ಇಪ್ಪತ್ತೆಂಟು ವರ್ಷದ ರೇಖಾಗೆ ಮದುವೆಯಾಗಿ ಏಳು ತಿಂಗಳಾಗಿದೆ. ಮಿಲನವಾಗಿಲ್ಲ. ಗಂಡ ರಜಿತ್ ಬೋರ್ ಎನಿಸತೊಡಗಿದ್ದಾನೆ. ರಜಿತ್ ಅವಳನ್ನು ಒಲಿಸಿಕೊಳ್ಳಲು ಏನು ಮಾಡಿದರೂ ತಪ್ಪು ಎನಿಸುತ್ತದೆ. ಅವನನ್ನು ಹತ್ತಿರವೂ ಬಿಟ್ಟುಕೊಳ್ಳುವುದಿಲ್ಲ. ಸೆಕ್ಸ್ ಮಾಡಲು ಎಕ್ಸ್‌ಫ್ಯಾಕ್ಟರ್ ಇರಬೇಕು ಅಂತ ಹೇಳಿದ ಮೇಲೆ ಅವನು ತನ್ನ ತಾಯಿಯ ಹತ್ತಿರ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ಅತ್ತೆ ಇಬ್ಬರನ್ನೂ ನನ್ನ ಬಳಿ ಸಮಾಲೋಚನೆಗೆ ಕಳಿಸಿದ್ದರು.
ರೇಖಾಗೆ ಮದುವೆಯಲ್ಲಿ ನಿರಾಸಕ್ತಿಯ ಕಾರಣ ಕಾಲೇಜಿನಲ್ಲಿ ಓದುವಾಗ ರೇಖಾಗಿದ್ದ ಫಟಿಂಗ ಸ್ನೇಹಿತನ ನೆನಪು. ಮಸ್ತಿ- ಮೋಜಿನ ಹುಡುಗ. ಇವಳೇ ಪಂಚಪ್ರಾಣ ಎಂಬಂತಿದ್ದರೂ ಬೇರೆ ಹುಡುಗಿಯರ ಗೀಳೂ ಇತ್ತು. ರೇಖಾಗೆ ಸ್ನೇಹಿತನ ಜೊತೆ ಪ್ರೇಮವೆಷ್ಟು- ಕಾಮವೆಷ್ಟು ಗೊತ್ತಿರಲಿಲ್ಲ (ಕೆಲವು ಹುಡುಗರಿಗೆ ಸಂಬಂಧಗಳಿಗಿಂತ ಸ್ನೇಹದಲ್ಲಿ ನಂಬಿಕೆ ಜಾಸ್ತಿ. ಸ್ನೇಹ ಎಂದರೆ ದೈಹಿಕ ಸಂಪರ್ಕ ಕೂಡ ಇರುತ್ತದೆ. ಹುಡುಗಿಯರನ್ನು ಮಿಲನಕ್ಕೆ ಒಪ್ಪಿಸಲು ಚೆಂದವಾಗಿ ರಮಿಸುತ್ತಾರೆ. ಅದೇ ಪ್ರೇಮವಲ್ಲ). ಮನಸ್ಸಿಲ್ಲದೇ ಕಾಮಕ್ಕೊಡಿªದ ಸಂಬಂಧದಲ್ಲಿ ಹುಡುಗಿಯರಿಗೆ ಕೋಪ ಜಾಸ್ತಿ. ಆದರೂ ಹುಡುಗನ ಗೀಳು. ಜಗಳವಾಗಿ ಇವಳೇ ಅವನ ಸಹವಾಸ ತೊರೆದು ಅಪ್ಪ ಹುಡುಕಿದ ರಜಿತ್ ಜೊತೆ ಮದುವೆಯಾಗಿದ್ದಳು.
