ಹುಣಸೂರು: ನಾಗಹೊಳೆಯಲ್ಲಿ ನಡೆದ ಪ್ರಥಮ ಪಕ್ಷಿ ಸಮೀಕ್ಷೆ ಯಶಸ್ವಿಯಾಗಿದ್ದು. ಹೊಸ ಪ್ರಭೇದದ ಪಕ್ಷಿಗಳು ಪತ್ತೆಯಾಗಿರುವ ಸ್ಥಳಗಳನ್ನು ಕೇಂದ್ರೀಕೃತಗೊಳಿಸಿಕೊಂಡು ಮತ್ತಷ್ಟು ಸಮೀಕ್ಷೆ ನಡೆಸುವ ಅವಶ್ಯವಿದ್ದು, ಪ್ರತಿವರ್ಷ ನಡೆಸುವ ಉದ್ದೇಶ ಇದೆ ಎಂದು ಹುಲಿಯೋಜನೆ ನಿರ್ದೇಶಕ ಡಿ.ಮಹೇಶ್ ಕುಮಾರ್ ತಿಳಿಸಿದರು.
ವೀರನಹೊಸಹಳ್ಳಿ ವಲಯ ಕಚೇರಿಯಲ್ಲಿ ನಡೆದ ಪಕ್ಷಿ ಸಮೀಕ್ಷೆ ಸಮಾರೋಪದಲ್ಲಿ ಮಾತನಾ ಡಿದ ಅವರು, ನಾಗರಹೊಳೆ ಎಂದರೆ ಬರೀ ಹುಲಿ, ಆನೆ ಅಲ್ಲ, ಇಲ್ಲಿ ಸಾಕಷ್ಟು ಪಕ್ಷಿ ಪ್ರಭೇದಗಳಿವೆ. ಅವು ಗಳ ಬಗ್ಗೆ ತಿಳಿದುಕೊಳ್ಳುವ, ಇತರರಿಗೆ ಅರಿವು ಮೂಡಿ ಸುವ ಸಲುವಾಗಿ ಮೊದಲ ಬಾರಿಗೆ ಇ-ಬರ್ಡ್ ಆಫ್ ಮೂಲಕ ಎಕೋ ವಾಲೆಂಟರಿ ಇಂಡಿಯಾ ಟ್ರಸ್ಟ್‌ನ ಸಹಕಾರದಿಂದ ಅರ್ಹ ಸ್ವಯಂ ಸೇವಕರ ಮೂಲಕ ಪಕ್ಷಿ ಸಮೀಕ್ಷೆ ನಡೆಸಲಾಗಿದೆ.
ಹುಲಿ ಸಂರಕ್ಷಣೆಯಲ್ಲಿ ದೇಶದಲ್ಲಿ 3ನೇ ಸ್ಥಾನಪಡೆದಿರುವ ಉದ್ಯಾನವನ ಇದೀಗ ಪಕ್ಷಿ ಸಮೀಕ್ಷೆಯಿಂದಆಹಾರ ಸರಪಳಿಯ ಹಿನ್ನೆಲೆಯಲ್ಲಿ ಉದ್ಯಾನ ನಿರ್ವ ಹಣೆಗೆ ಸಾಕಷ್ಟು ಅನುಕೂಲವಾಗಿದೆ ಎಂದರು. ಎಸಿಎಫ್ ಮಹದೇವ್, ವಲಯ ಅರಣ್ಯಾಧಿ ಕಾರಿಗಳಾದ ಸಿದ್ದರಾಜು, ಅಮಿತ್‌ಗೌಡ, ಕಿರಣ್ ಕುಮಾರ್, ನ್ಯಾಚುರಲಿಸ್ಟ್ ಗೋಪಿ ಮಾತನಾಡಿ, ಬರೀ ಹುಲಿ ಸಂರಕ್ಷಣೆಯನ್ನೇ ಗುರಿಯಾಗಿಸಿ ಕೊಂಡಿದ್ದ ಇಲಾಖೆಗೆ ಪಕ್ಷಿ ಸಮೀಕ್ಷೆಯಿಂದ ಪಾಠ ಕಲಿತಂತಾ ಗಿದ್ದು, ನಾಶವಾಗುತ್ತಿರುವ ಪಕ್ಷಿಗಳ ಸಂತತಿ ಸಂರಕ್ಷಣೆಗೆ ಕಾರ್ಯಕ್ರಮ ರೂಪಿಸಲು ಇಲಾಖೆಗೆ ನೆರವಾ ಗುವ ಜೊತೆಗೆ ಇತರರಿಗೂ ಪರಿಚಯಿಸಲು ನೆರವಾಗಿದೆ ಎಂದರು.
ಇದನ್ನೂ ಓದಿ:ಅಕ್ರಮ ಗಣಿಗಾರಿಕೆಗೆ ಕಾಂಗ್ರೆಸ್ ಸರ್ಕಾರ ಕಾರಣ
ಇದೇ ವೇಳೆ, ಪಕ್ಷಿ ಸಮೀಕ್ಷೆಯಲ್ಲಿ ಅತಿ ಹೆಚ್ಚು ಪಕ್ಷಿಗಳ ಸಮೀಕ್ಷೆ ನಡೆಸಿದ ಬಂಡೀಪುರದ ಎಸ್. ಸಂಜಯ್ ಹಾಗೂ ಮೈಸೂರಿನ ಬಿ.ಎಸ್. ರೇವತ್ ಅವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸಿಎಫ್‌ಗಳಾದ ಗೋಪಾಲ್, ಸತೀಶ್, ಮಹದೇವ್, ಇಕೋ ವಾಲಂಟಿಯರ್ ಇಂಡಿಯಾದ ಕೆ.ವಿ.ರಾಜು ಸೇರಿದಂತೆ ಎಲ್ಲ ವಲಯಗಳ ಅರಣ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.