Advertisement
ಗುಣಲಕ್ಷಣಬಿಳಿ, ಕೆಂಪು, ಕಪ್ಪು, ಕಂದು ಬಣ್ಣದ ಮಚ್ಚೆಗಳು ದೇಹದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಇದರಿಂದ ತುರಿಕೆ, ಉರಿ ಉಂಟಾಗಬಹುದು. ತುರಿಸಿದರೆ ನೋವು ಹೆಚ್ಚಾಗಿ, ರಕ್ತ ಜಿನುಗುವ ಸಾಧ್ಯತೆಯೂ ಇರುತ್ತವೆ. ಮುಖ್ಯವಾಗಿ ಕುತ್ತಿಗೆ, ಬೆನ್ನು, ಭುಜ, ಕಾಲಿನಲ್ಲಿ, ಸೊಂಟದ ಭಾಗದಲ್ಲಿ ಫಂಗಸ್ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಎಳೆ ಮಕ್ಕಳಲ್ಲಿ ಈ ಶಿಲೀಂಧ್ರಗಳ ಕಾಟ ಹೆಚ್ಚಾಗಿರುತ್ತದೆ. ಮಕ್ಕಳ ನಾಲಿಗೆ ಮೇಲೆ, ಬಾಯಿಯ ಒಳಭಾಗದಲ್ಲಿ ಬಿಳಿ ಬಣ್ಣದ ಲೇಪನ ಕಂಡುಬರುತ್ತವೆ. ಇದನ್ನು ನಿವಾರಿಸಲು, ದಿನನಿತ್ಯ ದೇಹ ಶುದ್ಧಿಯ ಕಡೆ ಗಮನ ಹರಿಸಬೇಕು. ಸ್ನಾನ ಮಾಡುವಾಗ, ಹಲ್ಲು ತೊಳೆಯುವಾಗ ಸರಿಯಾಗಿ ಶುಚಿಗೊಳಿಸಬೇಕು. ಇದ ರಿಂದ ಚರ್ಮದ ಫಂಗಸ್ ಮಕ್ಕಳಿಗೆ ಬಾಧಿಸದಂತೆ ತಡೆಗಟ್ಟಬಹುದು.
ಚರ್ಮದಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳುವುದು ಅಗತ್ಯ. ಸ್ನಾನ ಮಾಡಿ, ಕೈಕಾಲು ತೊಳೆದು ಹಾಗೇ ಕುಳಿತುಕೊಳ್ಳುವುದು ಉತ್ತಮ ಲಕ್ಷಣ ವಲ್ಲ. ಒಂದು ವೇಳೆ ಹೀಗೆ ಮಾಡಿದರೆ ನೀರಿನಲ್ಲಿರುವ ಶಿಲೀಂಧ್ರಗಳು ಬಹು ಬೇಗನೆ ಬೆಳೆಯುತ್ತವೆ. ಇಂತಹ ಹಲವು ಸಕಾಲಿಕ ಕ್ರಮದ ಮೂಲಕ ಇವುಗಳನ್ನು ಶಮನ ಮಾಡಬಹುದು. ಜತೆಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಲೇಬೇಕು. ಶಿಲೀಂಧ್ರಗಳ ಹಾವಳಿಯಿಂದ ಚರ್ಮದ ಸೋಂಕು ಕಂಡುಬಂದ ತತ್‌ಕ್ಷಣ ವೈದ್ಯರನ್ನು ಕಾಣುವುದು ಒಳಿತು. ಹೆಚ್ಚಾದಂತೆ ನೋವಿನ ಕಾಟ ಹೆಚ್ಚು. ಇದಕ್ಕೆ ಅವಕಾಶ ನೀಡದಿರುವುದು ಒಳಿತು. ದಿನನಿತ್ಯದ ಜೀವನದಲ್ಲಿ ಅಳವಡಿಸಬೇಕಾದ ಸಿಂಪಲ್ ಸೂತ್ರಗಳಿವು. ಇದೇನು ಮಹಾ ಎಂದು ಹೇಳಿಕೊಳ್ಳುವಂತೆಯೂ ಇಲ್ಲ. ಇಂತಹ ಸಣ್ಣ ವಿಚಾರಗಳು, ಆರೋಗ್ಯ ಹಾಗೂ ತ್ವಚೆ ರಕ್ಷಣೆ ವಿಚಾರದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.
Related Articles
- ಟವೆಲ್, ಸಾಬೂನ್, ಬಾಚಣಿಗೆ ಪ್ರತ್ಯೇಕವಾಗಿ ಇಡುವುದು ಉತ್ತಮ.
- ಟವೆಲ್, ಕಾಲುಚೀಲ, ಕರವಸ್ತ್ರ, ಒಳಉಡುಪುಗಳನ್ನು ಪ್ರತಿನಿತ್ಯ ಸ್ವತ್ಛಗೊಳಿಸಬೇಕು.
- ಮಧುಮೇಹಿಗಳು ನಿಯಮಿತ ವಾಗಿ ರಕ್ತದ ಸಕ್ಕರೆ ಅಂಶವನ್ನು ಪರೀಕ್ಷೆ ಮಾಡಿಕೊಳ್ಳಬೇಕು.
-ಆ್ಯಂಟಿಬಯಾಟಿಕ್, ಸ್ಟಿರಾಯ್ಡ ಬಳಕೆಯ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ.
Advertisement