Advertisement

ಅಂಬಾನಿ ನಿವಾಸದ ಬಳಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್

11:30 PM Feb 27, 2021 | Team Udayavani |

ಹೊಸದಿಲ್ಲಿ: ಉದ್ಯಮಿ ಮುಕೇಶ್‌ ಅಂಬಾನಿ ನಿವಾಸದ ಹತ್ತಿರ ಗುರುವಾರ ಅನುಮಾನಾಸ್ಪದ­ವಾಗಿ ಕಂಡುಬಂದಿದ್ದ ಎಸ್‌ಯುವಿ ಕೇಸ್‌ನ ತನಿಖೆ ಮುಂದುವರಿ­ದಷ್ಟೂ ಹೊಸ ಹೊಸ ಕುತೂಹಲ­ಕಾರಿ ವಿಚಾರಗಳು ಹೊರಬರುತ್ತಿವೆ.

Advertisement

ಫೆ. 24ರ ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಆ ಕಾರು, ಅಂಬಾನಿ ನಿವಾಸದ ಹತ್ತಿರದಲ್ಲಿರುವ ಕಾರ್ಮಿಕೆಲ್‌ ರಸ್ತೆಯಲ್ಲಿರುವ ವಿಜಯ್‌ ಸ್ಟೋರ್ಸ್‌ ಎಂಬ ದಿನಸಿ ಅಂಗಡಿಯ ಮುಂದೆ ಬಂದು ನಿಂತಿದೆ. ದಿನಸಿ ಅಂಗಡಿಯ ಬಾಗಿಲಿನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮರಾದಲ್ಲಿ ಇದು ಸೆರೆಯಾಗಿದೆ. ಹಾಗೆ ಬಂದು ನಿಂತ ಕಾರಿನಿಂದ ಚಾಲಕ ಕೆಳಗಿಳಿದಿಲ್ಲ. ರಾತ್ರಿ 3 ಗಂಟೆಯವರೆಗೆ ಅದರಲ್ಲೇ ಇದ್ದಾನೆ. ಅನಂತರ ಇಳಿದು ಹೊರಟುಹೋಗಿದ್ದಾನೆ. ಆತ ತಲೆಗವಚ ಹೊಂದಿರುವ ಜರ್ಕಿನ್‌ ಮಾದರಿಯ ಹೂಡಿ ದಿರಿಸು ಧರಿಸಿದ್ದರಿಂದ ಹಾಗೂ ಅದು ರಾತ್ರಿ ವೇಳೆ ಆಗಿದ್ದರಿಂದ ಆತನ ಗುರುತು ಪತ್ತೆಯಾಗಿಲ್ಲ. ಆದರೆ ಆತನನ್ನು ಸದ್ಯದಲ್ಲೇ ಶೋಧಿಸಿ ಬಂಧಿಸುವುದಾಗಿ ಮುಂಬಯಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಉದ್ಯೋಗಿಗಳಿಗೆ ಗರಿಷ್ಠ ದುಡಿಮೆ,ಕನಿಷ್ಠ ವೇತನ! 2020-21ರ ILO ವರದಿಯಲ್ಲಿ ಮಾಹಿತಿ

ಮಾಹಿತಿ ಬಹಿರಂಗ: ಎಸ್‌ಯುವಿನಲ್ಲಿ ದೊರಕಿರುವ, ಮುಕೇಶ್‌ ಹಾಗೂ ಅವರ ಪತ್ನಿ ನೀತು ಅಂಬಾನಿಯವರನ್ನು ಉದ್ದೇಶಿಸಿ ಬರೆಯಲಾಗಿರುವ ಬೆದರಿಕೆ ಪತ್ರದ ಕೆಲವು ಮಾಹಿತಿ ಬಹಿರಂಗವಾಗಿವೆ. ಎಸ್‌ಯುವಿಯಲ್ಲಿ ಸಿಕ್ಕಿರುವ 20 ಜಿಲೆಟಿನ್‌ ಕಡ್ಡಿಗಳನ್ನು ನಾವು ಜೋಡಿಸಿಲ್ಲ. ಆದರೆ ಮುಂದೆ ಇವನ್ನು ಜೋಡಿಸಿ ತಂದು ದಾಳಿ ಮಾಡುವುದು ನಮಗೆ ದೊಡ್ಡ ವಿಷಯವೇನಲ್ಲ ಎಂಬರ್ಥದಲ್ಲಿ ಪತ್ರದಲ್ಲಿ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next