Advertisement
ಹಕ್ಲಾಡಿ, ನೂಜಾಡಿ, ಜಡ್ಕಲ್, ಮುದೂರು, ಹೆಂಗವಳ್ಳಿ, ಹಳ್ಳಿಹೊಳೆ, ಯಡಮೊಗೆ, ಹೇರಂಜಾಲು, ಕಾಲ್ತೋಡು ಮತ್ತಿತರ ಕಡೆಗಳಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ. ಹಾಗಾಗಿ ಈ ಭಾಗದಿಂದ ಕುಂದಾಪುರ ಅಥವಾ ಬೇರೆ ಪರೀಕ್ಷಾ ಕೇಂದ್ರಗಳಿಗೆ ಬರುವ ಮಕ್ಕಳಿಗೆ ಸಮಸ್ಯೆಯಾಗಲಿದೆ. ಮುದೂರು, ಜಡ್ಕಲ್ ಭಾಗದ ವಿದ್ಯಾರ್ಥಿಗಳಿಗೆ ಕೊಲ್ಲೂರು ಪ್ರೌಢಶಾಲೆಯಲ್ಲಿ ಪರೀಕ್ಷೆ ನಡೆಯಲಿದೆ. ಗೋಳಿಯಂಗಡಿ, ಬೆಳ್ವೆ, ಅಲಾºಡಿ, ಹೆಂಗವಳ್ಳಿ ಭಾಗದವರಿಗೆ ಆವರ್ಸೆಯಲ್ಲಿ ಪರೀಕ್ಷೆ ನಡೆಯಲಿದೆ. ಆರ್ಡಿ, ಹಾಲಾಡಿ ಭಾಗದವರಿಗೆ ಬಿದ್ಕಲ್‌ಕಟ್ಟೆಯಲ್ಲಿ ಪರೀಕ್ಷೆ ನಡೆಯಲಿದೆ. ಇಲ್ಲಿನ ಕೆಲ ಕಡೆಗಳಲ್ಲಿ ಬಸ್ ಸಂಚಾರ ಇಲ್ಲದಿದ್ದರೆ, ಮತ್ತೆ ಕೆಲವೆಡೆಗಳಲ್ಲಿ ಮಕ್ಕಳಿಗೆ ಅನುಕೂಲ ಕರ ಸಮಯದಲ್ಲಿ ಬಸ್ಸಿಲ್ಲ.
ಅವಿಭಜಿತ ಕುಂದಾಪುರ ತಾಲೂಕಿನ 9 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ನಡೆಯಲಿದ್ದು, ಕುಂದಾಪುರ ಸರಕಾರಿ ಪ.ಪೂ., ಭಂಡಾರ್‌ಕಾರ್ ಕಾಲೇಜು, ಆರ್.ಎನ್. ಶೆಟ್ಟಿ ಪ.ಪೂ. ಕಾಲೇಜು, ಬೈಂದೂರು, ಶಿರೂರು, ನಾವುಂದ, ವಂಡ್ಸೆ, ಬಿದ್ಕಲ್‌ಕಟ್ಟೆ, ಕೋಟೇಶ್ವರ ಪ.ಪೂ. ಕಾಲೇಜುಗಳು ಪರೀಕ್ಷಾ ಕೇಂದ್ರಗಳಾಗಿವೆ. ಕುಂದಾಪುರ : 2,457 ವಿದ್ಯಾರ್ಥಿಗಳು
ಎಸೆಸೆಲ್ಸಿ ಪರೀಕ್ಷೆಗೆ ಕುಂದಾಪುರ ವಲಯದಲ್ಲಿ 8 ಕೇಂದ್ರಗಳಿದ್ದು, ಹೆಚ್ಚುವರಿಯಾಗಿ ಒಂದೆರಡು ಕೇಂದ್ರಗಳನ್ನು ಮಾಡಲಾಗಿದೆ. ಕುಂದಾಪುರ ಬೋರ್ಡ್ ಹೈಸ್ಕೂಲ್, ಸೈಂಟ್ ಮೇರಿಸ್, ಪಬ್ಲಿಕ್ ಶಾಲೆ ಕೋಟೇಶ್ವರ, ಬಿದ್ಕಲ್‌ಕಟ್ಟೆ, ಶಂಕರನಾರಾಯಣ, ಸಿದ್ದಾಪುರ, ಬಸೂÅರು, ಗಂಗೊಳ್ಳಿ ಕೇಂದ್ರ ಗಳಲ್ಲಿ ಒಟ್ಟು 2,457 ಮಂದಿ ಪರೀಕ್ಷೆ ಬರೆಯಲಿದ್ದಾರೆ.
Related Articles
ಬೈಂದೂರು ವಲಯದಲ್ಲಿ 8 ಕೇಂದ್ರಗಳಿದ್ದು, ಬೈಂದೂರು ಸರಕಾರಿ ಪ್ರೌಢಶಾಲೆ, ರತ್ತುಬಾಯಿ ಜನತಾ ಪ್ರೌಢಶಾಲೆ, ಉಪ್ಪುಂದ ಜೂ| ಕಾಲೇಜು, ಕಂಬದಕೋಣೆ ಜೂ| ಕಾಲೇಜು, ನಾವುಂದ ಜೂ| ಕಾಲೇಜು, ತಲ್ಲೂರು ಸರಕಾರಿ ಪ್ರೌಢಶಾಲೆ, ವಂಡ್ಸೆ ಜೂನಿಯರ್ ಕಾಲೇಜು ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆಗಳಲ್ಲಿ ಒಟ್ಟು 2,060 ಮಂದಿ ವಿದ್ಯಾರ್ಥಿ ಗಳು ಪರೀಕ್ಷೆ ಬರೆಯಲಿದ್ದಾರೆ.
Advertisement
ಬಸ್ಸಿಲ್ಲದೆ ಸಮಸ್ಯೆನಮ್ಮ ಮನೆ ಹಕ್ಲಾಡಿ. ಪರೀಕ್ಷೆ ಇರುವುದು ಕುಂದಾಪುರದಲ್ಲಿ. ಈ ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ.. ಈ ಮಾರ್ಗದಲ್ಲಿ ವಿಶೇಷ ಬಸ್ ಕಲ್ಪಿಸಿದರೆ ಸಹಕಾರಿ ಯಾಗಲಿದೆ ಎಂದು ಹಕ್ಲಾಡಿಯ ವಿದ್ಯಾರ್ಥಿನಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು
ಈಗಾಗಲೇ ಇಲಾಖೆಯಿಂದ ಯಾವೆಲ್ಲ ಮಾರ್ಗಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದರ ಕುರಿತು ರೂಟ್‌ಗಳನ್ನು ಸಿದ್ಧಪಡಿಸಿ ಜಿಲ್ಲಾಡಳಿತದ ಗಮನಕ್ಕೆ ತಂದು, ಕೆಎಸ್‌ಆರ್‌ಟಿಸಿಗೆ ನೀಡಲಾಗಿದೆ. ಇನ್ನು ಏನಾದರೂ ಸಮಸ್ಯೆಗಳಿದ್ದರೆ ಆಯಾಯ ಕಾಲೇಜುಗಳ ಶಿಕ್ಷಕರ ಗಮನಕ್ಕೆ ತನ್ನಿ. ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು.
– ಭಗವಂತ ಕಟ್ಟಿಮನೆ, ಉಪ ನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ ಉಡುಪಿ