Advertisement

Social Media: ಸಾಮಾಜಿಕ ಜಾಲತಾಣ ಬಳಕೆಗೂ ಬೇಕಿದೆ ಚೌಕಟ್ಟು

12:53 PM Aug 30, 2024 | Team Udayavani |

ಇತ್ತೀಚೆಗೆ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎನ್ನುದು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ,  ಅಬಾಲವೃದ್ಧರವರೆಗೆ ಬಳಕೆ ಮಾಡುವ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣ ವರವೂ ಹೌದು ಶಾಪವೂ ಹೌದು ಏಕೆಂದರೆ ಬಳಕೆ ಮಾಡುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ ಸಾಮಾಜಿಕ ಮಾಧ್ಯಮವು ಪ್ರಪಂಚದಾದ್ಯಂತ ಜನರನ್ನು ಸಂಪರ್ಕಿಸುತ್ತದೆ, ಸಂಬಂಧಗಳು ಮತ್ತು ಸಮುದಾಯಗಳನ್ನು ಬೆಳೆಸುತ್ತದೆ.

Advertisement

ಈ ಸಾಮಾಜಿಕ ಜಾಲತಾಣಗಳು ವರವಾಗಿದೆ ಹಲವಾರು ಮಾಹಿತಿಯನ್ನು, ಸುದ್ದಿ ವಿಚಾರಗಳ ಮಾಹಿತಿಯನ್ನು ನೀಡುತ್ತದೆ, ಶಿಕ್ಷಣವನ್ನು ಪಡೆಯಬಹುದು, ಸಾಮಾಜಿಕ ಮಾಧ್ಯಮವು ಸ್ವಯಂ ಅಭಿವ್ಯಕ್ತಿ, ಸೃಜನಶೀಲತೆ ಮತ್ತು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಸಹಕಾರಿ. ತಮ್ಮದೇ ಬ್ರ್ಯಾಂಡ್‌ಗಳ ಪರಿಚಯ, ದಿನದ ಎಲ್ಲ  ವೇಳೆಯಲ್ಲೂ ಸುದ್ದಿ ಸಮಾಚಾರಗನ್ನು ಪಡೆಯಬಹುದು. ವ್ಯಾಪಾರದ ಅವಕಾಶವನ್ನು ಕಲ್ಪಿಸಿಕೊಡುವುದು ಹೆಚ್ಚಿನ ಮನೋರಂಜನೆ ವೀಡಿಯೋ, ಚಿತ್ರಣಗನ್ನು ನೀಡುವುದು ಹಲವಾರು ಸಂಸ್ಕೃತಿಗಳ ಪರಿಚಯ ವಿಭಿನ್ನ ಭಾಷೆಗಳ ಅರಿವನ್ನು ಮೂಡಿಸುವುದು ಪ್ರಸ್ತುತ ವಿಚಾರಗಳ ಬಗ್ಗೆ ಅಭಿವ್ಯಕ್ತ ಪಡಿಸುವುದು ಇಂತಹ ಹಲವಾರು ವಿಚಾರಗಳನ್ನು ಸಾಮಾಜಿಕ ಜಾಲತಾಣ ನೀಡುತ್ತದೆ.

ಜಾಲತಾಣಗಳು ಕೆಲವೊಮ್ಮೆ ಶಾಪವಾಗಿ ಪರಿಣಮಿಸಬಹುದು  ಏಕೆಂದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಮೊಬೈಲ್‌ ಮುಖ್ಯವಾಗಿದೆ. ಮೊಬೈಲ್ಗಳಿಂದ ದೂರ ಇರಿ ಎನ್ನುವ ದಿನಗಳಲ್ಲಿ ಮೊಬೈಲ್‌ ಇಲ್ಲದೆ ಶಿಕ್ಷಣವೆ ಇಲ್ಲ ಎಂಬಂತಾಗಿದೆ. ಹೆಚ್ಚು ಸಮಯ ಮೊಬೈಲ್‌ಗ‌ಳಲ್ಲಿ ಕಳೆಯುವುದರಿಂದ ಸಾಮಾಜಿಕ ಸಂಪರ್ಕಗಳು ದೂರವಾಗುವುದು,

ನಮ್ಮಲ್ಲಿ ಇರುವ ನೋವುಗಳನ್ನು ನಾವೇ ಅನುಭವಿಸುವುದು ಒಂಟಿತನವನ್ನು ಕಾಡಬಹುದು. ಜಾಲತಾಣಗಳು ಕೇವಲ ಕ್ಷಣಿಕ ಕಾಲದ ಸಂತೋಷವನ್ನು ನೀಡುವುದು ಕುಟುಂಬಿಕರು ಸ್ನೇಹಿತರ ಬಳಗವನ್ನು ಕಟ್ಟಿಕೊಂಡು ಸೇರಿ ಹಾಡು ಹರಟೆ ಹೊಡೆಯುವ ಸಮಯಗಳು ಜಾಲತಾಣಗಳು ಮೊಬೈಲ್‌ ಬಳಕೆಯಿಂದ ದೂರವಾಗಿವೆ. ..ಕಳೆದು ಹೋಗುತ್ತಿರುವ ವಿದ್ಯಮಾನಗಳಲ್ಲಿ ದಿನದಿಂದ ದಿನಕ್ಕೆ ಸಂಬಂಧಗಳ ಬೆಲೆ ಕಡಿಮೆಯಾಗಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಮೊಬೈಲ್‌ ಬಳಕೆಗಳು ಬದುಕಿನಲ್ಲಿ ಇತಿಮಿತಿಯಲ್ಲಿರಲಿ . ಆದರೆ ಮಾನವೀಯ ಸಂಬಂಧಗಳನ್ನು ಉಳಿಸಿಕೊಂಡು ಸಾಗುವ ಚಾಕಚಕ್ಯತೆ ನಮ್ಮಲ್ಲಿರಲಿ ನೆನಪಿಡಿ.

  -ಶ್ವೇತಾ, ಎಂಪಿಎಂ, ಕಾಲೇಜು

Advertisement

ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next