Advertisement
ಜೂನ್‌ನಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಅವರು ಜಂಟಿಯಾಗಿ ಆಯೋಜಿಸಿದ್ದ ಔತಣ ಕೂಟದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಈ ವೇಳೆ ಅವರ ಮಾತುಗಳನ್ನು ಆಲಿಸಲೆಂದೇ ಕಿಸ್ಸಿಂಗರ್ ಆಗಮಿಸಿದ್ದರು. ಪ್ರಧಾನಿ ಮೋದಿ ಅವರ ಬಗ್ಗೆ ತೀವ್ರ ಅಭಿಮಾನ ಹೊಂದಿದ್ದ ಕಿಸ್ಸಿಂಗರ್, ಮೋದಿ ನೇತೃತ್ವದಲ್ಲಿ ಭಾರತ-ಅಮೆರಿಕದ ಸಂಬಂಧ ಭದ್ರಪಡಿಸಲು ಕೂಡ ಅಮೆರಿಕ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದರು ಎನ್ನಲಾಗಿದೆ. ಇನ್ನು ಅಮೆರಿಕದ ಇತಿಹಾಸದಲ್ಲೇ ಏಕಕಾಲಕ್ಕೆ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ ಏಕೈಕ ವ್ಯಕ್ತಿ ಕಿಸ್ಸಿಂಗರ್ ಆಗಿದ್ದು, ವಿದೇಶಾಂಗ ನೀತಿಯಲ್ಲೂ ಬಹುದೊಡ್ಡ ಮಟ್ಟದ ಹಿಡಿತವನ್ನು ಹೊಂದಿದ್ದರು.
ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ಮೋದಿ ಹಾಗೂ ಭಾರತದ ಬಗ್ಗೆ ಅಭಿಮಾನ ಹೊಂದಿದ್ದ ಕಿಸ್ಸಿಂಗರ್ 1970ರ ಸಂದರ್ಭದಲ್ಲಿ ಬಂಗಾಳ ವಿಭಜನೆಯ ವೇಳೆ ಭಾರತದ ನಾಯಕತ್ವವನ್ನು ವಿರೋಧಿಸಿದ್ದರು. ಅಲ್ಲದೇ, ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಅವರ ವಿರುದ್ಧ ಮತ್ತು ಭಾರತೀಯರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡಿ, ಟೀಕೆಗೆ ಗುರಿಯಾಗಿದ್ದರು. ಕಿಸ್ಸಿಂಗರ್‌ಗೆ ನೊಬೆಲ್ ಪ್ರಶಸ್ತಿ ನೀಡುವಾಗ ನೊಬೆಲ್ ಸಮಿತಿಯ ಇಬ್ಬರು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದರು.