ ಆಡುತ್ತಿದ್ದ ಬಾಲಕಿಗೆ ಕಾರು ಢಿಕ್ಕಿ, ಸಾವು

03:24 PM Apr 27, 2022 | Team Udayavani |

ಕುಂದಾಪುರ: ಮನೆಯಂಗಳದ ಬದಿ ಮರಕ್ಕೆ ಸೀರೆ ಕಟ್ಟಿ ಜೋಕಾಲಿಯಾಡುತ್ತಿದ್ದ ಬಾಲಕಿಗೆ ಕಾರು ಢಿಕ್ಕಿಯಾಗಿ ಮೃತಪಟ್ಟ ಘಟನೆ ಬೀಜಾಡಿಯಲ್ಲಿ ಸಂಭವಿಸಿದೆ.

Advertisement

ಇದನ್ನೂ ಓದಿ: ವಿದ್ಯುತ್‌ ಕೊರತೆಯಿಲ್ಲ, ಲೋಡ್‌ ಶೆಡ್ಡಿಂಗ್‌ ಪ್ರಶ್ನೆಯೇ ಇಲ್ಲ: ಸುನಿಲ್‌ ಕುಮಾರ್‌

ಬೀಜಾಡಿ ಗ್ರಾಮದ ನಿರಸ್ವಾಲೆ ರಸ್ತೆ ಶೆಟ್ಟಿಬೆಟ್ಟು ಮನೆಯ ಪ್ರಾಧಾನ್ಯ (9) ಮೃತ ಬಾಲಕಿ. ಬೇಸಗೆ ರಜೆಯಾದ್ದರಿಂದ ಪ್ರಾಧಾನ್ಯ ಮನೆಯಲ್ಲಿದ್ದು, ಇತರ ಮಕ್ಕಳೊಂದಿಗೆ ಮನೆಯ ಅಂಗಳದಲ್ಲಿರುವ ಮರಕ್ಕೆ ಸೀರೆಯಿಂದ ಜೋಕಾಲಿ ಕಟ್ಟಿ ಆಡುತ್ತಿದ್ದಳು.

ಆಕೆಯ ಸಂಬಂಧಿ ಸಂತೋಷ್‌ ನಿಲ್ಲಿಸಿದ್ದ ಹೊಂಡಾ ಕಾರನ್ನು ಒಮ್ಮೆಲೇ ಅಜಾಗರೂಕತೆಯಿಂದ ಚಲಾಯಿಸಿ ಜೋಕಾಲಿ ಆಡುತ್ತಿದ್ದವಳಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಆಕೆ ಅಂಗಾತ ಬಿದ್ದು ತಲೆಗೆ ಗಂಭೀರ ಗಾಯಗಳಾಗಿತ್ತು. ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊ ಯ್ದಿದಿದ್ದು ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆಂದು ತಿಳಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next