Advertisement

ಬಿಜೆಪಿ ಬೆಂಬಲಿಸಿ ಸೆಲೆಬ್ರಿಟಿಗಳ ಗೆಟ್‌ ಟುಗೆದರ್‌ : ಖಲಿ,ಬೋನಿ ಭಾಗಿ

09:21 AM May 06, 2019 | Vishnu Das |

ಹೊಸದಿಲ್ಲಿ: ಬಿಜೆಪಿ ಬೆಂಬಲಿಸಿ ಹಲವು ತಾರೆಗಳು ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಒಂದೆಡೆ ಸೇರಿ ಚರ್ಚೆ ನಡೆಸಿದ್ದಾರೆ. ಬಾಲಿವುಡ್‌ ದಿಗ್ಗಜ ನಿರ್ಮಾಪಕ ಬೋನಿ ಕಪೂರ್‌, ಕುಸ್ತಿ ಪಟು ಗ್ರೇಟ್‌ ಖಲಿ ಸೇರಿದಂತೆ ಹಲವು ಮಂದಿ ಕಲಾವಿದರು ಭಾಗಿಯಾಗಿದ್ದರು.

Advertisement

ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಲಾಗಿದ್ದ ಹರಿಯಾಣದ ನೃತ್ಯಗಾತಿ ಸ್ವಪ್ನಾ ಚೌಧರಿ ಅವರು ಸಮಾರಂಭದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಬಿಜೆಪಿ ಅಭ್ಯರ್ಥಿಯಾಗಿರುವ ಜಯಪ್ರಾದಾ ಅವರು ಸಮಾರಂಭದಲ್ಲಿ ಹಾಜರಿದ್ದರು.

ಕೆಲ ನಿರ್ಮಾಪಕರು, ಬರಹಗಾರರು,ಸಂಗೀತ ಕ್ಷೇತ್ರದ ಸಾಧಕರು ಮೋದಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next