ರಜಿತ್ ನನ್ನ ಬಳಿ ಸಮಾಲೋಚನೆಗೆ ಬಂದಾಗ ಬಹಳ ನೊಂದಿದ್ದರು. ಆತ್ಮವಿಶ್ವಾಸ ಕಡಿಮೆಯಾಗಿತ್ತು. ರೇಖಾ ಅವರ ಮೊದಲ ಗೆಳತಿ- ಪತ್ನಿ. ಮದುವೆಗೆ ಮುಂಚೆ ಒಡನಾಡಲು ಏಳು ತಿಂಗಳಿದ್ದರೂ ಕರೆದಾಗಲೆÇÉಾ ಕೆಲಸದ ನೆಪ ಒಡ್ಡಿ¨ªಾಳೆ. ಮದುವೆಯ ಮೊದಲ ರಾತ್ರಿ ರಜಿತ್ ಅವಳನ್ನು ಮುಟ್ಟಲು, ಚೀರಿ ಗಲಾಟೆ ಮಾಡಿ, ಪ್ರಾಣಿಯಂತೆ ಆಡಬೇಡಿ ಎಂದು ಬಯ್ದು, ಶಾರೀರಿಕ ಸಂಪರ್ಕ ಈಗಲೇ ಬೇಡವೆಂದುಬಿಟ್ಟಿದ್ದಳು. ಮೊದಲು ಮನಸ್ಸು ಹೊಂದಿಕೊಳ್ಳಬೇಕು ಎಂಬ ಚಿಂತನೆಗೆ ಅವರೂ ಒಪ್ಪಿಕೊಂಡು ಮಾತಾಡಲು ಶುರುಮಾಡಿದಾಗ ನಿದ್ರೆ ನೆಪ. ಅವಳಿಗೆ ಬಹಳ ಅಹಂಕಾರವಿದೆಯೆಂದು ಕೊನೆಗೆ ರಜಿತ್ ವಿಚ್ಛೇದನಕ್ಕೂ ರೆಡಿಯಾಗಿದ್ದರು.
ರೇಖಾಳಲ್ಲಿ ತಪ್ಪಿತಸ್ಥ ಭಾವನೆಯಿತ್ತು. ರಜಿತ್ ಅವರಿಗೆ ಮೋಸಮಾಡಿದ್ದೇನೆಂದು ಬಹಳ ಅತ್ತುಬಿಟ್ಟಳು. ಬುದ್ಧಿವಂತೆಯಾದರೂ ಸ್ನೇಹಿತನಿಂದ ಮೋಸ ಹೋದೆನಲ್ಲಾ ಎಂಬ ಪೆದ್ದುತನದ ಛಾಯೆ ವ್ಯಕ್ತಿತ್ವದಲ್ಲಿ ಮನೆಮಾಡಿತ್ತು. ಇಬ್ಬರ ಕೋಪವನ್ನೂ ಇಳಿಸಿದೆ. ಆಡಿದ ಮಾತಿಗೆÇÉಾ ತಿರುಗೇಟು ಕೊಡುವ ರೇಖಾಳ ಚಟವನ್ನು ಕಡಿಮೆ ಮಾಡಿಸಿ, ಡ್ಯಾನ್ಸ್ ತರಗತಿಗೆ ಸೇರಲು ಇಬ್ಬರನ್ನೂ ಪ್ರೇರೇಪಿಸಿದೆ. ಚಾರಣ ಮಾಡಲು ಕೆಲವು ಐಡಿಯಾ ಕೊಟ್ಟೆ. ಉಚಿತ ನೇತ್ರ ಶಿಬಿರದಲ್ಲಿ ಒಟ್ಟಿಗೇ ಕಾರ್ಯಕರ್ತರಾಗಿ ಕೆಲಸ ಮಾಡಿದರು. ಸಾಮಾಜಿಕ ನೆಲೆಗಟ್ಟಿನಲ್ಲಿ ಒಬ್ಬರನ್ನೊಬ್ಬರು ಅರಿತು ತೃಪ್ತರಾಗಿ ಹನಿಮೂನ್ ನಡೆಯಿತು. ತಿಂಗಳಿಗೊಮ್ಮೆ ಇಬ್ಬರ ಅಮ್ಮಂದಿರೂ ಇವರೊಟ್ಟಿಗೆ ಬಂದಿರಲು ಸಲಹೆ ನೀಡಿದೆ. ಅಮ್ಮಂದಿರು ಹೊಂದಿಕೊಂಡರೆ ಮನೆಯಲ್ಲಿ ಮಾನಸಿಕ ನೆಮ್ಮದಿ ನೆಲೆಸುತ್ತದೆ. ನಾಲ್ವರಲ್ಲೂ ಗೆಳೆತನ ಮೂಡಿತು. ಮನೆ- ಮನ ಸ್ವತ್ಛವಾಯಿತು.
ಹಳೆಯ ಸಹವಾಸ- ಸ್ನೇಹ- ಸಂಬಂಧದ ಭೂತವನ್ನು ಮದುವೆಗೆ ಮುಂಚೆ ಬಿಡಿಸಿಕೊಳ್ಳಿ.
ಶುಭಾ ಮಧುಸೂದನ್